ದಿವಾಳಿಯಾಗಲು ಕಾರಣ

Update: 2023-08-02 18:47 GMT

-ಬೂಕನಕೆರೆ ವಿಜೇಂದ್ರ,

ಕುವೆಂಪು ನಗರ, ಮೈಸೂರು

ಮಾನ್ಯರೇ,

ಸಹಕಾರ ಬ್ಯಾಂಕ್ಗಳಲ್ಲಿ ವಸೂಲಾಗದ ಸಾಲ (ಎನ್.ಪಿ.ಎ.) ಹೆಚ್ಚಾಗಲು ಮುಖ್ಯ ಕಾರಣಗಳೆಂದರೆ, ರಾಜ್ಯದ ಎಲ್ಲಾ ಸಹಕಾರ ಬ್ಯಾಂಕ್ಗಳು ಮತ್ತು ಸಹಕಾರ ಸಂಘಗಳು ಯಾವುದಾದರೂ ಒಂದು ರಾಜಕೀಯ ಪಕ್ಷದ ಹಿಡಿತದಲ್ಲೇ ಇವೆ. ಇಲ್ಲಿಗೆ ಆಯ್ಕೆ ಆಗಿ ಬರುವ ನಿರ್ದೇಶಕರು ಮತ್ತು ಆ ಬ್ಯಾಂಕ್ನ ಪದಾಧಿಕಾರಿಗಳು ಅವರ ಹಿಂಬಾಲಕರಿಗೆ ಇವರ ಪ್ರಭಾವದಿಂದ ಸಾಲ ಮರುಪಾವತಿಯ ಸಾಮರ್ಥ್ಯ ಇಲ್ಲದಿದ್ದರೂ, ವಾಸ್ತವ ಸಾಲಕ್ಕಿಂತಲೂ ಹೆಚ್ಚು ಸಾಲ ಕೊಡಿಸುತ್ತಾರೆ. ಹೀಗೆ ಸಾಲ ಪಡೆದುಕೊಂಡವರು ಆರು ತಿಂಗಳು ಸಹ ಸಾಲ ಮರು ಪಾವತಿ ಮಾಡಲು ಸಾಧ್ಯವಾಗದೆ, ಡಿಫಾಲ್ಟರ್ ಆಗುತ್ತಾರೆ, ಇಲ್ಲಿ ಸಾಲಗಾರರ ಮತ್ತು ಪ್ರಭಾವ ಬೀರುವ ನಿರ್ದೇಶಕರ ನಡುವೆ ಕಣ್ಣಿಗೆ ಕಾಣದ ಒಪ್ಪಂದ ನಡೆದಿರುತ್ತದೆ.

ಎಲ್ಲ ಸಹಕಾರ ಬ್ಯಾಂಕ್ಗಳ ಆಡಳಿತವು ಆರ್.ಬಿ.ಐ. ಅಡಿಯಲ್ಲಿ ಬಂದರೂ ಎಲ್ಲವನ್ನೂ ಅವರು ನಿಯಂತ್ರಣ ಮಾಡಲು ಸಾಧ್ಯವಿಲ್ಲ.

ಇನ್ನು ಸಹಕಾರ ಬ್ಯಾಂಕ್ಗಳು ಎನ್.ಪಿ.ಎ.ಯಿಂದ ನಷ್ಟ ಅನುಭವಿಸಿ ದರೂ ರಾಜ್ಯ ಸರಕಾರಗಳು ಹಣಕಾಸಿನ ನೆರವಿಗೆ ಬರುವುದಿಲ್ಲ.

ಹಾಗಾಗಿ ಪ್ರತೀ ಸಹಕಾರ ಬ್ಯಾಂಕ್ಗೂ ರಾಷ್ಟ್ರೀಕೃತ ಬ್ಯಾಂಕ್ನ ಅಧಿಕಾರಿಯೊಬ್ಬರನ್ನು ಆರ್.ಬಿ.ಐ. ನೇಮಕ ಮಾಡುವ ಮೂಲಕ ಸಹಕಾರ ಬ್ಯಾಂಕ್ಗಳು ದಿವಾಳಿಯಾಗುವುದನ್ನು ತಪ್ಪಿಸಲು ಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News