ಬಿಜೆಪಿಯಲ್ಲಿ ನನಗೂ, ಮಗನಿಗೂ ಭವಿಷ್ಯ ಇಲ್ಲ ಎಂದು ತಿಳಿದಿದ್ದರಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ: ಕೆ.ಎಸ್ ಈಶ್ವರಪ್ಪ

Update: 2024-04-17 09:41 GMT

ಶಿವಮೊಗ್ಗ: ಬಿಜೆಪಿಯಲ್ಲಿ ನನಗೂ ಮಗನಿಗೂ ಭವಿಷ್ಯ ಇಲ್ಲ ಎಂದೇ ತೀರ್ಮಾನಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಜನ ಕೈಹಿಡಿಯಲಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಪ್ಪ(ಯಡಿಯೂರಪ್ಪ)-ಮಕ್ಕಳು(ರಾಘವೇಂದ್ರ-ವಿಜಯೇಂದ್ರ) ಹಿಂದುತ್ವ ಬಿಟ್ಟು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಬೇಕಾದವರಿಗೆ ಟಿಕೆಟ್ ಕೊಡಿಸಿ,ಕಾಂಗ್ರೆಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳಿಲ್ಲವೇ ಎಂದು  ಪ್ರಶ್ನಿಸಿದರು.

ಯಡಿಯೂರಪ್ಪ ಉತ್ತರ ನೀಡಬೇಕು ಎಂದರು.

ಜೆಡಿಎಸ್ ಜೊತೆಗೆ ಮೈತ್ರಿ ಆದರೆ ಒಳಒಪ್ಪಂದ ಯಾರ ಜೊತೆಗೆ ಎಂಬುದನ್ನು ಬಿ ಎಸ್ ಯಡಿಯೂರಪ್ಪ ಮತ್ತು ಮಕ್ಕಳು ಸ್ಪಷ್ಟಪಡಿಸಬೇಕು.ನಾನು ಯೋಚಿಸಿಯೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವೆ. ರಾಜಕೀಯ ಬಲಿದಾನಕ್ಕೂ ನಾನು ಸಿದ್ಧ ಎಂದು ಹೇಳಿದರು.

ಒಳ ಒಪ್ಪಂದ ವ್ಯವಸ್ಥೆ ಬಿಜೆಪಿಯಲ್ಲಿ ಇರಲಿಲ್ಲ. ನಾವು‌ ನೇರವಾಗಿ ಕಾಂಗ್ರೆಸ್ ಗೆ ಸೆಡ್ಡು ಹೊಡೆದು 108 ಸೀಟು ಪಡೆದಿದ್ದೆವು. ಹಿಂದುತ್ವ ವಿಚಾರ ಪಕ್ಕಕ್ಕೆ ಸರಿಸಿ, ಜಾತಿ ರಾಜಕಾರಣ ಮತ್ತು ಒಳ ಒಪ್ಪಂದಿಂದಾಗಿ 60ಕ್ಕೆ ಬಂದು ಬಿಜೆಪಿ ತಲುಪಿದೆ. ಹೀಗೆ ಮುಂದುವರಿದರೆ ರಾಜ್ಯದಲ್ಲಿ ದೊಡ್ಡ ಆಘಾತ ಆಗಲಿದೆ ಎಂದರು.

ಈಶ್ವರಪ್ಪ ಅಂದರೆ ಯಾರು ಎಂದು ನನಗೆ ಗೊತ್ತಿಲ್ಲ ಎಂದು  ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಅವರು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ,  ಈಶ್ವರಪ್ಪ  ಯಾರೆಂದು ಗೊತ್ತಿಲ್ಲವೆಂದ ಮೇಲೆ ಈ ಹಿಂದೆ ನನ್ನ ಮನೆಗೇಕೆ‌ ಬಂದಿದ್ದರು ಎಂದು ಪ್ರಶ್ನಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News