ವೇವ್ಸ್ : ಜಾಗತಿಕ ಸೃಜನಶೀಲ ವಿಷಯ ಕ್ರಾಂತಿಗೆ ಹಾದಿ ರೂಪಿಸುವಲ್ಲಿ ನಾಯಕತ್ವ ವಹಿಸುತ್ತಿದೆ ಭಾರತ

ಧರ್ಮೇಂದ್ರ ತಿವಾರಿ
ಸೃಜನಶೀಲತೆಗೆ ಯಾವುದೇ ಗಡಿಗಳಿಲ್ಲ. ಅನಾದಿ ಕಾಲದಿಂದಲೂ, ಸೃಷ್ಟಿಕರ್ತರು ಈ ಜಗತ್ತನ್ನು ರೂಪಿಸುತ್ತಿದ್ದಾರೆ. ಎಲ್ಲಾ ನಾಗರಿಕತೆಗಳಲ್ಲಿ, ಕರಾಳ ಯುಗದಿಂದ ಹಿಡಿದು ನಮ್ಮ ಸುದೀರ್ಘ ವಿಕಾಸದ ಪ್ರಯಾಣದಲ್ಲಿ ಮಹಾನ್ ಸೃಜನಶೀಲ ವಿಚಾರಗಳು,ಚಿಂತನೆಗಳು ನಮ್ಮನ್ನು ಆಧುನಿಕ ಮಾನವರಾಗಿ ರೂಪಿಸಿದವು. ಹಿಂದಿನ ತಲೆಮಾರುಗಳ ಸೃಜನಶೀಲ ಚಿಂತನೆಗಳು ಅವರ ಭವಿಷ್ಯವನ್ನು ಸುಧಾರಿಸುವ ಉದ್ದೇಶದಿಂದ, ಅಂದರೆ ನಮ್ಮ ಪ್ರಸ್ತುತ ಜೀವನದವರೆಗೆ ತಳ್ಳಿಕೊಂಡು ಬಂದವು. ನಾವು, ಬೇಬಿ ಬೂಮರ್‌ಗಳಿಂದ ಜೆನ್ ಝಡ್‌ಗೆ, 21ನೇ ಶತಮಾನದಲ್ಲಿ ಪ್ರಗತಿಯ ಪ್ರಯೋಜನಗಳನ್ನು ಆನಂದಿಸುತ್ತಿರುವಾಗ, ನಮ್ಮ ಪೂರ್ವಜರ ಸೃಜನಶೀಲತೆಯು ಆಧುನಿಕ ಕಾಲದಲ್ಲಿ ನಮಗೆ ಮಾನವ ಜೀವನವನ್ನು ಉತ್ತಮಗೊಳಿಸಿದೆ. ಹೀಗಾಗಿ, ಸೃಷ್ಟಿಕರ್ತರನ್ನು ಗುರುತಿಸುವುದು, ಅವರಿಗೆ ಮಾರ್ಗದರ್ಶನ ನೀಡುವುದು, ಅತ್ಯಾಧುನಿಕ ಜ್ಞಾನವನ್ನು ಹಂಚಿಕೊಳ್ಳುವುದು, ಉತ್ತಮ ಜಾಗತಿಕ ಅಭ್ಯಾಸಗಳು/ಪದ್ಧತಿಗಳ ಅನುಸರಣೆ ಮತ್ತು ಅವರ ಸೃಜನಶೀಲ ಕೆಲಸಕ್ಕೆ ಮಾರುಕಟ್ಟೆಗೆ ಪ್ರವೇಶವನ್ನು ಒದಗಿಸುವುದು, ಎಲ್ಲಾ ಪೀಳಿಗೆಯ ನೀತಿ ನಿರೂಪಕರಿಗೆ ನಿರ್ಣಾಯಕವಾದ ಸಂಗತಿಯಾಗಿದೆ.
