ಏಷ್ಯನ್ ಗೇಮ್ಸ್: ಪದಕ ಗಳಿಕೆಯಲ್ಲಿ ಭಾರತ ಐತಿಹಾಸಿಕ 'ಶತಕ'

Update: 2023-10-07 04:08 GMT

Photo: twitter.com/narendramodi

ಹೊಸದಿಲ್ಲಿ: ಏಷ್ಯನ್ ಗೇಮ್ಸ್ ಕೂಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ನೂರು ಪದಕಗಳ ಸಾಧನೆ ಮಾಡಿದೆ. ಶುಕ್ರವಾರ 95 ಪದಕ ಗೆದ್ದಿದ್ದ ಭಾರತ, ಬಿಲ್ಲುಗಾರಿಕೆಯಲ್ಲಿ 3, ಕಬಡ್ಡಿಯಲ್ಲಿ 2, ಬ್ಯಾಡ್ಮಿಂಟನ್ ಹಾಗೂ ಕ್ರಿಕೆಟ್‍ನಲ್ಲಿ ತಲಾ 1 ಹೀಗೆ 100 ಪದಕಗಳನ್ನು ಖಾತರಿಪಡಿಸಿಕೊಂಡಿತ್ತು.
ಕೂಟದ ಕೊನೆಯ ದಿನವಾದ ಶನಿವಾರ ಭಾರತದ ಬಿಲ್ಲುಗಾರಿಕೆ ಪಟುಗಳು ನಾಲ್ಕು ಪದಕಗಳನ್ನು ಗೆದ್ದರೆ, ಕಬಡ್ಡಿಯಲ್ಲಿ ಚೀನಿ ತೈಪೆ ವಿರುದ್ಧ ಜಯ ಗಳಿಸಿದ ಭಾರತದ ಮಹಿಳಾ ಕಬಡ್ಡಿ ತಂಡ 100ನೇ ಪದಕವನ್ನು ಭಾರತಕ್ಕೆ ಗೆದ್ದುಕೊಟ್ಟಿತು.
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡಕ್ಕೆ ಮೂರನೇ ಚಿನ್ನದ ಪದಕವಾಗಿದೆ. ಕಳೆದ ಬಾರಿ ಭಾರತ ಬೆಳ್ಳಿಪದಕಕ್ಕೆ ತೃಪ್ತಿಪಟ್ಟಿತ್ತು. 100 ಪದಕಗಳ ಪೈಕಿ ಭಾರತ 25 ಚಿನ್ನ, 35 ಬೆಳ್ಳಿ ಮತ್ತು 40 ಕಂಚಿನ ಪದಕಗಳನ್ನು ಗೆದ್ದಿದೆ. ಈಗಾಗಲೇ ಖಾತರಿಯಾಗಿರುವ ಮತ್ತೆ ಕೆಲ ಪದಕಗಳು ಭಾರತದ ಬುಟ್ಟಿಗೆ ಸೇರಲಿವೆ.
Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News