ಭಾರತ vs ಇರಾನ್ ಪುರುಷರ ಕಬಡ್ಡಿ ಫೈನಲ್‌: ಪಂದ್ಯ ಒಂದು ಗಂಟೆ ನಿಲ್ಲಲು ಕಾರಣವೇನು?

Update: 2023-10-07 15:57 GMT

Photo : X

ಹಾಂಗ್ ಝೌ : ಏಶ್ಯನ್ ಗೇಮ್ಸ್ ನ ಪುರುಷರ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತದ ತಂಡದ ನಾಯಕ ಪವನ್ ಸೆಹ್ರಾವತ್ ಮಾಡು-ಇಲ್ಲವೇ-ಮಡಿ ರೈಡ್ ಮಾಡಿದಾಗ ಕೊನೆಯ ನಿಮಿಷದಲ್ಲಿ ವಿವಾದ ಉಂಟಾಯಿತು. ಸೆಹ್ರಾವತ್ ಔಟ್ ಮಾಡಿದ್ದಾರೆಯೇ ಇಲ್ಲವೆ, ಹಳೆ ನಿಯಮ ಅಥವಾ ಹೊಸ ನಿಯಮವನ್ನು ಅಳವಡಿಸಲಾಗಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ತಮ್ಮ ವಿರುದ್ಧ ತೀರ್ಪು ಬಂದಾಗ ಉಭಯ ಆಟಗಾರರು ಮೈದಾನದಲ್ಲಿ ಪ್ರತಿಭಟನೆ ನಡೆಸಿದರು. ಎರಡೂ ತಂಡಗಳು ಸಾಕಷ್ಟು ಚರ್ಚೆ ನಡೆಸಿದ ನಂತರ ಪಂದ್ಯವನ್ನು ರದ್ದುಪಡಿಸಲಾಯಿತು. ಅಧಿಕಾರಿಗಳು ಭಾರತದ ಪರ ತೀರ್ಪು ನೀಡಿ 32-29 ಅಂತರದಿಂದ ಗೆಲುವು ಸಾಧಿಸಿದೆ ಎಂದು ಪ್ರಕಟಿಸಿದರು.

ಈ ವಿವಾದಾತ್ಮಕ ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಇರಾನ್ ತಂಡವನ್ನು 33-29 ಅಂಕಗಳ ಅಂತರದಿಂದ ಮಣಿಸಿ ಜಯಶಾಲಿಯಾಗಿದೆ. ಫೈನಲ್ ಪಂದ್ಯದುದ್ದಕ್ಕೂ ಉಭಯ ತಂಡಗಳು ಸಮಬಲದ ಹೋರಾಟ ನೀಡಿದ್ದು ಪಂದ್ಯ ಮುಗಿಯಲು ಒಂದು ನಿಮಿಷ ಹಾಗೂ 5 ಸೆಕೆಂಡ್ ಬಾಕಿ ಇರುವಾಗ ಸ್ಕೋರ್ 28-28ರಿಂದ ಟೈ ಆಗಿತ್ತು.

ಇರಾನ್ ಒಂದು ಹಂತದಲ್ಲಿ 10-6ರಿಂದ ಮುನ್ನಡೆಯಲ್ಲಿತ್ತು. ಆದರೆ ಭಾರತೀಯ ರೋಚಕ ಮರ ಹೋರಾಟ ನೀಡಿ ಮೊದಲಾರ್ಧದ ಅಂತ್ಯಕ್ಕೆ 17-13 ಮುನ್ನಡೆ ಪಡೆದರು. ಏಶ್ಯನ್ ಗೇಮ್ ನಲ್ಲಿ ಸತತ 7 ಬಾರಿ ಚಿನ್ನದ ಪದಕ ಜಯಿಸಿದ್ದ ಭಾರತದ ಪುರುಷರ ಕಬಡ್ಡಿ ತಂಡ 2018ರಲ್ಲಿ ಜಕಾರ್ತ ಗೇಮ್ಸ್ ನಲ್ಲಿ ಸೆಮಿ ಫೈನಲ್ ನಲ್ಲಿ ಸೋತಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News