ಕನ್ನಡ ಅಭಿವೃದ್ಧಿ ಒಂದೆರಡು ಸಲಹೆಗಳು
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಂವೇದನಾಶೀಲ ಸ್ಕಾಲರ್ ಡಾ. ಬಿಳಿಮಲೆಯವರು ಅಧಿಕಾರ ಸ್ವೀಕರಿಸಿದ್ದಾರೆ. ಬಹುಕಾಲ ದೂರದ ದಿಲ್ಲಿಯಲ್ಲಿದ್ದ ಕಾರಣ ಅವರಿಗೆ ಭಾಷೆಯ ಹರಹು, ಆಳ, ವಿಸ್ತಾರಗಳ ವಿಶಿಷ್ಟ ತುಲನಾತ್ಮಕ ವಿವರಗಳೂ ಲಭ್ಯವಿದೆ. ಒಳನೋಟಗಳೂ ಇವೆ.
ಆದ್ದರಿಂದಲೇ ಬಿಳಿಮಲೆಯವರು ಅರ್ಥಪೂರ್ಣವಾದ ಕನ್ನಡದ ಕೆಲಸಗಳನ್ನು ಹಮ್ಮಿಕೊಂಡಾರೆಂಬ ನಂಬಿಕೆಗೆ ಪುರಾವೆಗಳಿವೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವೆಂದರೆ ನಾಡಿನ ಅಭಿವೃದ್ಧಿಯ ನೀಲನಕ್ಷೆಯನ್ನು ಭಾಷೆಯ ಆಯಾಮದ ಮೂಲಕ ನೋಡುವುದೇ ಆಗಿದೆ. ಈ ನಿಟ್ಟಿನಲ್ಲಿ ಅವರಿಗೇ ಹತ್ತಾರು ಹೊಳಹುಗಳಿರಬಹುದು. ನಾಡು-ನುಡಿಯ ಸುವಿಖ್ಯಾತ ಚಿಂತಕರಲ್ಲೂ ಹೊಳಹುಗಳಿರಬಹುದು. ಅವೆಲ್ಲವೂ ಒಮ್ಮುಖ ಹೆಣಿಗೆಯಲ್ಲಿ ಮುಂಬರುವ ದಿನಗಳಲ್ಲಿ ಪ್ರಕಾಶಗೊಳ್ಳಬಹುದು.
ನಾನು ಕೆಲವು ಣಚಿಟಿgibಟe ಆದ ಕಾರ್ಯಕ್ರಮಗಳ ಸಲಹೆ ನೀಡುತ್ತಿದ್ದೇನೆ.
1. ನಾಡಿನ ಗಡಿಭಾಗದ, ಇತರ ಭಾಷೆಗಳ ಹೊಕ್ಕುಬಳಕೆ ಇರುವ ಭಾಗಗಳಲ್ಲಿ ಅಲ್ಲಿನ ಶಾಲಾ-ಕಾಲೇಜುಗಳ ಮೂಲಕ ಭಾಷಾ ಪದಸಂಪದವನ್ನು ಕನ್ನಡದೊಳಕ್ಕೆ ತರುವುದು. ಕಾರಂತರೇ ಹಿಂದೆ ಹೇಳಿದ ಹಾಗೆ ಕನ್ನಡ ಪಠ್ಯದಲ್ಲಿ ಅ=ಅಳಿಲು ಎಂದು ಒಪ್ಪಿಸುವ ಕರಾವಳಿಯ ಹುಡುಗ ಹೊರಗೆ ಬಂದಾಗ ಕುಂಡಚ್ಚ ಅನ್ನುತ್ತಾನೆ. ಈ ಪ್ರದೇಶಗಳ ಭಾಷಾ ವಲಯಗಳಲ್ಲಿ ಪಶು, ಪಕ್ಷಿ ಅಡುಗೆ, ಮತ್ತಿತರ ಹತ್ತಾರು ಜೀವವ್ಯಾಪಾರಗಳಲ್ಲಿ ಬಳಸುವ ಸಾವಿರಾರು ಪದಗಳಿವೆ(ಗೆಳೆಯ ವಿಠಲ ಭಂಡಾರಿ ಅಂತಹ ಒಂದು ಪದಕೋಶ ವಿದ್ಯಾರ್ಥಿಗಳ ಮೂಲಕ ಮಾಡಿಸಿದ್ದ. ಅವನ ನೆನಪು ಹಸಿರು) ಕೊಳ್ಳೇಗಾಲದಿಂದ ಹಿಡಿದು ಜೊಯಿಡಾದ ವರೆಗೆ ಶಾಲಾಮಕ್ಕಳು ಈ ಪದಗಳನ್ನು ಶಾಲೆಯ ಔಪಚಾರಿಕ ಚೌಕಟ್ಟಿನೊಳಗೆ ತಾರದಂತೆ ನಮ್ಮ ಶಿಕ್ಷಕರೇ ಬಲು ದೊಡ್ಡ ತಡೆಗೋಡೆಯಾಗಿದ್ದಾರೆ. ಆದ್ದರಿಂದ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ನಿರ್ದೇಶನಾಲಯಗಳ ಸಹಯೋಗದೊಂದಿಗೆ ಈ ಪದಸಂಪದವನ್ನು ಕನ್ನಡದೊಳಕ್ಕೆ ತರುವ ಒಂದು ಸಾಂಸ್ಕೃತಿಕ ಆಂದೋಲನವನ್ನು ಹಮ್ಮಿಕೊಳ್ಳಬೇಕಿದೆ.