ಆಧುನಿಕ ಇಂಟರ್ನೆಟ್ (ಅಂತರ್ಜಾಲದ) ಯುಗದಲ್ಲಿ, ವಿಶ್ವದ ಸೃಜನಶೀಲ ಸಾಮರ್ಥ್ಯವನ್ನು ಅನಾವರಣಗೊಳಿಸುವ ಮೂಲಕ, ಭಾರತವು ಸೃಜನಶೀಲತೆಯ ಅಲೆಗಳ ಮೇಲೆ ಸವಾರಿ ಮಾಡುತ್ತಿದೆ. ರಾಷ್ಟ್ರಗಳ ನಡುವೆ ಜಾಗತಿಕ ಸಾಮರಸ್ಯವನ್ನು ಉತ್ತೇಜಿಸುವ ಸೃಜನಶೀಲ ಮೃದು ಶಕ್ತಿಯಾಗಿ ಜಗತ್ತನ್ನು ರಾಜಕೀಯವಾಗಿ ಒಂದುಗೂಡಿಸುವ ಗುರಿಯನ್ನು ಹೊಸದಿಲ್ಲಿ ಹೊಂದಿದೆ. ಅದೇ ಸಮಯದಲ್ಲಿ, ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಕೆಲಸದ ಮಟ್ಟದಲ್ಲಿ, ನಮ್ಮ ನೀತಿ ನಿರೂಪಕರು ಕನೆಕ್ಟಿಂಗ್ ದಿ ಕ್ರಿಯೇಟರ್ಸ್‌ಗಳನ್ನು ‘ವೇವ್ಸ್’ ಮೂಲಕ ಕನೆಕ್ಟಿಂಗ್ ಕಂಟ್ರೀಸ್ ಮಾಡುತ್ತಿದ್ದಾರೆ. ಪ್ರಾಚೀನ ಕಾಲದಿಂದಲೂ ಭಾರತೀಯ ಬ್ರಾಂಡ್ ನ ಯೋಗ ಮತ್ತು ಆಯುರ್ವೇದವಾಗಿರಲಿ ಅಥವಾ ಟಾಕೀಸ್ ಅಸ್ತಿತ್ವಕ್ಕೆ ಬಂದ ನಂತರ ಕಳೆದ 100 ವರ್ಷಗಳಲ್ಲಿ ಬಾಲಿವುಡ್ ನ ಮನರಂಜನಾ ಸಂಗೀತವಾಗಿರಲಿ,ಅವುಗಳ ಮೂಲಕ ನಮ್ಮ ಸೃಷ್ಟಿಕರ್ತರು ಜಗತ್ತನ್ನು ರೂಪಿಸುತ್ತಿದ್ದಾರೆ, ಎಲ್ಲಾ ತಲೆಮಾರುಗಳ ಸೃಷ್ಟಿಕರ್ತರಿಗೆ ಜ್ಞಾನವನ್ನು ಹಂಚುತ್ತಿದ್ದಾರೆ.
ಮೇ 1 ರಿಂದ 4 ರವರೆಗೆ ಮುಂಬೈನಲ್ಲಿ ನಡೆಯಲಿರುವ ‘ವೇವ್ಸ್’ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯು ಪ್ರಪಂಚದಾದ್ಯಂತದ ಸೃಷ್ಟಿಕರ್ತರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಸೃಜನಶೀಲ ಪ್ರಯಾಣದ ನೈಜ ಭಾಗವಾಗಲು, ಅವರ ಸೃಜನಶೀಲತೆಗೆ ಹೆಸರು ಮತ್ತು ಖ್ಯಾತಿಯನ್ನು ಗಳಿಸಲು ಉತ್ತಮ ಅವಕಾಶವಾಗಿದೆ. ಅದು ಚಲನಚಿತ್ರಗಳು, ಸಂಗೀತ, ಆಟಗಳು, ಕಾಮಿಕ್ಸ್ ಅಥವಾ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯನ್ನು
ಹೆಚ್ಚು ಕೈಗೆಟಕುವಂತೆ ಮಾಡುವಲ್ಲಿ ಕೆಲವು ತಾಂತ್ರಿಕ ಆವಿಷ್ಕಾರಗಳಾಗಿರಬಹುದು, ಮಾಧ್ಯಮ ಮತ್ತು ಮನರಂಜನಾ ಉದ್ಯಮವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿರುವ ಸಾಧನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮುಂದುವರಿಯಲು ವೇವ್ಸ್ ಸೃಷ್ಟಿಕರ್ತರಿಗೆ ಆರೋಗ್ಯಕರ ಅವಕಾಶ ವನ್ನು ನೀಡುತ್ತದೆ.
