ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ; ದಕ್ಷಿಣ ಕನ್ನಡಕ್ಕೆ ಎಲ್.ಕೆ.ಅತೀಕ್, ಉಡುಪಿಗೆ ಡಾ.ಎಂ.ಟಿ.ರೇಜು
ಬೆಂಗಳೂರು, ಜೂ. 19: ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಇಲಾಖಾ ಮುಖ್ಯಸ್ಥರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರ-ಟಿ.ಕೆ.ಅನಿಲ್ ಕುಮಾರ್, ಬೆಂಗಳೂರು ಗ್ರಾಮಾಂತರ-ಸಲ್ಮಾ ಕೆ.ಫಹೀಮ್, ರಾಮನಗರ-ವಿ.ರಶ್ಮಿ ಮೋಹನ್, ಚಿತ್ರದುರ್ಗ-ಅಮಲಾನ್ ಆದಿತ್ಯ ಬಿಸ್ವಾಸ್, ಕೋಲಾರ-ಡಾ.ಏಕ್‍ರೂಪ್ ಕೌರ್, ಬೆಳಗಾವಿ-ಅಂಜುಮ್ ಪರ್ವೇಝ್, ಚಿಕ್ಕಬಳ್ಳಾಪುರ-ಡಾ.ಎನ್.ಮಂಜುಳಾ, ಶಿವಮೊಗ್ಗ-ಎಸ್.ಆರ್.ಉಮಾಶಂಕರ್, ದಾವಣಗೆರೆ-ಗುಂಜನ್ ಕೃಷ್ಣ, ಮೈಸೂರು-ಡಾ.ಎಸ್.ಸೆಲ್ವಕುಮಾರ್, ಮಂಡ್ಯ-ಡಾ.ಪಿ.ಸಿ.ಜಾಫರ್, ಚಾಮರಾಜನಗರ-ಎನ್.ಮಂಜುನಾಥ ಪ್ರಸಾದ್.
ಹಾಸನ-ಡಾ.ಎಂ.ಎನ್.ಅಜಯ್ ನಾಗಭೂಷಣ್, ಕೊಡಗು-ಡಾ.ಎನ್.ವಿ.ಪ್ರಸಾದ್, ಚಿಕ್ಕಮಗಳೂರು-ರಾಜೇಂದ್ರ ಕುಮಾರ್ ಕಠಾರಿಯಾ, ಉಡುಪಿ-ಡಾ.ಎಂ.ಟಿ.ರೇಜು, ದಕ್ಷಿಣ ಕನ್ನಡ-ಎಲ್.ಕೆ.ಅತೀಕ್, ತುಮಕೂರು-ಜಿ.ಸತ್ಯವತಿ, ಧಾರವಾಡ-ವಿ.ಅನ್ಬುಕುಮಾರ್, ಗದಗ-ಸಿ.ಶಿಖಾ, ವಿಜಯಪುರ-ಡಾ.ರಿಚರ್ಡ್ ವಿನ್ಸೆಂಟ್ ಡಿ’ಸೋಜಾ, ಉತ್ತರ ಕನ್ನಡ-ರಿತೇಶ್ ಕುಮಾರ್ ಸಿಂಗ್, ಬಾಗಲಕೋಟೆ-ಮುಹಮ್ಮದ್ ಮೊಹ್ಸಿನ್, ಕಲಬುರಗಿ-ಪಂಕಜ್‍ಕುಮಾರ್ ಪಾಂಡೆ, ಯಾದಗಿರಿ-ಮನೋಜ್ ಜೈನ್.
ರಾಯಚೂರು-ಡಾ.ಜೆ.ರವಿಶಂಕರ್, ಕೊಪ್ಪಳ-ನವೀನ್ ರಾಜ್ ಸಿಂಗ್, ಬಳ್ಳಾರಿ-ಡಾ.ಕೆ.ವಿ.ತ್ರಿಲೋಕ್ ಚಂದ್ರ, ಬೀದರ್-ಮುನೀಶ್ ಮೌದ್ಗಿಲ್, ಹಾವೇರಿ-ಡಾ.ಆರ್.ವಿಶಾಲ್ ಹಾಗೂ ವಿಜಯನಗರ ಜಿಲ್ಲೆಗೆ ಕೆ.ಪಿ.ಮೋಹನ್ ರಾಜ್ ಅವರನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.