ಸೌದಿ ಅರೇಬಿಯಾದ ಜಿದ್ದಾದಲ್ಲಿ ನ.24, 25ರಂದು ಐಪಿಎಲ್ ಮೆಗಾ ಹರಾಜು

Update: 2024-11-05 22:36 IST
Photo of IndianPremierLeague

PC : @IPL 

  • whatsapp icon

ರಿಯಾದ್: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)- 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿದೆ.

ಎರಡು ದಿನಗಳ ಈ ಮೆಗಾ ಹರಾಜು ಪ್ರಕ್ರಿಯೆಯನ್ನು ರಿಯಾದ್ ನಲ್ಲಿ ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸ್ಥಳವನ್ನು ಬದಲಾಯಿಸಲಾಗಿದ್ದು, ಸೌದಿ ಅರೇಬಿಯಾದ ಜಿದ್ದಾದಲ್ಲಿ ಐಪಿಎಲ್ ಹರಾಜು ನಡೆಯಲಿದೆ.

ಐಪಿಎಲ್ ಮೆಗಾ ಹರಾಜು ರವಿವಾರ ಮತ್ತು ಸೋಮವಾರ ನಡೆಯುತ್ತಿರುವುದು ಇದೇ ಮೊದಲಾಗಿದೆ. ಐಪಿಎಲ್ ಹರಾಜು ಪ್ರಕ್ರಿಯೆಯು ಸತತ 2ನೇ ವರ್ಷ ವಿದೇಶದಲ್ಲಿ ನಡೆಯುತ್ತಿದೆ. ಒಟ್ಟು 1,574 ಆಟಗಾರರು ಅದರಲ್ಲಿ 1,165 ಭಾರತೀಯ ಮತ್ತು 409 ಸಾಗರೋತ್ತರ ಆಟಗಾರರು ಮೆಗಾ ಹರಾಜಿಗೆ ಸಹಿ ಹಾಕಿದ್ದಾರೆ.

ಮೂಲಗಳ ಪ್ರಕಾರ, ಐಪಿಎಲ್ ಮೆಗಾ ಹರಾಜು ಜಿದ್ದಾದ ಅಬಾಡಿ ಅಲ್ ಜೋಹರ್ ಅರೆನಾದಲ್ಲಿ ನಡೆಯಲಿದೆ. ಎಲ್ಲಾ ಫ್ರಾಂಚೈಸ್ ಮಾಲಿಕರು ಮತ್ತು ಅಧಿಕಾರಿಗಳು ಹೋಟೆಲ್ ಶಾಂಗ್ರಿಲಾದಲ್ಲಿ ತಂಗಲಿದ್ದಾರೆ. ಹೋಟೆಲ್ ಶಾಂಗ್ರಿಲಾ ಹರಾಜು ಸ್ಥಳಕ್ಕೆ ಸಮೀಪದಲ್ಲಿದೆ. ಹರಾಜನ್ನು ಯಶಸ್ವಿಗೊಳಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News