ಸೃಜನಶೀಲ ಪ್ರತಿಭೆಗಳನ್ನು ಗುರುತಿಸುವಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಯತ್ನಗಳು ಫಲಿತಾಂಶಗಳನ್ನು ತರುತ್ತಿವೆ. 32 ‘ಕ್ರಿಯೇಟ್ ಇನ್ ಇಂಡಿಯಾ, ಕ್ರಿಯೇಟ್ ಫಾರ್ ದಿ ವರ್ಲ್ಡ್’ ಚಾಲೆಂಜ್‌ಗಳ ಮೂಲಕ ವಿಶ್ವದಾದ್ಯಂತದ 750 ಕ್ಕೂ ಹೆಚ್ಚು ಶಾರ್ಟ್ಲಿಸ್ಟ್ ಮಾಡಿದ ಸೃಷ್ಟಿಕರ್ತರು ಈಗ ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ತಮ್ಮ ಕೆಲಸವನ್ನು ಪ್ರದರ್ಶಿಸಲಿದ್ದಾರೆ. ಅವರು ಸೃಷ್ಟಿಕರ್ತರು ಮಾತ್ರವಲ್ಲ, ನಿಜವಾದ ಅರ್ಥದಲ್ಲಿ ಸಂಶೋಧಕರು. ಉದ್ಯಮ ತಜ್ಞರು
ಮತ್ತು ಮಾರುಕಟ್ಟೆ ವೃತ್ತಿಪರನ್ನು ಒಳಗೊಂಡ ತೀರ್ಪುಗಾರರ ಆಧಾರಿತ ಆಯ್ಕೆಯ ಸಮಗ್ರ ವಿಧಾನದ ಮೂಲಕ ಭಾರತ ಸರಕಾರವು ಗುರುತಿಸಿದ ಕೆಲವು ಸೃಷ್ಟಿಕರ್ತರು ಈಗಾಗಲೇ ನವೀನ ವಿಧಾನಗಳಿಂದ ನಮ್ಮ ಜೀವನವನ್ನು ಬದಲಾಯಿಸುವ ಗಮನಾರ್ಹ ಸಾಮರ್ಥ್ಯವನ್ನು ಹೊಂದಿರುವ ಉತ್ತಮ ಕೆಲಸದೊಂದಿಗೆ ಬಂದಿದ್ದಾರೆ.
ಮುಂದಿನ ಬಾರಿ ನೀವು ಪ್ರವಾಸಿಗರಾಗಿ ಪೋರ್ಟ್ ಬ್ಲೇರ್ ನ ಸೆಲ್ಯುಲಾರ್ ಜೈಲಿಗೆ ಹೋದಾಗ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರೊಂದಿಗೆ ಸಂವಹನ ನಡೆಸುವಂತಹ ಉತ್ತಮ ಅನುಭವ ನಿಮಗೆ ಸಿಗುತ್ತದೆ. ಏಕೆಂದರೆ ಸೃಜನಶೀಲ ಸಂಸ್ಥೆಯು ಅದನ್ನು ಸಾಧ್ಯವಾಗಿಸಲು ತಮ್ಮ ‘ಎಕ್ಸ್’ ಟೆಂಡೆಡ್ ರಿಯಾಲಿಟಿ (ಎಕ್ಸ್ ಆರ್) ಪ್ರತಿಭೆಯನ್ನು ಬಳಸಿದೆ. ವೇವ್ಸ್ ಚಾಲೆಂಜ್ ಅಡಿಯಲ್ಲಿ, ಸೃಷ್ಟಿಕರ್ತರು ಭಾರತ ಅಥವಾ ವಿದೇಶದ ಇತರ ಐತಿಹಾಸಿಕ ತಾಣಗಳನ್ನು ತಲುಪಲು ವೇವ್ಸ್ ವೇದಿಕೆಯನ್ನು ಬಳಸಲು ಬಯಸುತ್ತಾರೆ, ಐತಿಹಾಸಿಕ ಕಥೆಗಳು ಮತ್ತು ಜಾನಪದಗಳನ್ನು ನಿರೂಪಿಸುವಾಗ ತಮ್ಮ ಎಕ್ಸ್‌ಆರ್ ಮತ್ತು ವರ್ಚುವಲ್ ರಿಯಾಲಿಟಿ, ವಿಆರ್ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ. ಸೃಷ್ಟಿಕರ್ತರ ಮತ್ತೊಂದು ತಂಡವು ತಮ್ಮ ಆನ್ಲೈನ್ ಖರೀದಿಯಲ್ಲಿ ನೈಜ-ಪ್ರಪಂಚದ ವಾಣಿಜ್ಯ ಭಾವನೆಯನ್ನು ಮೂಡಿಸಲು ವಿಆರ್ ಅನ್ನು ಬಳಸಿದೆ. ಮತ್ತೊಂದು ತಂತ್ರಜ್ಞಾನ-ಚಾಲಿತ ಸೃಜನಶೀಲ ಕೃತಿ, ಪೋಸ್ ಪರ್ಫೆಕ್ಟ್ ಎಂಬುದು ಯೋಗಾಭ್ಯಾಸಿಗಳ ಅಪರಿಪೂರ್ಣ ಭಂಗಿಗಳಿಗೆ ಕೃತಕ ಬುದ್ಧಿಮತ್ತೆಯ ಮೂಲಕ ಪರಿಹಾರವಾಗಿ
ಎಕ್ಸ್‌ಆರ್ ಅನ್ನು ಬಳಸುವ ಮೂಲಕ ಫಿಟ್ನೆಸ್ ಫ್ರೀಕ್‌ಗಳ ಯೋಗ ಭಂಗಿಗಳನ್ನು ಸರಿಪಡಿಸುವ ಪ್ರಯತ್ನ ಮಾಡಿದೆ. ಸರಿಯಾದ ಬೆಂಬಲ ಮತ್ತು ಮಾರ್ಗದರ್ಶನದೊಂದಿಗೆ, ಯುವ ಸೃಜನಶೀಲತೆಯು ಭಾರತವನ್ನು ಜಾಗತಿಕ ವಿಷಯ ಕೇಂದ್ರವಾಗಿ ಸ್ಥಾಪಿಸಬಹುದು, ಆಡಳಿತವನ್ನು ಹೆಚ್ಚಿಸಬಹುದು ಮತ್ತು ಉದ್ಯೋಗಗಳನ್ನು ಸೃಷ್ಟಿಸಬಹುದು, ವೇವ್ಸ್ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ‘ಕ್ರಿಯೇಟ್ ಇನ್ ಇಂಡಿಯಾ, ‘ಕ್ರಿಯೇಟ್ ಫಾರ್ ದಿ ವರ್ಲ್ಡ್’ ದೃಷ್ಟಿಕೋನವನ್ನು ಸಾಕಾರಗೊಳಿಸಬಹುದು.
