ಮಾತುಗಳನ್ನು ಹಿಂಪಡೆಯಲಿ

Update: 2023-08-02 18:52 GMT

ಭೀಮಣ್ಣ ಹತ್ತಿಕುಣಿ, ಯಾದಗಿರಿ

ಮಾನ್ಯರೇ,

ಭಾಷಣವೊಂದರಲ್ಲಿ ಆರಗ ಜ್ಞಾನೇಂದ್ರ ಅವರು ಉ.ಕರ್ನಾಟಕದವರಿಗೆ ‘‘ನಮ್ಮ ದುರದೃಷ್ಟ ಎಂದರೆ ಆ ಭಾಗದವರೇ ಫಾರೆಸ್ಟ್ ಮಿನಿಸ್ಟರ್ ಆಗುತ್ತಾರೆ. ಅವರಿಗೆ ಮರ ಗಿಡ ಎನ್ನುವುದರ ಬಗ್ಗೆ ಗೊತ್ತಿಲ್ಲ. ಮರದ ನೆರಳು ಗೊತ್ತಿಲ್ಲ ಸುಟ್ಟು ಕರಕಲಾಗಿರುತ್ತಾರೆ’’ ಎಂದಿದ್ದಲ್ಲದೆ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆಯೂ ಅವಹೇಳನ ಮಾಡಿದ್ದಾರೆ. ಒಬ್ಬ ಹಿರಿಯ ಸಚಿವರಾಗಿದ್ದವರು ಇಷ್ಟು ಕೀಳಾಗಿ ಮಾತನಾಡುವುದು ಎಷ್ಟು ಸರಿ? ಕಾಡುಬೆಟ್ಟಗಳ ಬಗ್ಗೆ ಕಾಳಜಿ ಇರುವುದು ಕೇವಲ ಮಲೆನಾಡು ಭಾಗದವರಿಗಷ್ಟೇ ಅಲ್ಲ. ಉ.ಕರ್ನಾಟಕದವರಿಗೂ ಇದೆ. ಆರಗ ಜ್ಞಾನೇಂದ್ರ ತಾವಾಡಿದ ಮಾತುಗಳನ್ನು ಕೂಡಲೇ ಹಿಂಪಡೆಯಲಿ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News