ವಿಶ್ವಕಪ್‌ಗಾಗಿ ಅಮಿತಾಭ್ ಬಚ್ಚನ್‌ಗೆ ಗೋಲ್ಡನ್ ಟಿಕೆಟ್ ನೀಡಿದ ಬಿಸಿಸಿಐ

Update: 2023-09-05 14:52 GMT

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ,ನಟ ಅಮಿತಾಭ್ ಬಚ್ಚನ್‌ Photo:PTI

ಹೊಸದಿಲ್ಲಿ : ಭಾರತದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಹಿನ್ನೆಲೆಯಲ್ಲಿ ವಿಶಿಷ್ಟ ನಡೆಯೊಂದರಲ್ಲಿ ಬಿಸಿಸಿಐ ಮಂಗಳವಾರ ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್‌ಗೆ ಗೋಲ್ಡನ್ ಟಿಕೆಟ್ ನೀಡಿದೆ.

ಶ್ರೇಷ್ಠ ನಟನಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟಿಕಟನ್ನು ಹಸ್ತಾಂತರಿಸಿದರು. ಬಿಸಿಸಿಐ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿದ್ದು, ನಮ್ಮ ಗೋಲ್ಡನ್ ಐಕಾನ್‌ಗೆ ಗೋಲ್ಡನ್ ಟಿಕೆಟ್! ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನಮ್ಮ ಗೋಲ್ಡನ್ ಟಿಕೆಟನ್ನು ಸಹಸ್ರಮಾನದ ಸೂಪರ್‌ಸ್ಟಾರ್ ಸೀನಿಯರ್ ಬಚ್ಚನ್‌ಗೆ ಪ್ರದಾನಿಸುವ ಅವಕಾಶ ಪಡೆದರು ಎಂದು ಟ್ವೀಟ್ ಮಾಡಲಾಗಿದೆ.

ಲೆಜೆಂಡರಿ ನಟ ಹಾಗೂ ಕ್ರಿಕೆಟ್ ಪ್ರೇಮಿ ಬಚ್ಚನ್ ಅವರು ಟೀಮ್ ಇಂಡಿಯಾಕ್ಕೆ ನೀಡುತ್ತಿರುವ ಅಚಲ ಬೆಂಬಲವು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇದೆ . ಕ್ರಿಕೆಟ್ ವಿಶ್ವಕಪ್‌ಗಾಗಿ ಅವರು ನಮ್ಮೊಂದಿಗೆ ಸೇರುವುದರಿಂದ ನಾವು ರೋಮಾಂಚನಗೊಂಡಿದ್ದೇವೆ ಎಂದು ಬಿಸಿಸಿಐ ಪೋಸ್ಟ್ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News