ವೇವ್ಸ್ ಅಡಿಯಲ್ಲಿ ಸಿಐಸಿ ಸವಾಲುಗಳಿಂದ ಭಾರತದ ದೂರದ ಮೂಲೆಗಳ ಕೋಡರ್ ಗಳು ಸಹ ಪ್ರಯೋಜನ ಪಡೆಯುತ್ತಿದ್ದಾರೆ. ಕಾಶ್ಮೀರದ 16 ವರ್ಷದ ಬಾಲಕನೊಬ್ಬ ತನ್ನದೇ ಆದ ಸ್ಟಾರ್ಟ್‌ಅಪ್ ಮಾಡುವ ತನ್ನ ಕನಸುಗಳಿಗೆ ಆಕಾರ ನೀಡಲು ಪ್ರಾರಂಭಿಸಿದ್ದಾನೆ, ವೇವ್ಸ್ ಪ್ಲಾಟ್ಫಾರ್ಮ್‌ನಲ್ಲಿ ತನ್ನ ಕೋಡಿಂಗ್ ಕೌಶಲ್ಯವನ್ನು ಅಂಗೀಕರಿಸಿದ್ದರಿಂದ ಇದು ಸಾಧ್ಯವಾಗಿದೆ. ಇದು ಬರೇ ಕಾಶ್ಮೀರದ ಓರ್ವ ಯುವಕನ ಒಂದು ಕಥೆಯಲ್ಲ, ವಿಶ್ವದಾದ್ಯಂತ ಅನೇಕ ಯುವಜನರು ಪ್ರತಿಭಾನ್ವೇಷಣೆ ವೇದಿಕೆಯಾದ ‘‘ಕ್ರಿಯೇಟೋಸ್ಪಿಯರ್ ಆಫ್ ವೇವ್ಸ್’ನಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. ಕಲಾತ್ಮಕ ಸೃಷ್ಟಿಯೊಂದಿಗೆ ತಂತ್ರಜ್ಞಾನದ ಸಂಗಮವು ಉತ್ತುಂಗದಲ್ಲಿರುವುದರಿಂದ, ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರವು ತನ್ನ ಮೃದು ಶಕ್ತಿಯ ಮೂಲಕ ಮುಂಬರುವ ದಿನಗಳಲ್ಲಿ ಭಾರತವನ್ನು ಉನ್ನತ ಜಾಗತಿಕ ವಿಷಯ ರಚನೆಯ ಕೇಂದ್ರವನ್ನಾಗಿ ಮಾಡುವ ಅಪಾರ ಸಾಮರ್ಥ್ಯವನ್ನು ಹೊಂದಿದೆ.
ಕಥೆ ಹೇಳುವ ಶ್ರೀಮಂತ ಪರಂಪರೆ ಮತ್ತು ಕೋಡಿಂಗ್‌ನಲ್ಲಿನ ಉನ್ನತ ಕೌಶಲ್ಯ/ಪರಾಕ್ರಮವನ್ನು ಗಮನಿಸಿದರೆ, ಸಾಂಪ್ರದಾಯಿಕ ಜ್ಞಾನವನ್ನು ಪ್ರಜಾಪ್ರಭುತ್ವೀಕರಣಗೊಳಿಸಲು ಸತ್ಯವನ್ನು ಹೇಳುವುದು ತುಂಬಾ ಮುಖ್ಯ. ವಿಷಯ ಸಾಮಗ್ರಿ ಸೃಷ್ಟಿಯನ್ನು ಸಾಂಪ್ರದಾಯಿಕ ಜನಾಂಗೀಯವಾಗಿ ಮಾತ್ರವಲ್ಲದೆ ನೈತಿಕವಾಗಿಸುವಲ್ಲಿ ನಮ್ಮ ಕೌಶಲ್ಯಗಳನ್ನು ಬಳಸುವಲ್ಲಿಯೂ ನಾವು ಉತ್ತಮ ಸ್ಥಾನದಲ್ಲಿದ್ದೇವೆ. ಸೃಷ್ಟಿಕರ್ತರು ಎಲ್ಲಾ ತಲೆಮಾರುಗಳಲ್ಲಿ ಮಾನವ ತಿಳುವಳಿಕೆಯನ್ನು ಹೇಗೆ ತೀಕ್ಷ್ಣಗೊಳಿಸಿದರು ಎಂಬುದನ್ನು ವಿಶ್ವದ ಮುಂದೆ ತೋರಿಸಲು ವೇವ್ಸ್ ಸಜ್ಜಾಗಿದೆ. ಆದ್ದರಿಂದ ಸೃಜನಶೀಲತೆಯ ಎಲ್ಲಾ ಸ್ವರೂಪಗಳಲ್ಲಿ ಸೃಜನಶೀಲ ಪ್ರತಿಭೆಯನ್ನು ನಿರ್ಣಯಿಸುವುದು ಅವಶ್ಯವಾಗಿದೆ. ಅದು ರೀಲ್ ತಯಾರಿಕೆಯಾಗಿರಬಹುದು ಅಥವಾ ಸತ್ಯವನ್ನು ಹೇಳುವ ಹ್ಯಾಕಥಾನ್ ಆಗಿರಬಹುದು. ಉನ್ನತ ಕಾಮಿಕ್ ತಯಾರಕರು ಮತ್ತು ಅವರ ಸೃಜನಶೀಲ ಕಾಮಿಕ್ ಅನಿಮೇಷನ್ ಈಗಾಗಲೇ ಮಾಧ್ಯಮಗಳಲ್ಲಿ ಸೃಜನಶೀಲತೆಯ ವೇವ್ಸ್ (ಅಲೆಗಳನ್ನು) ಸೃಷ್ಟಿಸುತ್ತಿದೆ. ಶಾಸ್ತ್ರೀಯ ಸಂಗೀತ ಜಗತ್ತಿನಲ್ಲಿ, ದೂರದರ್ಶನ ವಾ ಉಸ್ತಾದ್‌ನಲ್ಲಿ ದಿಲ್ಲಿ ಘರಾನಾದ ಪ್ರತಿಭಾನ್ವೇಷಣೆ ಕಾರ್ಯಕ್ರಮವು ಸೃಜನಶೀಲತೆಯ ಸಾಂಪ್ರದಾಯಿಕ ಸ್ವರೂಪಗಳನ್ನು ಪುನರುಜ್ಜೀವನ ಗೊಳಿಸುತ್ತಿದೆ.
ಇದಲ್ಲದೆ, ನಮ್ಮ ಆಧುನಿಕ ಜೆನ್ ಝಡ್ ಸೃಷ್ಟಿಕರ್ತರು ತಮ್ಮ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪಿಯಾನೋ ಅಥವಾ ಇತರ ಯಾವುದೇ ಸಂಗೀತ ವಾದ್ಯವನ್ನು ನುಡಿಸಿದರೆ, ಇಲೆಕ್ಟ್ರಾನಿಕ್ ಡ್ಯಾನ್ಸ್ ಮತ್ತು ಮ್ಯೂಝಿಕ್ ಡಿಜಿಂಗ್ ಸ್ಪರ್ಧೆ (ಇಡಿಎಂ) ಸಹ ಹೊಸ ಯುಗದ ಪ್ರತಿಭಾವಂತ ಸೃಷ್ಟಿಕರ್ತರನ್ನು ಸೆಳೆಯುತ್ತಿದೆ. ಮುಂದಿನ ತಿಂಗಳು ನಡೆಯಲಿರುವ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಿನ ಸೀಸನ್ 1ರ ಗ್ರ್ಯಾಂಡ್ ಫಿನಾಲೆಯಲ್ಲಿ ವಿಶ್ವದ ಉನ್ನತ ಸೃಷ್ಟಿಕರ್ತರು ಗುರುತಿಸಿರುವ ಜಾಗತಿಕ ಸೃಜನಶೀಲ ಪ್ರತಿಭೆಗಳನ್ನು ಸೇರಲು ಮತ್ತು ಸ್ವತಃ ನೋಡಲು ಭಾರತವು ಈಗಾಗಲೇ ವಿಶ್ವದಾದ್ಯಂತ ಸುಮಾರು 160 ದೇಶಗಳನ್ನು ಸಂಪರ್ಕಿಸಿದೆ.
