ರಾಯಚೂರು | ಜ.5ರಂದು ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ

Update: 2024-12-31 15:09 GMT

ರಾಯಚೂರು : ದೇವದುರ್ಗದ ಮಲದಕಲ್ ಗೆಳೆಯರ ಬಳಗದ ವತಿಯಿಂದ ಹುಡೇದ್ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಜ.5ರಂದು ನಗರದ ಟ್ಯಾಗೋರ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ಮುಖಂಡ ಮಲ್ಲಿಕಾರ್ಜುನ ನಾಯಕ ಬೂದಿನಾಳ ತಿಳಿಸಿದರು

ಅವರಿಂದು ಮಾಧ್ಯಮಗೋಷ್ಠಿ ಯಲ್ಲಿ ಮಾತನಾಡಿ, ಸಹಾಯಕ ಪ್ರಾಧ್ಯಾಪಕ ಡಾ.ಮಾರುತಿ ಕುಮಾರ ನಾಯಕ ಮಲದಕಲ್ ನಾಯಕತ್ವದ ಮಲದಕಲ್ ಗೆಳೆಯರ ಬಳಗ ಹಾಗೂ ಜ್ಞಾನವೃಕ್ಷ ಸ್ಮರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದ ವತಿಯಿಂದ ಕಾರ್ಯಕ್ರಮ ನಡೆಯಲಿದ್ದು, ಸಂಸದ ಜಿ.ಕುಮಾರ ನಾಯಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗುರುಬಸವ ರಾಜಗುರು ಸಾನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.

ರಸಪ್ರಶ್ನೆ ಕಾರ್ಯಕ್ರಮಕ್ಕೆ ಈಗಾಗಲೇ 100 ಕ್ಕೂ ಹೆಚ್ಚು ತಂಡಗಳು ನೋಂದಣಿಯನ್ನು ಮಾಡಿಕೊಂಡಿದ್ದು, ಈ ಸ್ವರ್ಧೆಯು 2 ಹಂತದಲ್ಲಿ ನಡೆಯಲಿದ್ದು, ಮೊದಲನೆಯದಾಗಿ ಬಹು ಆಯ್ಕೆ ವಸ್ತುನಿಷ್ಠ ಪ್ರಶ್ನೆಗಳಿದ್ದು ಅದರಲ್ಲಿ ಮೊದಲ 5 ತಂಡಗಳು 2 ನೇ ಹಂತದಲ್ಲಿ ಮೌಖಿಕ ರಸಪ್ರಶ್ನೆ ಇದ್ದು, ಇದರಲ್ಲಿ ವಿಜೇತರಾದ ಮೊದಲ ತಂಡಕ್ಕೆ 25 ಸಾವಿರ ರೂ. ನಗದು ಹಾಗೂ ಪುಸ್ತಕಗಳು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 15 ಸಾವಿರ ರೂ., ತೃತೀಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ರೂ. ನಗದಿನೊಂದಿಗೆ ಪುಸ್ತಕವನ್ನು ವಿತರಿಸಲಾಗುತ್ತದೆ. 200 ನೋಂದಣಿ ಶುಲ್ಕದೊಂದಿಗೆ ಮೊಬೈಲ್ ಸಂಖ್ಯೆ 9739952143, 8105049051ಗೆ ಜ.3ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಹಾಯಕ ಪ್ರಾಧ್ಯಾಪಕ ಡಾ.ಮಾರುತಿ ಕುಮಾರ ನಾಯಕ, ಸಾಹಿತಿ ಈರಣ್ಣ ಬೆಂಗಾಲಿ, ವಿನೋದಕುಮಾರ ನಾಯಕ, ಉಪನ್ಯಾಸಕ ಶಿವಾನಂದ ಪಾಟೀಲ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News