ಸುಪ್ರೀಂ ತೀರ್ಪು ಮತ್ತು Creamy Layer ಗೊಂದಲ

Update: 2024-08-01 11:16 GMT

ಒಳ ಮೀಸಲಾತಿಯ ಅಗತ್ಯದ ಬಗ್ಗೆ ಮತ್ತು ಅದನ್ನು ಒದಗಿಸಲು ರಾಜ್ಯಗಳಿಗಿರುವ ಅಧಿಕಾರದ ಬಗ್ಗೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ 6-1 ಬಹುಮತದಲ್ಲಿ ಒಳಮೀಸಲಾತಿಯ ಪರವಾಗಿ ತೀರ್ಪು ಕೊಟ್ಟಿರುವುದು ಸರಿಯಷ್ಟೆ.

ತೀರ್ಪಿನ ಸಂಪೂರ್ಣ ಪ್ರತಿ ಈ ವೆಬ್ ವಿಳಾಸದಲ್ಲಿ ಲಭ್ಯವಿದೆ:

https://api.sci.gov.in/supremecourt/2010/25536/25536_2010_1_1501_54462_Judgement_01-Aug-2024.pdf

ತೀರ್ಪು ಸಾರದಲ್ಲಿ ಸಾಮಾಜಿಕ ನ್ಯಾಯದ ಕಡೆಗೆ ಒಂದು ಪೂರಕ ಹೆಜ್ಜೆಯೆಯನ್ನು ಇಟ್ಟಿದ್ದರೂ ಕೆಲವು ಗೊಂದಲಗಳನ್ನು ಹುಟ್ಟಿಸಿದೆ. ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಮೀಸಲಾತಿಯ ಒಳಗೆ Creamy Layer ಸಿದ್ಧಾಂತ ಅಳವಡಿಸಬೇಕೆಂಬ ಬಗ್ಗೆ ಜಸ್ಟಿಸ್ ಮಿತ್ತಲ್ ಅವರ ತೀರ್ಪಿನ ಅಭಿಪ್ರಾಯ ಒಂದಷ್ಟು ಕಳವಳವನ್ನು ಹುಟ್ಟಿಸಿದೆ.

ಈ ಪ್ರಕರಣದಲ್ಲಿ ಒಟ್ಟು ಆರು ನ್ಯಾಯಾಧೀಶರು ಪ್ರತ್ಯೇಕ ತೀರ್ಪುಗಳನ್ನು ನೀಡಿದ್ದಾರೆ. ಇದರಲ್ಲಿ ಆರು ನ್ಯಾಯಾಧೀಶರು ಸಾರದಲ್ಲಿ ಒಳಮೀಸಲಾತಿಯ ವರ್ಗೀಕರಣವನ್ನು ಎತ್ತಿ ಹಿಡಿದಿದ್ದಾರೆ. ಮತ್ತು ಜಸ್ಟಿಸ್ ಬೇಲಾ ತ್ರಿವೇದಿ ಮಾತ್ರ ಅದನ್ನು ವಿರೋಧಿಸಿದ್ದಾರೆ.

ಒಳಮೀಸಲಾತಿಯನ್ನು ಎತ್ತಿ ಹಿಡಿಡಿರುವ ಮುಖ್ಯ ನ್ಯಾಯಾಧೀಶರಾದ ನ್ಯಾ. ಚಂದ್ರಚೂಡ್ ಮಾತು ನ್ಯಾ. ಮನೋಜ್ ಮಿಶ್ರಾ ರವರ ಜಂಟಿ ತೀರ್ಪಿನಲ್ಲಿ Creamy Layer ಬಗ್ಗೆ ಯಾವ ಅಭಿಪ್ರಾಯವೂ ಇಲ್ಲ. ಆದೇಶವೂ ಇಲ್ಲ.

ಜಸ್ಟಿಸ್ ಗವಾಯಿ ಮತ್ತು Creamy Layer

ಪೀಠದ ಮತ್ತೊಬ್ಬ ಹಿರಿಯ ನ್ಯಾಯಾಧೀಶ ಜಸ್ಟಿಸ್ ಗವಾಯಿ ಅವರ ತೀರ್ಪಿನಲ್ಲಿ ಮಾತ್ರ: "ಒಳ ಮೀಸಲಾತಿ ಸಾರ್ಥಕವಾಗಬೇಕೆಂದಿದ್ದರೆ Creamy Layer ಮಾನದಂಡಗಳನ್ನು ಪರಿಶಿಷ್ಟ ಜಾತಿಗಳ ಮೀಸಲಾತಿಗೂ ಅನ್ವಯಿಸಬೇಕು...ಮತ್ತು

viii) that the criteria for exclusion of the creamy layer from the Scheduled Castes and Scheduled Tribes for the purpose of affirmative action could be different from the criteria as applicable to the Other Backward Classes.

