ಕಟು ವಾಸ್ತವಕ್ಕೆ ಕಣ್ಣಾದ ಕೆಂಡದಂತಹ ಕೃತಿ

Update: 2023-08-03 12:37 GMT

ಕಟು ವಾಸ್ತವಕ್ಕೆ ಕಣ್ಣಾದ ಕೆಂಡದಂತಹ ಕೃತಿ

ಈ ಹೊತ್ತಿನ ಹೊತ್ತಿಗೆ

ಕೃತಿ: ಸುಡು ಬಯಲು

ಲೇಖಕರು: ಡಾ. ಎಂ.ಎಸ್. ಮಣಿ

ಬೆಲೆ: 375 ರೂ.

ಪ್ರಕಾಶನ: ಐ.ಎಚ್.ಎಸ್.ಪ್ರಕಾಶನ,

ತೆಂಗಿನ ತೋಟ, ಕೆರೆಕೋಡಿ ರಸ್ತೆ, ಮಾರುತಿ ನಗರ, ವಿಜಯಪುರ,

ಬೆಂಗಳೂರು ಗ್ರಾಮಾಂತರ ಜಿಲ್ಲೆ

ಕಟು ವಾಸ್ತವಕ್ಕೆ ಕಣ್ಣಾದ ಕೆಂಡದಂತಹ ಕೃತಿ

ಈ ಹೊತ್ತಿನ ಹೊತ್ತಿಗೆ

ಕೃತಿ: ಸುಡು ಬಯಲು

ಲೇಖಕರು: ಡಾ. ಎಂ.ಎಸ್. ಮಣಿ

ಬೆಲೆ: 375 ರೂ.

ಪ್ರಕಾಶನ: ಐ.ಎಚ್.ಎಸ್.ಪ್ರಕಾಶನ,

ತೆಂಗಿನ ತೋಟ, ಕೆರೆಕೋಡಿ ರಸ್ತೆ, ಮಾರುತಿ ನಗರ, ವಿಜಯಪುರ,

ಬೆಂಗಳೂರು ಗ್ರಾಮಾಂತರ ಜಿಲ್ಲೆ

ಈ ಪುಸ್ತಕದಲ್ಲಿ ಉಲ್ಲೇಖವಾಗಿರುವ ಕೊರೋನ ಕಾಲದ ಸತ್ಯ ಕಥೆಗಳು ಎಂಥವರ ಮನಸ್ಸನ್ನಾದರೂ ಹಿಂಡಿ ಹಾಕುವಂತಿವೆ. ಮಣಿ ಅತ್ಯಂತ ಹೃದ್ಯವಾಗಿ ಬರೆದಿರುವಂಥ ಈ ಕಥೆಗಳನ್ನು ಎಲ್ಲೋ ಪೇಪರಿನಲ್ಲಿ, ಯೂಟ್ಯೂಬ್ನಲ್ಲಿ ನೋಡಿದ್ದೇನೆ ಎಂದೆನಿಸುತ್ತದೆ. ಆದರೆ ಮಣಿ ಅದನ್ನು ಆಳಕ್ಕಿಳಿದು, ಅನುಭವಿಸಿದವರನ್ನೇ ಆವಾಹಿಸಿಕೊಂಡು ಬರೆದಿರುವ ರೀತಿ ನಿಜಕ್ಕೂ ಹಿಡಿಸುತ್ತದೆ. ಅಷ್ಟೊಂದು ಸುಂದರವಾದ ಬರಹಗಳ ಮೂಲಕ ಅವರು ಮನೆಯಲ್ಲಿ ಬಂದಿಯಾಗಿದ್ದವರ ಕಷ್ಟ ಕೋಟಲೆಗಳನ್ನು ಬಿಚ್ಚಿಟ್ಟಿದ್ದಾರೆ. ಕೊರೋನ ಸಮಯದಲ್ಲಿ ಆಧುನಿಕ ಮನುಷ್ಯನ ದೇಹದಲ್ಲಾಗುತ್ತಿದ್ದ ಬದಲಾವಣೆಗಳು ವಿಜ್ಞಾನಿಗಳ - ಹ್ಯೂಮನ್ ಸೆನ್ಸ್ ಅನ್ನೇ ಮೀರಿಸುವಂತಹ ನಾಗಾಲೋಟದಲ್ಲಿದ್ದವು. ಆಧುನಿಕ ವಿಜ್ಞಾನಿಗಳ ಎಲ್ಲ ಆವಿಷ್ಕಾರಗಳೂ ಪ್ರಕೃತಿಯ ಓಟಕ್ಕೆ ಸರಿ ಸಮನಾಗಿರುವುದಿಲ್ಲ. ಹಾಗೆ ನೋಡಿದರೆ ಇವೆಲ್ಲವೂ ಪ್ರಕೃತಿಗೆ ವಿರುದ್ಧವಾದ ಓಟವೇ. ಅದನ್ನು ನಾವು ಸೈಂಟಿಫಿಕ್ ಅಡ್ವಾನ್ಸ್ಮೆಂಟ್ ಎನ್ನುತ್ತೇವೆ. ಬಣ್ಣ ಬಣ್ಣದ ಜಾಹೀರಾತುಗಳಿಗೆ ಮೊರೆ ಹೋಗುವ ಮನುಷ್ಯನಿಗೆ ತಾನು ಮೆಡಿಕಲ್ ಮಾಫಿಯಾದ ಬಲೆಗೆ ಬಿದ್ದಿದ್ದೇನೆಂದು ಅರಿವಾಗುವುದೇ ಇಲ್ಲ. ಆತ ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ರಕೃತಿಯ ಓಟಕ್ಕೆ ತಕ್ಕಂತೆ ತನ್ನ ಓಟವನ್ನು ಟ್ಯೂನ್ ಮಾಡಲು ಮರೆಯುತ್ತಾನೆ. ಹಾಗೆ ಪ್ರಕೃತಿಗೂ ಮನುಷ್ಯನಿಗೂ ದೊಡ್ಡ ಕಂದಕವೇ ನಿರ್ಮಾಣವಾಗುತ್ತದೆ. ಪ್ರಾಕೃತಿಕವಾದುದಕ್ಕೆ ಸ್ಪಂದಿಸದಂತಹ ಸ್ಥಿತಿಗೆ ದೇಹ ಬಂದು ನಿಲ್ಲುತ್ತದೆ. ಅಂತಹದ್ದಕ್ಕೆ ನುಸುಳಿಕೊಳ್ಳುವುದು ಕೊರೋನದಂತಹ ವೈರಸ್ಗಳಿಗೆ ಸಲೀಸು. ಹಾಗೆ ಜರ್ಜರಿತವಾದ ದೇಹವನ್ನು ಬಳಸಿಕೊಂಡು ಕಾಸು ಮಾಡಿಕೊಳ್ಳುವುದು ಮೆಡಿಕಲ್ ಮಾಫಿಯಾಕ್ಕೆ ಮತ್ತಷ್ಟು ಸಲೀಸು. ಇಂತಹ ಸೂಕ್ಷ್ಮ ವಿಚಾರಗಳನ್ನು ಈ ಪುಸ್ತಕದಲ್ಲಿ ಕಾಣಿಸಲಾಗಿದೆ.

