ರಾಯಚೂರು | ಹತ್ತಿ ಹೊಲಕ್ಕೆ ಆಕಸ್ಮಿಕ ಬೆಂಕಿ : ಅಪಾರ ಹಾನಿ
Update: 2024-12-31 12:06 GMT
ರಾಯಚೂರು : ತಾಲ್ಲೂಕಿನ ಆತ್ಕೂರು ಗ್ರಾಮದಲ್ಲಿ ಹತ್ತಿ ಹೊಲಕ್ಕೆ ಸೋಮವಾರ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, 2 ಎಕರೆಗೂ ಹೆಚ್ಚಿನ ಬೆಳೆ ಹಾನಿಯಾಗಿದೆ.
ರೈತ ನಾಗೇಶ ಎಂಬುವವರಿಗೆ ಸೇರಿದ ಹೊಲವನ್ನು ಲಕ್ಷ್ಮೀ ರೆಡ್ಡಿ ಹಾಗೂ ಮಹೇಶ ಎಂಬುವವರು ಲೀಸ್ ಪಡೆದು ವ್ಯವಸಾಯ ಮಾಡುತ್ತಿದ್ದರು. ಹೊಲದಲ್ಲಿ ಬೆಳೆದ ಹತ್ತಿ ಬೆಳೆಗೆ ಬೆಂಕಿ ತಗುಲಿದ್ದು, ಸರ್ವೆ 412ರ ಒಟ್ಟು 4.80 ಎಕರೆ ಜಮೀನಿನಲ್ಲಿ 2 ಎಕರೆಗೂ ಹೆಚ್ಚಿನ ಹತ್ತಿ ಬೆಳೆಗೆ ಸೋಮವಾರ ಮದ್ಯಾಹ್ನ 12 ಗಂಟೆಗೆ ಬೆಂಕಿ ತಗುಲಿದೆ. ಸಂಜೆ ಅಗ್ಮಿಶಾಮಕದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.