ಪ್ರಗತಿಯ ಸಂಭ್ರಮಾಚರಣೆ ಆಗಲಿ

Update: 2023-09-23 10:21 GMT

ಮಾನ್ಯರೇ,

ಯಾವುದೇ ಸ್ಥಳಗಳಿಗೆ ಮಂತ್ರಿಗಳು ಭೇಟಿ ನೀಡುವ ಮುನ್ನ ಸ್ಥಳೀಯ ಅಧಿಕಾರಿಗಳು ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡುತ್ತಾರೆ. ಇದು ಗೊತ್ತಿರುವ ವಿಚಾರ. ಉದಾಹರಣೆಗೆ ಸೆ. ೧೭ರಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರಗಿಯಲ್ಲಿ ಶಾಂತ ಆಸ್ಪತ್ರೆ ಉದ್ಘಾಟಿಸಿದರು. ಮುಖ್ಯಮಂತ್ರಿ ಭೇಟಿ ನೀಡುವ ಸಂದರ್ಭದಲ್ಲಿ ತಿಂಗಳುಗಳಿಂದ ದುರಸ್ತಿ ಕಾಣದಿದ್ದ ಅಲ್ಲಿನ ರಸ್ತೆಯ ಹೊಂಡ, ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಇದು ಹೈಕೋರ್ಟ್ ರಿಂಗ್ ರೋಡ್‌ನ ಪರಿಸ್ಥಿತಿ. ಹೀಗಿರುವಾಗ, ಹಳ್ಳಿಯ ರಸ್ತೆಗಳ ಬಗ್ಗೆ ಒಮ್ಮೆ ಯೋಚಿಸಿಬೇಕು. ಅದಕ್ಕಾಗಿಯೇ ಮಂತ್ರಿಗಳು ಆಗಾಗ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಬೇಕು.

ಇನ್ನು ಕಲಬುರಗಿ ವಿಶ್ವವಿದ್ಯಾನಿಲಯದಲ್ಲಿ ಕಳೆದ ೨೭ ವರ್ಷಗಳಿಂದ ಬೋಧಕ ಹುದ್ದೆಯ ನೇಮಕಾತಿಯಾಗಿಲ್ಲ. ಪ್ರಸಕ್ತ ಸರಕಾರ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದಂದು ೪೪೯ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಸ್ವಾಗತಾರ್ಹ ಬೆಳವಣಿಗೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅಧಿಕಾರಿಗಳು ಪ್ರಗತಿಯ ಕಾಮಗಾರಿಯತ್ತ ಹೆಚ್ಚು ಒತ್ತು ನೀಡಿದಾಗ, ಮುಂದಿನ ವರ್ಷವು ಕಲ್ಯಾಣ ಕರ್ನಾಟಕದಲ್ಲಿ ಉತ್ಸವದ ಸಂಭ್ರಮಾಚರಣೆ ಹೆಚ್ಚುತ್ತದೆ.

-ಆನಂದ ಜೇವೂರ್, ಕಲಬುರಗಿ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News