ಬಡವನಾಗಿ ಈ ನೆಲದಲ್ಲಿ ಹುಟ್ಟಿ ಮೆಡಿಕಲ್ ಮಾಫಿಯಾಕ್ಕೆ ತುತ್ತಾಗುವುದಂತೂ ಇನ್ನೂ ಅಮಾನುಷ. ಅಂತಹ ಬಡತನದ ಬೇಗೆಯಲ್ಲರಳಿದ ಕೊರೋನ ಕಾಲದ ಕರುಣಾಜನಕ ಕಥೆಗಳನ್ನು ಮಣಿ ಮನಸ್ಸಿಗೆ ತಟ್ಟುವಂತೆ ಹೇಳುತ್ತಾ ಹೋಗಿದ್ದಾರೆ. ಅವೆಲ್ಲವನ್ನೂ ಜನ ಓದಲೇ ಬೇಕು. ಈ ಪುಸ್ತಕದ ಮೂಲಕ ಅದೊಂದು ಎಚ್ಚರದಂತೆ ಪ್ರತೀ ತಲೆಮಾರುಗಳಿಗೂ ದಾಟಿಕೊಳ್ಳಬೇಕು. ಯಾಕೆಂದರೆ ಕೊರೋನದಂತಹ ಸಾಂಕ್ರಾಮಿಕ ಮಹಾ ಮಾರಿಗಳು ಈ ಹಿಂದೆಯೂ ಬಂದಿದ್ದವು. ಮುಂದೆಯೂ ಆ ಸಂಖ್ಯೆ ಹೆಚ್ಚಾಗಬಹುದು. ಆ ಕಾಲಘಟ್ಟದಲ್ಲಿ ಮೆಡಿಕಲ್ ಮಾಫಿಯಾ ಸೇರಿದಂತೆ ಎಲ್ಲ ವ್ಯೆಹದಲ್ಲಿ ಸಿಕ್ಕಿಕೊಳ್ಳದಂತೆ ತಡೆಯುವಲ್ಲಿ ಈ ಪುಸ್ತಕ ಖಂಡಿತಾ ಸಹಕಾರಿಯಾಗುತ್ತದೆ. ಅಂತಹ ಸೂಕ್ಷ್ಮತೆಯಿಂದಲೇ ಮಣಿ ಈ ಲೇಖನ ಗಳನ್ನು ಬರೆದಿದ್ದಾರೆ. ಅದು ಓದಿದವರನ್ನೆಲ್ಲ ಸದಾ ಕಾಲಕ್ಕೂ ಜಾಗೃತ ಸ್ಥಿತಿಯಲ್ಲಿಡಲಿದೆ.

(ಮುನ್ನುಡಿಯಿಂದ)

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಡಾ. ಬಿ.ಟಿ. ರುದ್ರೇಶ್

contributor

Similar News