ಕರಾವಳಿ ಉತ್ಸವ ನಡೆಯಲಿ

Update: 2023-12-16 04:19 GMT

ಮಾನ್ಯರೇ,

ದ.ಕ. ಜಿಲ್ಲೆಯ ಕರಾವಳಿ ಉತ್ಸವ ಹಾಗೂ ವಸ್ತು ಪ್ರದರ್ಶನಗಳು ವರ್ಷದಿಂದ ವರ್ಷಕ್ಕೆ ಕಳೆ ಗುಂದುತ್ತಿದೆ. ಸ್ಥಳೀಯ ಕರಾವಳಿಯ ಸಂಸ್ಕೃತಿಯನ್ನು ತಿಳಿಸುವ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಕಲ್ಪಿಸುವ ವಸ್ತು ಕರಾವಳಿ ಉತ್ಸವ ಹಾಗೂ ವಸ್ತು ಪ್ರದರ್ಶನಗಳು ಈಗ ನಡೆಯುತ್ತಿಲ್ಲ.

ಬೀದಿ ಬದಿಯ ಬಡ ವ್ಯಾಪಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಎಬ್ಬಿಸಲಾಗುತ್ತದೆ. ಧಾರ್ಮಿಕ ಸಾಮರಸ್ಯ ಹದಗೆಟ್ಟು, ಅಲ್ಪಸಂಖ್ಯಾತ ಧರ್ಮಗಳ ಬಡ ವ್ಯಾಪಾರಿಗಳನ್ನು ಬಹು ಸಂಖ್ಯಾತರ ಉತ್ಸವಗಳಲ್ಲಿ ವ್ಯಾಪಾರ ಮಾಡಲು ಬಿಡಲಾಗುತ್ತಿಲ್ಲ. ಕರಾವಳಿ ಉತ್ಸವ ಹಾಗೂ ವಸ್ತು ಪ್ರದರ್ಶನ ಕಡೆಗಣಿಸಿ ‘ಸ್ಟ್ರೀಟ್ ಫುಡ್ ಫೆಸ್ಟಿವಲ್’ನ್ನು ಮಾಡಲಾಗುತ್ತಿದೆ.

ಅನ್ಯ ಜಿಲ್ಲೆಗಳಲ್ಲಿ ಅಲ್ಲಿನ ಜಿಲ್ಲಾ ಉತ್ಸವಗಳು ಹಾಗೂ ವಸ್ತು ಪ್ರದರ್ಶನಗಳು ನಿರಾತಂಕವಾಗಿ ನಡೆಯುತ್ತಲೇ ಇವೆ. ಆದರೆ ದ.ಕ. ಜಿಲ್ಲಾ ಕರಾವಳಿ ಉತ್ಸವ ಹಾಗೂ ವಸ್ತು ಪ್ರದರ್ಶನ ಅಂತಿಮ ಹಾದಿಯಲ್ಲಿದ್ದು, ಕೊನೆಯ ಮೊಳೆ ಹೊಡೆಯುವ ಹಂತದಲ್ಲಿದೆ.

ಈ ಬಗ್ಗೆ ಇನ್ನಾದರೂ ಸ್ಥಳೀಯ ಜನ ಪ್ರತಿನಿಧಿಗಳು ಗಮನ ಹರಿಸಿ ಬಡವ್ಯಾಪಾರಿಗಳನ್ನು ಕಾಪಾಡಬೇಕಾಗಿದೆ.

-ಮುಹಮ್ಮದ್ ಆಸಿಫ್, ಜೋಕಟ್ಟೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News