ಕ್ಯಾನ್ಸರ್ ತಜ್ಞ ರವಿ ಕಣ್ಣನ್ ಅವರಿಗೆ ರೆಮೋನ್‌ ಮ್ಯಾಗ್ಸೆಸೆ ಪ್ರಶಸ್ತಿ

ಭಾರತದ ಕ್ಯಾನ್ಸರ್ ತಜ್ಞ ರವಿ ಕಣ್ಣನ್ ಅವರು ಪ್ರತಿಷ್ಠಿತ ರೆಮೋನ್‌ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ

Update: 2023-09-01 16:00 GMT

PHOTO: TWITTER

ಗುವಾಹಟಿ: ಭಾರತದ ಕ್ಯಾನ್ಸರ್ ತಜ್ಞ ರವಿ ಕಣ್ಣನ್ ಅವರು ಪ್ರತಿಷ್ಠಿತ ರೆಮೋನ್‌ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2023 ನೇ ಸಾಲಿನ ರೆಮೋನ್‌ ಮ್ಯಾಗ್ಸೆಸೆ ಪ್ರಶಸ್ತಿ ನಾಲ್ವರಿಗೆ ಹಂಚಿಕೆಯಾಗಿದ್ದು ಅದರಲ್ಲಿ ರವಿ ಕಣ್ಣನ್ ಕೂಡ ಒಬ್ಬರು.

2007 ರಿಂದ ಅಸ್ಸಾಂನ CCHRC ನಿರ್ದೇಶಕರಾಗಿರುವ ರವಿ ಕಣ್ಣನ್, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಡ ರೋಗಿಗಳಿಗೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಪ್ರಮುಖರಾಗಿದ್ದಾರೆ. 2007ರ ಮೊದಲು ರವಿ ಕಣ್ಣನ್ ಅವರು ಚೆನ್ನೈನ ಅಡ್ಯಾರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ರೆಮೋನ್‌ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಫಿಲಿಪ್ಪೀನ್ಸ್‌ ಮಾಜಿ ಅಧ್ಯಕ್ಷ ರೆಮೋನ್‌ ಮ್ಯಾಗ್ಸೆಸೆ ಅವರ ಸ್ಮರಣಾರ್ಥ, ರೆಮೋನ್ ಮ್ಯಾಗ್ಸಸೆ ಅವಾರ್ಡ್‌ ಫೌಂಡೇಶನ್ ವತಿಯಿಂದ 1958ರಿಂದ ಕೊಡಲಾಗುತ್ತಿದೆ. ಏಷ್ಯಾದಲ್ಲಿ ಸರ್ಕಾರಿ, ಸಮುದಾಯ, ವಿದೇಶಿ ಬಾಂಧವ್ಯ, ಆರೋಗ್ಯ, ಸಾಹಿತ್ಯ, ಕಲೆ, ಪತ್ರಿಕೋದ್ಯಮ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ಕೊಡಲಾಗುತ್ತದೆ ₹ 41 ಲಕ್ಷ ನಗದು ಮೊತ್ತವನ್ನು ಈ ಪ್ರಶಸ್ತಿ ಹೊಂದಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News