ಮೊದಲ ವೇವ್ಸ್ ಶೃಂಗಸಭೆಯು ಮಾಧ್ಯಮ ಮತ್ತು ಮನರಂಜನೆ (ಎಂ ಇ) ವಲಯಕ್ಕೆ ಒಂದು ಮೈಲಿಗಲ್ಲು ಘಟನೆಯಾಗಿದೆ. ಈ ಐತಿಹಾಸಿಕ ಶೃಂಗಸಭೆಯು ಜಾಗತಿಕ ನಾಯಕರು, ಮಾಧ್ಯಮ ವೃತ್ತಿಪರರು, ಕಲಾವಿದರು, ನೀತಿ ನಿರೂಪಕರು ಮತ್ತು ಉದ್ಯಮ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುತ್ತದೆ. ಶೃಂಗಸಭೆಯು ಭಾರತವನ್ನು ವಿಶ್ವದ ವಿಷಯ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ಪ್ರಯತ್ನಿಸುತ್ತದೆ. ಸೃಜನಶೀಲ ಕ್ಷೇತ್ರದಲ್ಲಿ ತಂತ್ರಜ್ಞಾನದ ಆಗಮನದೊಂದಿಗೆ, ಕೃತಕ ಬುದ್ಧಿಮತ್ತೆಯ ದುರುಪಯೋಗ, ಚಿತ್ರಗಳಲ್ಲಿ ಡೀಪ್ ಫೇಕ್‌ಗಳು, ಆಡಿಯೊ ಮತ್ತು ಅನಿಯಂತ್ರಿತ ಸ್ಟ್ರೀಮಿಂಗ್ ಕ್ರಾಂತಿಗಳು, ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆ, ತಪ್ಪು ಮಾಹಿತಿ ಹಾವಳಿ ಮತ್ತು ಪರಂಪರೆ ಮಾಧ್ಯಮ ಸುಸ್ಥಿರತೆಯ ಬಗ್ಗೆ ಕಳವಳಗಳು ಹೊಸದಾಗಿ ಉದ್ಭವಿಸಿದ ಕೆಲವು ಪ್ರಮುಖ ಸವಾಲುಗಳಾಗಿವೆ. ಈ ರೀತಿಯ ಸವಾಲುಗಳನ್ನು ಎದುರಿಸಲು ಮೊದಲ ಬಾರಿಗೆ ಯೋಜಿಸಿರುವ
ವೇವ್ಸ್ 2025, ಈ ಸಮಸ್ಯೆಗಳನ್ನು ಚರ್ಚಿಸುತ್ತದೆ ಮತ್ತು ಸಾಂಸ್ಕೃತಿಕ ವೈವಿಧ್ಯತೆ, ನಾವೀನ್ಯತೆ ಹಾಗೂ ಮಾಧ್ಯಮ ವೇದಿಕೆಗಳಿಗೆ ಸಮಾನ ಪ್ರವೇಶವನ್ನು ಉತ್ತೇಜಿಸುವ ಪರಿಹಾರಗಳನ್ನು ತರುವ ನಿರೀಕ್ಷೆ ಇದೆ. ವೇವ್ಸ್ 2025 ಕೇವಲ ಶೃಂಗಸಭೆಯಲ್ಲ; ಇದು ಹೆಚ್ಚು ಸಂಪರ್ಕಿತ, ಸೃಜನಶೀಲ ಮತ್ತು ಸಹಯೋಗದ ಪ್ರಪಂಚದ ಚಿಂತನಾಕ್ರಮ ಅಥವಾ ದೃಷ್ಟಿಕೋನವಾಗಿದೆ.
-ಧರ್ಮೇಂದ್ರ ತಿವಾರಿ, ಎಡಿಜಿ, ಪಿಐಬಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