ಆರ್ಕ್ಟಿಕ್ ಓಪನ್ 2023 ಬ್ಯಾಡ್ಮಿಂಟನ್ ಪಂದ್ಯಾವಳಿ: ಪಿ.ವಿ. ಸಿಂಧು ಸೆಮಿಫೈನಲ್‌ಗೆ

Update: 2023-10-14 18:39 GMT

ವಂಟಾ (ಫಿನ್ಲ್ಯಾಂಡ್), ಅ. 14: ಫಿನ್ಲ್ಯಾಂಡ್ನ ವಂಟಾದ ಎನರ್ಜಿಯ ಅರೀನಾದಲ್ಲಿ ನಡೆಯುತ್ತಿರುವ ಆರ್ಕ್ಟಿಕ್ ಓಪನ್ 2023 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ, ಭಾರತದ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ, ಅವರು ವಿಯೆಟ್ನಾಮ್ನ ತುಯ್ ಲಿನ್ ನಗುಯೆನ್ರನ್ನು 20-22, 22-20, 21-18 ಗೇಮ್ಗಳಿಂದ ಸೋಲಿಸಿದರು.

ಇದಕ್ಕೂ ಮುನ್ನ ಸಿಂಧು 26ನೇ ವಿಶ್ವ ರ್ಯಾಂಕಿಂಗ್ನ ವಿಯೆಟ್ನಾಮ್ ಆಟಗಾರ್ತಿಯನ್ನು ಕಳೆದ ವರ್ಷ ಸಿಂಗಾಪುರ ಓಪನ್ನಲ್ಲಿ ಎದುರಿಸಿದ್ದರು. ಅದರಲ್ಲೂ ಭಾರತೀಯ ಆಟಗಾರ್ತಿ ತನ್ನ ಎದುರಾಳಿಯನ್ನು ಪ್ರಯಾಸದಿಂದ ಸೋಲಿಸಿದ್ದರು. ಅಂತಿಮವಾಗಿ ಸಿಂಧು ಅಲ್ಲಿ ಪ್ರಶಸ್ತಿ ಜಯಿಸಿದ್ದರು.

ಆರ್ಕ್ಟಿಕ್ ಓಪನ್ 2023ರ ಫಲಿತಾಂಶಗಳನ್ನು 2024ರಲ್ಲಿ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಆಡುವ ಅರ್ಹತೆ ಗಳಿಕೆಗೆ ಪರಿಗಣಿಸಲಾಗುವುದು.

ಸಿಂಧು ಈ ವರ್ಷ 14 ಬಿಡಬ್ಲ್ಯುಎಫ್ ವಿಶ್ವ ಟೂರ್ ಪಂದ್ಯಾವಳಿಗಳಲ್ಲಿ ಆಡಿದ್ದಾರೆ. ಈ ಪಂದ್ಯಾವಳಿಗಳಲ್ಲಿ ಅವರು ಫೈನಲ್ಗೆ ಒಮ್ಮೆ ಹಾಗೂ ಸೆಮಿಫೈನಲ್ ಮತ್ತು ಕ್ವಾರ್ಟರ್ಫೈನಲ್ಗೆ ತಲಾ ಎರಡು ಬಾರಿ ತಲುಪಿದ್ದಾರೆ. ಉಳಿದ ಪಂದ್ಯಾವಳಿಗಳಲ್ಲಿ ಅವರು ಮೊದಲ ಅಥವಾ ಎರಡನೇ ಸುತ್ತುಗಳಲ್ಲೇ ನಿರ್ಗಮಿಸಿದ್ದಾರೆ. ಇತ್ತೀಚೆಗೆ ಚೀನಾದ ಹಾಂಗ್ಝೌನಲ್ಲಿ ನಡೆದ ಏಶ್ಯನ್ ಗೇಮ್ಸ್ನಲ್ಲೂ ಅವರು ಪದಕವೊಂದನ್ನು ಪಡೆಯಲು ವಿಫಲರಾಗಿದ್ದರು. ಪಿ.ವಿ. ಸಿಂಧು ಈಗ ಆರ್ಕ್ಟಿಕ್ ಓಪನ್ ಪಂದ್ಯಾವಳಿಯಲ್ಲಿ ಉಳಿದಿರುವ ಏಕೈಕ ಭಾರತೀಯ ಆಟಗಾರ/ಆಟಗಾರ್ತಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News