ಪಾಕಿಸ್ತಾನ ಎ ತಂಡವನ್ನು 8 ವಿಕೆಟ್ನಿಂದ ಸೋಲಿಸಿದ ಭಾರತ ಎ

Update: 2023-07-19 18:06 GMT

ಕೊಲಂಬೊ: ಎಸಿಸಿ ಪುರುಷರ ಎಮರ್ಜಿಂಗ್ ಕಪ್ ಪಂದ್ಯಾವಳಿಯ ಬಿ ಗುಂಪಿನ ಪಂದ್ಯವೊಂದರಲ್ಲಿ ಬುಧವಾರ ಭಾರತ ಎ ತಂಡವು ಪಾಕಿಸ್ತಾನ ಎ ತಂಡವನ್ನು 8 ವಿಕೆಟ್ಗಳ ಭರ್ಜರಿ ಅಂತರದಿಂದ ಸೋಲಿಸಿದೆ.

ಆರಂಭಿಕ ಆಟಗಾರ ಸಾಯಿ ಸುದರ್ಶನ್ರ ಅಜೇಯ ಶತಕ (104 ರನ್) ಮತ್ತು ರಾಜವರ್ಧನ ಹಂಗಾರ್ಗೇಕರ್ ಐದು ವಿಕೆಟ್ ಗೊಂಚಿಲು ಭಾರತದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಗೆಲ್ಲಲು 206 ರನ್ಗಳನ್ನು ಗಳಿಸುವ ಗುರಿಯನ್ನು ಪಡೆದ ಭಾರತ ಎ ಆಕ್ರಮಣ ಆಟವನ್ನು ಆಡಿತು. ಅದು ಕೇವಲ 36.4 ಓವರ್ಗಳಲ್ಲಿ ಕೇವಲ 2 ವಿಕೆಟ್ಗಳನ್ನು ಕಳೆದುಕೊಂಡು 210 ರನ್ಗಳನ್ನು ಗಳಿಸಿ ಜಯಭೇರಿ ಬಾರಿಸಿತು.

ಸುದರ್ಶನ್ಗೆ ಉತ್ತಮ ಜೊತೆ ನೀಡಿದ ನಿಕನ್ ಜೋಸ್ ಅರ್ಧ ಶತಕ (53)ವೊಂದನ್ನು ಬಾರಿಸಿದರು. ಇನ್ನೋರ್ವ ಆರಂಭಿಕ ಅಭಿಶೇಕ್ ಶರ್ಮ 20 ರನ್ಗಳನ್ನು ಗಳಿಸಿದರೆ, ನಾಯಕ ಯಶ್ ದುಲ್ 21 ರನ್ ಗಳಿಸಿ ಅಜೇಯರಾಗಿ ಉಳಿದರು. ಪಾಕಿಸ್ತಾನದ ಪರವಾಗಿ ಮುಬಶ್ಶಿರ್ ಖಾನ್ ಮತ್ತು ಮೆಹ್ರಾನ್ ಮಮ್ತಾಝ್ ತಲಾ ಒಂದು ವಿಕೆಟ್ಗಳನ್ನು ಪಡೆದರು.

ಇದಕ್ಕೂ ಮೊದಲು, ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ, ರಾಜವರ್ಧನ್ ಹಂಗಾರ್ಗೇಕರ್ ಪಾಕಿಸ್ತಾನಿ ಬ್ಯಾಟರ್ಗಳ ಮೇಲೆ ಪ್ರಹಾರಗೈದು ಐದು ವಿಕೆಟ್ಗಳನ್ನು ಉರುಳಿಸಿದರು. ಅಂತಿಮವಾಗಿ ಪಾಕಿಸ್ತಾನಕ್ಕೆ 48 ಓವರ್ಗಳಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 205 ರನ್ ಗಳಿಸಲಷ್ಟೇ ಸಾಧ್ಯವಾಯಿತು.

48 ರನ್ ಗಳಿಸಿದ ಕಾಸಿಮ್ ಅಕ್ರಮ್ ತಂಡದ ಗರಿಷ್ಠ ರನ್ ಗಳಿಕೆದಾರರಾದರು. ಶಹೀಬ್ಝಾದ ಫರ್ಹಾನ್ 35, ಹಸೀಬುಲ್ಲಾ ಖಾನ್ 27, ಕಮ್ರಾನ್ ಗುಲಾಮ್ 15, ಮುಬಶ್ಶಿರ್ ಖಾನ್ 28 ಮತ್ತು ಮೆಹ್ರಾನ್ ಮಮ್ತಾಝ್ 25 ರನ್ಗಳನ್ನು ಗಳಿಸಿದರು. ಹಂಗಾರ್ಗೇಕರ್ 8 ಓವರ್ಗಳಲ್ಲಿ 42 ರನ್ಗಳನ್ನು ನೀಡಿ 5 ವಿಕೆಟ್ಗಳನ್ನು ಕೆಡವಿದರು. ಸಾಯಿ ಸುದರ್ಶನ್ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News