2. ಅಲ್ಪಸಂಖ್ಯಾತ(ಮುಖ್ಯತಃ ಮುಸ್ಲಿಮ್) ಬಾಹುಳ್ಯ ಇರುವ ಪ್ರದೇಶಗಳ ಶಾಲೆಗಳಲ್ಲಿ ಮತ್ತು ಸಮುದಾಯ ಮಟ್ಟದಲ್ಲಿ ಕನ್ನಡ ಕಲಿಕೆ ಸಂವಾದ, ಸಾಂಸ್ಕೃತಿಕ ಕೊಡುಕೊಳ್ಳುಗಳನ್ನು ಹೆಚ್ಚಿಸಬೇಕಿದೆ. ಇದರ ರೂಪುರೇಶೆಗಳನ್ನು ಸಂಬಂಧಿತ ಇಲಾಖೆ, ನಿಗಮಗಳ ಸಹಯೋಗದೊಂದಿಗೆ ನಿರ್ದಿಷ್ಟಪಡಿಸಬಹುದು.
3. ಇಂಗ್ಲಿಷ್ ಮಾಧ್ಯಮ ಶಾಲೆಗಳು ಮತ್ತು ವೃತ್ತಿಪರ ಶಿಕ್ಷಣ ನೀಡುವ (ಇಂಜಿನಿಯರಿಂಗ್ ಕಾಲೇಜುಗಳು ಇತ್ಯಾದಿ) ಸಂಸ್ಥೆಗಳಲ್ಲಿ ಕನ್ನಡದ ಸಾಂಸ್ಕೃತಿಕ ಅರಿವು ಮತ್ತು ಭಾಷಾ ಬಳಕೆಯ ಸುಖದ ಬಗ್ಗೆ ಮಧ್ಯಪ್ರವೇಶ ಮಾಡಬೇಕಿದೆ. ಈ ಮಕ್ಕಳು ಈಗಾಗಲೇ ಬೇರು ಕಡಿದುಕೊಂಡು ಛಿuಣ ಜಿಟoತಿeಡಿs ತರ ಆಗಿದ್ದಾರೆ. ದಿನಸಿ, ತರಕಾರಿಗಳನ್ನೂ ಇಂಗ್ಲಿಷ್ ಹೆಸರಲ್ಲಿ ಬಳಸುವ ವಿದ್ಯಮಾನ ಈಗಾಗಲೇ ಪ್ರಚಲಿತವಾಗಿದೆ.
4. ಕನ್ನಡೇತರ ಭಾಷಾ ಅಕಾಡಮಿಗಳು ಕನ್ನಡ ಸಾಹಿತ್ಯ ಅಕಾಡಮಿಯ ಕಾರ್ಯಕ್ರಮಗಳನ್ನು ಅನುಕರಿಸಿ ಪ್ರಶಸ್ತಿ, ಮೈಸೂರು ಪೇಟಗಳನ್ನು ತಲೆಗಿರಿಸುವ ಮಟ್ಟಕ್ಕೆ ಇವೆ. ದೇಶದ ಭಾಷಾ ಕೊಡು-ಕೊಳ್ಳು ಬಗ್ಗೆ ಅಪಾರ ವಿವರ ಹೊಂದಿರುವ ಬಿಳಿಮಲೆಯವರು ಈ ಎಲ್ಲಾ ಸಂಸ್ಥೆಗಳನ್ನೂ ಒಗ್ಗೂಡಿಸುವ (ಛಿoಟಿveಡಿgeಟಿಛಿe) ಮೂಲಕ ಪ್ರತಿಭಾವಂತ ಯುವ ಬರಹಗಾರರಿಗೆ ಕಲಿಕಾ ಫೆಲೋಶಿಪ್‌ಗಳನ್ನು ನೀಡುವುದರಿಂದ ಹಿಡಿದು ಎಲ್ಲಾ ಭಾಷಿಕ ಪ್ರತಿಭೆಗಳ ಕೊಡು-ಕೊಳು ಶಿಬಿರಗಳನ್ನು ಸೃಷ್ಟಿಸಬಹುದು
