4ನೇ ಆ್ಯಶಸ್ ಟೆಸ್ಟ್: ಬೃಹತ್ ಮೊತ್ತದತ್ತ ದಾಪುಗಾಲಿರಿಸಿದ ಇಂಗ್ಲೆಂಡ್

Update: 2023-07-20 18:19 GMT

ಮ್ಯಾಂಚೆಸ್ಟರ್: ಆಸ್ಟ್ರೇಲಿಯ ವಿರುದ್ಧದ ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದ ಎರಡನೇ ದಿನವಾದ ಶುಕ್ರವಾರ ಆತಿಥೇಯ ಇಂಗ್ಲೆಂಡ್ ಆರಂಭಿಕ ಆಟಗಾರ ಝ್ಯಾಕ್ ಕ್ರಾಲಿಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತವೊಂದನ್ನು ಕಲೆ ಹಾಕುವ ಸೂಚನೆಯನ್ನು ನೀಡಿದೆ. ಕ್ರಾಲಿ 185 ರನ್ಗಳನ್ನು ಗಳಿಸಿದ್ದು, ಬ್ಯಾಟಿಂಗ್ ಮುಂದುವರಿಸಿದ್ದಾರೆ.

ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಇಂಗ್ಲೆಂಡ್ ದಿನದ ಮೂರನೇ ಹಾಗೂ ಕೊನೆಯ ಅವಧಿಯ ಆಟದ ವೇಳೆ ತನ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 2 ವಿಕೆಟ್ಗಳನ್ನು ಕಳೆದುಕೊಂಡು 320 ರನ್ಗಳನ್ನು ಗಳಿಸಿದೆ. ಆಟ ಮುಂದುವರಿದಿದೆ.

ಇದರೊಂದಿಗೆ ಅದು 3 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆಯನ್ನು ಗಳಿಸಿದೆ. ಅದೇ ವೇಳೆ, ಜೋ ರೂಟ್ ಅರ್ಧ ಶತಕ ಸಿಡಿಸುವ ಮೂಲಕ ಕ್ರಾಲಿಗೆ ಉತ್ತಮ ಜೊತೆ ನೀಡಿದ್ದಾರೆ. ಅವರು 69 ರನ್ ಗಳಿಸಿದ್ದು, ಬ್ಯಾಟಿಂಗ್ ಮುಂದುವರಿಸಿದ್ದಾರೆ.

ಮೊಯಿನ್ ಅಲಿ (54) ಕೂಡ ತಂಡದ ಮೊತ್ತಕ್ಕೆ ಅರ್ಧ ಶತಕದ ದೇಣಿಗೆ ನೀಡಿದ್ದಾರೆ. ಮಿಚೆಲ್ ಸ್ಟಾರ್ಕ್ ಇಂಗ್ಲೆಂಡ್ಗೆ ಆರಂಭಿಕ ಆಘಾತವನ್ನು ನೀಡಿದ್ದು ಬಿಟ್ಟರೆ, ಬಳಿಕ, ಎದುರಾಳಿ ಬ್ಯಾಟರ್ಗಳನ್ನು ನಿಯಂತ್ರಿಸಲು ಆಸ್ಟ್ರೇಲಿಯ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. 

ಸ್ಟಾರ್ಕ್ 74 ರನ್ಗಳನ್ನು ನೀಡಿ 2 ವಿಕೆಟ್ಗಳನ್ನು ಉರುಳಿಸಿದರು. ಆಸ್ಟ್ರೇಲಿಯ ತನ್ನ ಮೊದಲ ಇನಿಂಗ್ಸ್ನಲ್ಲಿ 317 ರನ್ಗಳನ್ನು ಗಳಿಸಿತ್ತು. ಮಾರ್ನಸ್ ಲಾಬುಶಾನ್ (51) ಮತ್ತು ಮಿಚೆಲ್ ಮಾರ್ಶ್ (51) ಅರ್ಧ ಶತಕಗಳನ್ನು ಸಿಡಿಸಿದರು. ಇಂಗ್ಲೆಂಡ್ನ ಕ್ರಿಸ್ ವೋಕ್ಸ್ 5 ವಿಕೆಟ್ಗಳನ್ನು ಪಡೆದರು.

ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಆಸ್ಟ್ರೇಲಿಯವನ್ನು ಮೊದಲು ಬ್ಯಾಟಿಂಗ್ಗೆ ಇಳಿಸಿದ್ದರು. ಐದು ಟೆಸ್ಟ್ಗಳ ಸರಣಿಯಲ್ಲಿ ಆಸ್ಟ್ರೇಲಿಯ 2-1ರ ಮುನ್ನಡೆಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News