ನೀರಜ್ ಚೋಪ್ರಾರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ ಅರ್ಷದ್ ನದೀಮ್ ತಾಯಿ

Update: 2024-08-19 15:21 GMT

Photo : Twitter

ಇಸ್ಲಾಮಾಬಾದ್:‌ ಟೋಕಿಯೊ ಒಲಿಂಪಿಕ್ಸ್‌ ನ ಚಿನ್ನದ ಹುಡುಗ ನೀರಜ್ ಚೋಪ್ರಾ ಗೆ ಪಾಕಿಸ್ತಾನದಲ್ಲಿರುವ ತಮ್ಮ ಮನೆಗೆ ಭೇಟಿ ನೀಡುವಂತೆ ಅರ್ಷದ್ ನದೀಮ್ ಅವರ ತಾಯಿ ಆಹ್ವಾನ ನೀಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅರ್ಷದ್ ನದೀಮ್ ಅವರ ತಾಯಿ, ರಝಿಯಾ ಪರ್ವೀನ್ ಅವರು ನೀರಜ್ ಚೋಪ್ರಾ ಅವರಿಗೆ ಪಾಕಿಸ್ತಾನದಲ್ಲಿರುವ ತಮ್ಮ ಮನೆಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ.

ನೀರಜ್ ಚೋಪ್ರಾ ತನ್ನ ಮಗನ ಸ್ನೇಹಿತ. ಆತ ನನಗೂ ಮಗನಿದ್ದಂತೆ. ಹೀಗಾಗಿ ನಾನು ಅವರನ್ನು ನನ್ನ ಮನೆಗೆ ಆಹ್ವಾನಿಸುತ್ತೇನೆ ಎಂದು ರಝಿಯಾ ಪರ್ವೀನ್‌ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News