5. ಕನ್ನಡದ ಅಭಿವೃದ್ಧಿಯನ್ನು ಸಾಂಪ್ರದಾಯಿಕ ಓದಿನ ಮೂಲಕ ಅಳೆಯುವ ಕಾಲ ಹೊರಟು ಹೋಗಿದೆ. ಬಹುತೇಕ ಗಣಕಾಧಾರಿತ ಸಂವಹನಕ್ಕೆ ಸ್ಮಾರ್ಟ್ ಫೋನ್‌ಮೂಲಕ ನಾವು ತೆರೆದುಕೊಂಡಾಗಿದೆ. ಆನ್‌ಲೈನ್ ಕ್ಲಾಸುಗಳೆಂಬ ಅರೆ ಬೆಂದ ತಂತ್ರದ ಮೂಲಕ ಕೋವಿಡ್ ಸಮಯದಲ್ಲಿ ಮಕ್ಕಳ ಶಿಕ್ಷಣವನ್ನು ಹಾಳುಗೆಡವಿದ ಪುರಾವೆ ನಮ್ಮಲ್ಲಿದೆ. ಆದ್ದರಿಂದ ಆನ್‌ಲೈನ್ ಕಲಿಕೆ, ಜ್ಞಾನ ಸಂವಹನವನ್ನು ಗುಣಾತ್ಮಕವಾಗಿ ಹೆಚ್ಚಿಸಲು ಕನ್ನಡದಲ್ಲಿ ಞಟಿoತಿಟeಜge ಛಿoಟಿಣeಟಿಣ ನಗಣ್ಯವಾಗಿದೆ. ಅಷ್ಟೇಕೆ ವಿಕಿಪೀಡಿಯಾದಂತಹ ಅಮೂಲ್ಯ ವೇದಿಕೆಯಲ್ಲಿ ಕನ್ನಡದ ಮಾಹಿತಿ ಎಷ್ಟಿದೆ ಎಂದು ಹುಡುಕಿದರೆ ಈ ದಾರಿದ್ರ್ಯ ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ಜ್ಞಾನ ಸಮೃದ್ಧಿಗೆ ಬೇಕಾದ ವಿಶಿಷ್ಟ ಯೋಜನೆಯೊಂದನ್ನು ಪ್ರಾಧಿಕಾರ ವಿವಿಧ ಇಲಾಖೆಗಳ ಸಂಯೋಜನೆಯೊಂದಿಗೆ ಆರಂಭಿಸಿ ಅದರ ಉಸ್ತುವಾರಿ ನಡೆಸಿದರೆ ಬಲು ಒಳ್ಳೆಯದು.
ಕನಿಷ್ಠ ಒಂದು ವರ್ಷ ಕಾಲ ಬಿಳಿಮಲೆಯವರು iಟಿಟಿovಚಿಣive ಆದ ಯೋಜನೆಗಳ ರೂಪುರೇಶೆ ಸಿದ್ಧಪಡಿಸಲು ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸಮಾನಾಂತರವಾಗಿ ಕೆಲಸ ಮಾಡಿದರೆ ಮುಂದಿನ ಹತ್ತು ವರ್ಷಗಳಿಗೆ ಬೇಕಾದ ಒಂದು ಕಾರ್ಯಸಾಧ್ಯ ಯೋಜನೆ ತಯಾರಿಸಬಹುದು
ಇವೆಲ್ಲಾ ನನ್ನ ತಲೆಗೆ ಬಂದಿದ್ದು. ಇಂತಹ ನೂರು ಚಿಂತನೆಗಳನ್ನು ರಾಜ್ಯದ ಗಣ್ಯರು ಮುಂದಿಡಬಹುದು. ಇವೆಲ್ಲವೂ ಬಿಳಿಮಲೆಯವರ ಮುಂದೆ ಕಿಕ್ಕಿರಿದರೂ ಪರವಾಗಿಲ್ಲ. ಒಂದಷ್ಟು ಮಂಥನ ಕಮ್ಮಟಗಳ ಮೂಲಕ ಅವುಗಳನ್ನು ನಿರ್ದಿಷ್ಟಪಡಿಸಬಹುದು.
ಬಿಳಿಮಲೆಯವರಿಗೆ ಶುಭಾಶಯ ಕೋರುತ್ತಾ ಕನ್ನಡದ ಅಭಿವೃದ್ಧಿಗೆ ಹೊಸ ದಿಕ್ಕು ಅನ್ವೇಶಿಸುವ ಶಕ್ತಿ ಅವರಿಗೆ ದೊರೆಯಲಿ ಎಂದು ಆಶಿಸುವೆ.