ರಾಯಚೂರು | ಸಚಿನ್ ಪಾಂಚಾಳ್ ಆತ್ಮಹತ್ಯೆ ಖಂಡಿಸಿ ವಿಶ್ವಕರ್ಮ ಸಮಾಜದಿಂದ ಪ್ರತಿಭಟನೆ
ರಾಯಚೂರು : ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಕಾರಣವಾದವರನ್ನು ಕೂಡಲೇ ಬಂಧಿಸಬೇಕು. ಸಚಿನ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘದ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬಳಿಕ ಸಂಘದ ರಾಜ್ಯಾಧ್ಯಕ್ಷ ಕನ್ನಡ ಸೋಮು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
‘ಸಚಿನ್ ಸಾವಿಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರು ಸೇರಿದಂತೆ ಉಳಿದವರ ವಿರುದ್ಧ ಈಗಾಗಲೇ ಎಫ್ಐಆರ್ ಆಗಿದೆ. ಪೊಲೀಸರು ತಕ್ಷಣ ಅವರನ್ನೆಲ್ಲ ಬಂಧಿಸಬೇಕು’ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಅವರು ಸಚಿನ್ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ಮಾರುತಿ ಬಡಿಗೇರ, ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಗುಂಜಳ್ಳಿ ಬಡಿಗೇರ, ಎಸ್.ರವೀಂದ್ರ ಕುಮಾರ್, ಗಂಗಾಧರ ಸ್ವಾಮೀಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌನೇಶ ಬಡಿಗೇರ, ಕಾರ್ಪೆಂಟರ್ ಸಂಘದ ಅಧ್ಯಕ್ಷ ಬ್ರಹ್ಮಯ್ಯ ಬಡಿಗೇರ, ವೆಂಕಟೇಶ್ ಕೊಂಡಾಪುರ, ಮೌನೇಶ್ ವಡವಟಿ, ರವಿ ಬೀಜನಗೆರೆ, ಶ್ರೀಕಾಂತ, ನರೇಶ್, ಸಿದ್ದು, ರಂಗಸ್ವಾಮಿ, ಮಹೇಶ್, ಭೀಮೇಷ್ ಬಡಿಗೇರ ಪಾಲ್ಗೊಂಡಿದ್ದರು.