ಮಹಿಳೆಯರ ಏಕದಿನ ರ‍್ಯಾಂಕಿಂಗ್ | 9ನೇ ಸ್ಥಾನಕ್ಕೇರಿದ ಹರ್ಮನ್ ಪ್ರೀತ್ ಕೌರ್

Update: 2024-11-05 16:11 GMT

ಹರ್ಮನ್ ಪ್ರೀತ್ ಕೌರ್ | PC : PTI 

ಹೊಸದಿಲ್ಲಿ : ಇತ್ತೀಚೆಗೆ ನ್ಯೂಝಿಲ್ಯಾಂಡ್ ವಿರುದ್ಧ ಸರಣಿ ಜಯಿಸಿರುವ ಭಾರತೀಯ ಮಹಿಳೆಯರ ಏಕದಿನ ತಂಡವು ತನ್ನ ಏಕದಿನ ರ‍್ಯಾಂಕಿಂಗ್ ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ.

ನಾಯಕಿ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ರ‍್ಯಾಂಕಿಂಗ್ ನಲ್ಲಿ 9ನೇ ಸ್ಥಾನಕ್ಕೇರಿದ್ದಾರೆ. ನ್ಯೂಝಿಲ್ಯಾಂಡ್ ವಿರುದ್ಧ ಅಂತಿಮ ಪಂದ್ಯದಲ್ಲಿ ನಿರ್ಣಾಯಕ 59 ರನ್ ಗಳಿಸಿದ್ದ ಕೌರ್ ಭಾರತ ತಂಡವು 2-1 ಅಂತರದಿಂದ ಸರಣಿ ಗೆಲ್ಲಲು ನೆರವಾಗಿದ್ದರು.

ಮೂರನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ 728 ಅಂಕದೊಂದಿಗೆ ರ‍್ಯಾಂಕಿಂಗ್ ನಲ್ಲಿ 4ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ತನ್ನ ಬೌಲಿಂಗ್ ನಲ್ಲಿ ಪ್ರಮುಖ ಪಾತ್ರವಹಿಸಿದ್ದ ದೀಪ್ತಿ ಶರ್ಮಾ ಅವರು 703 ಪಾಯಿಂಟ್ಸ್ನೊಂದಿಗೆ ಬೌಲರ್ಗಳ ರ‍್ಯಾಂಕಿಂಗ್ ನಲ್ಲಿ 2ನೇ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಇಂಗ್ಲೆಂಡ್ ನ ನಟಾಲಿ ಸಿವೆರ್-ಬ್ರಂಟ್ ಹಾಗೂ ಸೋಫಿ ಎಕ್ಸೆಲ್ಸ್ಟೋನ್ ಕ್ರಮವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಭಾರತ ತಂಡ ಇದೀಗ ಐಸಿಸಿ ಮಹಿಳೆಯರ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ 25 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News