ವಾಲ್ಮೀಕಿ ನಿಗಮದಲ್ಲಿ ಅಕ್ರಮ | ವಾರದೊಳಗೆ ಪ್ರಕರಣವನ್ನು ಸಿಬಿಐಗೆ ವಹಿಸದಿದ್ದರೆ ಹೋರಾಟ : ವಿಜಯೇಂದ್ರ

Update: 2024-05-30 06:54 GMT

ಶಿವಮೊಗ್ಗ: ಮಹರ್ಷಿ‌ ವಾಲ್ಮೀಕಿ‌ ನಿಗಮದಲ್ಲಿ ನಡೆದಿರುವ ಅವ್ಯವಹಾರ ಪ್ರಕರಣದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಂಡತನ ತೋರಿಸದೆ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಒಂದು ವಾರದೊಳಗೆ ಪ್ರಕರಣವನ್ನು ಸಿಬಿಐಗೆ ವಹಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು" ಎಂದು ಎಚ್ಚರಿಕೆ ನೀಡಿದರು.

ʼಚಂದ್ರಶೇಖರ್ ಅವರ ಮರಣ ಪತ್ರ ಸಹ ಬಹಿರಂಗವಾಗಿದೆ. ನಿಗಮದಲ್ಲಿ ದೊಡ್ಡ ಮಟ್ಟದ ಹಣಕಾಸಿನ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎಸ್.ಟಿಗೆ ಮೀಸಲಿಟ್ಟ ಹಣ ಪೋಲಾಗಿರುವುದು ಸ್ಪಷ್ಟವಾಗಿ‌ ಕಾಣುತ್ತಿದೆ. ಪ್ರಕರಣದ ಆಳ ಮತ್ತು ಅಗಲ ಪತ್ತೆ ಹಚ್ಚಬೇಕು.‌ ಇದರಲ್ಲಿ ಮೂರ್ನಾಲ್ಕು ಜನ ಅಧಿಕಾರಿಗಳು ಸೇರಿಕೊಂಡು ನೂರಾರು ಕೋಟಿ ಅವ್ಯವಹಾರ ಮಾಡಲು ಸಾಧ್ಯವಿಲ್ಲʼ ಎಂದು ಹೇಳಿದರು.

ʼಸಚಿವರ ಕಛೇರಿಯಿಂದ ದೂರವಾಣಿ ಕರೆ ಬಂದಿದ್ದು, ಒತ್ತಡ ಹಾಕಲಾಗಿದೆ. ಸಚಿವ ನಾಗೇಂದ್ರ ಅನುಮತಿ ಇಲ್ಲದೇ ದೊಡ್ಡ ಮೊತ್ತದ ಹಣವನ್ನು ತೆಲಂಗಾಣಕ್ಕೆ ವರ್ಗಾವಣೆ ಆಗಲು ಸಚಿವರ ಅನುಮತಿ ಬೇಕೇ ಬೇಕು. ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅನಧಿಕೃತವಾಗಿ ಖಾತೆ ತೆರೆದು ಹಣ ವರ್ಗಾವಣೆ ಆಗಿದೆ ಎಂದರೆ ಇದರ ಹಿಂದೆ ಪಿತೂರಿ ನಡೆದಿದೆ. ರಾಜ್ಯ ಸರಕಾರಗಳ‌ ನಡವಳಿಕೆ ಅನುಮಾನಾಸ್ಪದವಾಗಿದೆ. ಕರ್ನಾಟಕ ಹೈಕಮಾಂಡ್ ಗೆ ಎಟಿಎಂ ಆಗಿದೆʼ ಎಂದರು.

ʼಬೇರೆ ಬೇರೆ ಇಲಾಖೆಗಳಲ್ಲೂ ಈ‌ ರೀತಿಯ ಅವ್ಯವಹಾರ ನಡೆದಿದೆ ಎಂಬ ಅನುಮಾನ ಇದೆ. ಬರುವ ದಿನಗಳಲ್ಲಿ ಎಲ್ಲವೂ ಹೊರಗೆ ಬರಲಿದೆ. ಇದು ಸಣ್ಣ ಹಗರಣ ಅಲ್ಲ. ಇದರಲ್ಲಿ ದೊಡ್ಡ ದೊಡ್ಡ ಕುಳಗಳೂ ಭಾಗಿ ಆಗಿವೆ‌ ಎಂಬ ಅನುಮಾನ ಇದೆ. ಯಾವುದೇ ಆರೋಪ ಕೇಳಿ ಬಂದಾಗ ಬಿಜೆಪಿಯು ನಿಷ್ಪಕ್ಷಪಾತವಾಗಿ ತನಿಖೆ ಕೈಗೊಂಡಿತ್ತು. ವರದಿಯನ್ನೂ ಬಂದಿತ್ತು. ಆದರೆ ಇಲ್ಲಿ ಪ್ರಕರಣ ಮುಚ್ಚಿ‌ ಹಾಕುವ ಕೆಲಸ ಮಾಡಲಾಗುತ್ತಿದೆʼ ಎಂದು ದೂರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News