62 ವರ್ಷಗಳ ಬಳಿಕ ದಿಲ್ಲಿ ಮತ್ತು ಮುಂಬೈಗೆ ಏಕಕಾಲದಲ್ಲಿ ಮುಂಗಾರು ಮಳೆಯ ಪ್ರವೇಶ

Update: 2023-06-26 09:59 GMT

Photo: PTI

ದಿಲ್ಲಿ/ಮುಂಬೈ: ಅಪರೂಪದ ಘಟನೆಯಲ್ಲಿ ಮುಂಗಾರು ಮಳೆಯು ಏಕಕಾಲದಲ್ಲಿ ದಿಲ್ಲಿ ಮತ್ತು ಮುಂಬೈ ನಗರಗಳನ್ನು ಪ್ರವೇಶಿಸಿದ್ದು, ಶನಿವಾರ ರಾತ್ರಿಯಿಡೀ ಉಭಯ ನಗರಗಳಲ್ಲಿ ಭಾರೀ ಮಳೆ ಸುರಿದಿದೆ.

ನಿಗದಿತ ಸಮಯಕ್ಕಿಂತ ಎರಡು ದಿನಗಳ ಮುನ್ನ ಮುಂಗಾರು ಮಳೆಯು ರಾಷ್ಟ್ರ ರಾಜಧಾನಿಯನ್ನು ಅಪ್ಪಳಿಸಿದ್ದರೆ, ಎರಡು ವಾರಗಳ ವಿಳಂಬದ ಬಳಿಕ ಮುಂಬೈಯನ್ನು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ತಿಳಿಸಿದೆ.

ಹಿಂದಿನ ಸಲ 1961, ಜೂ.21ರಂದು ಏಕಕಾಲದಲ್ಲಿ ಮುಂಗಾರು ಮಳೆಯು ಮುಂಬೈ ಮತ್ತು ದಿಲ್ಲಿಯನ್ನು ಆವರಿಸಿಕೊಂಡಿತ್ತು.

ರಾತ್ರಿ ಸುರಿದ ಮಳೆ ಬಿಸಿಲ ಬೇಗೆಯಿಂದ ತತ್ತರಿಸಿದ್ದ ದಿಲ್ಲಿ ಮತ್ತು ಸುತ್ತಲಿನ ಪ್ರದೇಶಗಳನ್ನು ತಂಪಾಗಿಸಿದೆ. ಗುರುಗ್ರಾಮದ ವಿವಿಧ ಪ್ರದೇಶಗಳು ಜಲಾವೃತಗೊಂಡಿರುವುದು ವರದಿಯಾಗಿದೆ.

ಕಳೆದ 24 ಗಂಟೆಗಳಲ್ಲಿ ಮುಂಬೈ ಮತ್ತು ಉಪನಗರಗಳಲ್ಲಿ ಸುರಿದ ಭಾರೀ ಮಳೆಯು ಹಲವು ಸ್ಥಳಗಳನ್ನು ಜಲಾವೃತಗೊಳಿಸಿದೆ ಮತ್ತು ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News