ಜೊಕೊವಿಕ್ ತಲೆಗೆ ಬಡಿದ ನೀರಿನ ಬಾಟಲಿ

Update: 2024-05-11 16:30 GMT

 ನೊವಾಕ್ ಜೊಕೊವಿಕ್‌ | PC : PTI 

ರೋಮ್: ಇಟಾಲಿಯನ್ ಓಪನ್ ಪಂದ್ಯಾವಳಿಯಲ್ಲಿ ಶುಕ್ರವಾರ ವಿಶ್ವದ ನಂಬರ್ ವನ್ ಆಟಗಾರ ಸರ್ಬಿಯದ ನೊವಾಕ್ ಜೊಕೊವಿಕ್‌ರ ತಲೆಗೆ ನೀರಿನ ಬಾಟಲಿಯೊಂದು ಬಡಿದಿದೆ. ಇದರಿಂದಾಗಿ ಅಸ್ವಸ್ಥಗೊಂಡ ಅವರಿಗೆ ಚಿಕಿತ್ಸೆಯನ್ನು ನೀಡಲಾಯಿತು.

ಎರಡನೇ ಸುತ್ತಿನಲ್ಲಿ ಫ್ರಾನ್ಸ್‌ನ ಕೊರೆಂಟಿನ್ ಮೌಟೆಟ್ ವಿರುದ್ಧ 6-3, 6-1ರ ಗೆಲುವು ಸಾಧಿಸಿದ ಬಳಿಕ, ಜೊಕೊವಿಕ್ ಆಟೊಗ್ರಾಫ್‌ಗಳಿಗೆ ಸಹಿ ಹಾಕುತ್ತಿದ್ದರು. ಆಗ ಅವರ ತಲೆಗೆ ನೀರಿನ ಬಾಟಲಿಯೊಂದು ಬಡಿಯಿತು. ಅವರು ತಕ್ಷಣ ತನ್ನ ತಲೆಯನ್ನು ಹಿಡಿದುಕೊಂಡು ಮೊಣಕಾಲಿನ ಮೇಲೆ ಕುಸಿದು ಕುಳಿತರು. ಅವರು ಕೆಲವು ಸೆಕೆಂಡ್‌ಗಳ ಕಾಲ ಹಾಗೆಯೇ ನೆಲದಲ್ಲಿ ಕುಳಿತರು. ಆಗ ಸಿಬ್ಬಂದಿ ಅಲ್ಲಿಗೆ ಧಾವಿಸಿ ಬಂದು ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದರು.

ಆದರೆ, ಈ ಘಟನೆಯಲ್ಲಿ ಯಾವುದೇ ದುರುದ್ದೇಶವಿರಲಿಲ್ಲ. ಓರ್ವ ಪ್ರೇಕ್ಷಕರ ಚೀಲದಿಂದ ನೀರಿನ ಬಾಟಲಿಯೊಂದು ಜಾರಿ ದುರದೃಷ್ಟವಶಾತ್ ಅವರ ತಲೆಗೆ ಬಿದ್ದಿರುವುದು ಟಿವಿ ಕ್ಯಾಮರಾಗಳ ದೃಶ್ಯಗಳಿಂದ ಬೆಳಕಿಗೆ ಬಂತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News