ಅಂದರೆ, ಪರಿಶಿಷ್ಟ ಜಾತಿಗಳಿಗೆ ಅನ್ವಯವಾಗುವ Creamy Layer ಮಾನದಂಡ OBC ಗಳಿಗೆ ಅನ್ವಯವಾಗುವ ಮಾನದಂಡಗಳಿಗಿಂತ ಭಿನ್ನವಾಗಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೆಯೇ ಒಳ ಮೀಸಲಾತಿಯೂ ಅಷ್ಟೂ ಪರಿಶಿಷ್ಟ ಮೀಸಲಾತಿಯ ಪ್ರಮಾಣಕ್ಕೆ ಶೇ. 100 ಅನ್ವಯವಾಗಬಾರದು ಎಂದು ಹೇಳಿದ್ದಾರೆ.

ಇನ್ನುಳಿದಂತೆ ಮುಖ್ಯ ನ್ಯಾಯಮೂರ್ತಿಯವರ ತೀರ್ಪಿಗೆ ಸಹಮತ ವ್ಯಕ್ತಪಡಿಸಿರುವ ಜಸ್ಟಿಸ್ ವಿಕ್ರಮನಾಥ್ ಮತ್ತು ಜಸ್ಟಿಸ್ SC ಶರ್ಮ ಅವರು Creamy Layer ವಿಷ್ಯದಲ್ಲಿ ಜಸ್ಟಿಸ್ ಗವಾಯಿ ಅವರ ಜೊತೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಶೇ. 100 ಒಳಮೀಸಲಾತಿ ಇರಬಾರದು ಎಂಬ ಅಭಿಪ್ರಾಯಕ್ಕಲ್ಲ. ಒಳಮೀಸಲಾತಿ ಪರ ತೀರ್ಪನ್ನು ಅನಿವಾರ್ಯ ಹಾಗೂ ಪರ್ಯಾಯ ನೆಲೆಗಳಿಲ್ಲ ಎಂಬ ಕಾರಣಕ್ಕೆ ಸಮರ್ಥಿಸಿರುವ ಜಸ್ಟಿಸ್ ಮಿತ್ತಲ್ ಮಾತ್ರ ಪರಿಶಿಷ್ಟರ ಮೀಸಲಾತಿಯನ್ನು ಒಂದು ಜನರೇಷನ್ ಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಹೇಳಿದ್ದಾರೆ.

ಹೀಗೆ ಈಗ ಒಳಮೀಸಲಾತಿ ಪರ ಇರುವ ಬಹಮತದ ನ್ಯಾಯಾಧೀಶರುಗಳಲ್ಲಿ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾ. ಮನೋಜ್ ಮಿಶ್ರಾ ಅವರ ತೀರ್ಪಿನಲ್ಲಿ Creamy Layer ಉಲ್ಲೇಖವಿಲ್ಲ.

ಪರಿಶಿಷ್ಟರ ಮೀಸಲಾತಿಯಲ್ಲೂ Cremy Layer ಅನ್ವಯಿಸಬೇಕೆಂಬ ಜಸ್ಟಿಸ್ ಗವಾಯಿ, ಜಸ್ಟಿಸ್ ವಿಕ್ರಂ ನಾಥ್ ಮತ್ತು ಜಸ್ಟಿಸ್ SC ಶರ್ಮ ಪರಿಶಿಷ್ಟರ Creamy Layer ಮಾನದಂಡ OBC ಗಳಿಗಿಂತ ಭಿನ್ನವಾಗಿರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ತೀರ್ಪು ಅನುಷ್ಠಾನಾದ ಭಾಗದಲ್ಲಿ Creamy Layer ಬಗ್ಗೆ ಮೂರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದರಿಂದ ಗೊಂದಲಕ್ಕೀಡು ಮಾಡಿದೆ.

ಹೀಗಾಗಿ ಇದರ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಅಹವಾಲುದಾರರು ನ್ಯಾಯಾಲಯದಿಂದ ಸ್ಪಷ್ಟೀಕರಣವನ್ನು ಕೇಳುವ ಅಗತ್ಯವಿದೆ ಎಂದು ನನಗೆ ಅನಿಸುತ್ತದೆ.

-ಶಿವಸುಂದರ್ 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ಶಿವಸುಂದರ್

contributor

Similar News