ಪಾಕಿಸ್ತಾನದ ವಿರುದ್ಧ ಟಿ-20 ಸರಣಿಗೆ ಆಸ್ಟ್ರೇಲಿಯ ಕ್ರಿಕೆಟ್ ತಂಡ ಪ್ರಕಟ
ಮೆಲ್ಬರ್ನ್ : ಬಾರ್ಡರ್-ಗವಾಸ್ಕರ್ ಟ್ರೋಫಿ ಅಭಿಯಾನ ಆರಂಭವಾಗುವ ಹೊತ್ತಿಗೆ ಮುಕ್ತಾಯವಾಗಲಿರುವ ಮುಂಬರುವ ಪಾಕಿಸ್ತಾನದ ವಿರುದ್ಧದ ಟಿ-20 ಸರಣಿಗೆ ಆಸ್ಟ್ರೇಲಿಯ ಕ್ರಿಕೆಟ್ ತಂಡ ನೂತನ ನಾಯಕನನ್ನು ಹೊಂದಿರಲಿದ್ದು, ಕೆಲವು ಟೆಸ್ಟ್ ಕ್ರಿಕೆಟ್ ಸ್ಪೆಷಲಿಷ್ಟ್‌ಗಳು ಟಿ-20 ಸರಣಿಯಿಂದ ವಂಚಿತರಾಗಲಿದ್ದಾರೆ.
ಬ್ರಿಸ್ಬೇನ್, ಸಿಡ್ನಿ ಹಾಗೂ ಹೊಬರ್ಟ್‌ನಲ್ಲಿ ನಡೆಯಲಿರುವ ಟಿ-20 ಸರಣಿಗೆ 13 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದ್ದು, ಜೋಶ್ ಇಂಗ್ಲಿಸ್, ಆ್ಯಡಮ್ ಝಂಪಾ ಹಾಗೂ ಮ್ಯಾಟ್ ಶಾರ್ಟ್ ತಂಡದಲ್ಲಿದ್ದಾರೆ.
ಟಿ-20 ಸರಣಿಗೆ ಆಯ್ಕೆಯಾಗಿರುವ ಕೆಲವು ಆಟಗಾರರು ನವೆಂಬರ್ 18ರಂದು ನಡೆಯಲಿರುವ ಅಂತಿಮ ಟಿ-20 ಪಂದ್ಯದ ನಂತರ ಭಾರತ ತಂಡದ ವಿರುದ್ಧ ಪರ್ತ್‌ನಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ತಂಡವನ್ನು ಸೇರುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.
ಸೆಪ್ಟಂಬರ್‌ನಲ್ಲಿ ಇಂಗ್ಲೆಂಡ್ ಹಾಗೂ ಸ್ಕಾಟ್‌ಲ್ಯಾಂಡ್‌ನಲ್ಲಿ ನಡೆದ ಸೀಮಿತ ಓವರ್ ಕ್ರಿಕೆಟ್ ಸರಣಿಯ ವೇಳೆ ಗಾಯಗೊಂಡಿದ್ದ ವೇಗಿಗಳಾದ ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್ ಹಾಗೂ ಸ್ಪೆನ್ಸರ್ ಜಾನ್ಸನ್ ತಂಡಕ್ಕೆ ವಾಪಸಾಗಿದ್ದಾರೆ.
► ಆಸ್ಟ್ರೇಲಿಯದ ಟಿ-20 ತಂಡ:
ಸೀನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಜೇಕ್ ಫ್ರೆಸರ್-ಮ್ಯಾಕ್‌ಗುರ್ಕ್, ಆ್ಯರೊನ್ ಹಾರ್ಡಿ, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೋನಿಸ್, ಆ್ಯಡಮ್ ಝಂಪಾ.