ಐಪಿಎಲ್ ಆಡಳಿತ ಮಂಡಳಿಗೆ ಅರುಣ್ ಧುಮಾಲ್, ಅವಿಷೇಕ್ ದಾಲ್ಮಿಯಾ ಮರು ಆಯ್ಕೆ
Update: 2024-09-30 15:50 GMT
ಬೆಂಗಳೂರು: ರವಿವಾರ ಇಲ್ಲಿ ನಡೆದ ಬಿಸಿಸಿಐನ ವಾರ್ಷಿಕ ಮಹಾಸಭೆಯಲ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ನಿರೀಕ್ಷೆಯಂತೆಯೇ, ಅರುಣ್ ಧುಮಾಲ್ ಹಾಗೂ ಅವಿಷೇಕ್ ದಾಲ್ಮಿಯಾ ಅವರು ಐಪಿಎಲ್ ಆಡಳಿತ ಮಂಡಳಿಗೆ ಮರು ಆಯ್ಕೆಯಾಗಿದ್ದಾರೆ.
ಭಾರತೀಯ ಕ್ರಿಕೆಟಿಗರ ಅಸೋಸಿಯಶೇನ್‌ನಿಂದ ನಾಮನಿರ್ದೇಶನಗೊಂಡಿರುವ ವಿ. ಚಾಮುಂಡೇಶ್ವರನಾಥ್‌ರನ್ನು ಆಟಗಾರರ ಪ್ರತಿನಿಧಿಯಾಗಿ ಐಪಿಎಲ್ ಆಡಳಿತ ಮಂಡಳಿಗೆ ಸೇರ್ಪಡೆಗೊಳಿಸಲಾಗಿದೆ.
ಲೆಕ್ಕ ಹಾಗೂ ಬಜೆಟ್‌ನ ಅನುಮೋದನೆಯಂತಹ ಹಣಕಾಸು ವಿಷಯಗಳ ಹೊರತಾಗಿ ಆಟಗಾರರ ರಿಟೆನ್ಶನ್, ರೈಟ್ ಟು ಮ್ಯಾಚ್ ಹಾಗೂ ಸಂಬಳದ ಮಿತಿಯಂತಹ ವಿಷಯಗಳನ್ನು ಒಳಗೊಂಡಿರುವ ಐಪಿಎಲ್ ಮಂಡಳಿಯ ಶನಿವಾರದ ಸಭೆಯ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ.