ಆಸ್ಟ್ರೇಲಿಯನ್ ಓಪನ್ | ಸಬಲೆಂಕಾ, ಕೊಕೊ ಗೌಫ್ ನಾಲ್ಕನೇ ಸುತ್ತಿಗೆ ಪ್ರವೇಶ

Update: 2025-01-17 21:30 IST
ಆಸ್ಟ್ರೇಲಿಯನ್ ಓಪನ್ | ಸಬಲೆಂಕಾ, ಕೊಕೊ ಗೌಫ್ ನಾಲ್ಕನೇ ಸುತ್ತಿಗೆ ಪ್ರವೇಶ
  • whatsapp icon

ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಹಾಲಿ ಚಾಂಪಿಯನ್ ಅರಿನಾ ಸಬಲೆಂಕಾ ಹಾಗೂ ಅಮೆರಿಕದ ಆಟಗಾರ್ತಿ ಕೊಕೊ ಗೌಫ್ ನಾಲ್ಕನೇ ಸುತ್ತಿಗೆ ತಲುಪಿದ್ದಾರೆ.

ಶುಕ್ರವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಸಬಲೆಂಕಾ ಅವರು ಕ್ಲಾರಾ ಟೌಸನ್ರನ್ನು 7-6(5), 6-4 ಸೆಟ್ಗಳ ಅಂತರದಿಂದ ಮಣಿಸಿದರು.

1997-99ರ ನಂತರ ಮೆಲ್ಬರ್ನ್ ಪಾರ್ಕ್ನಲ್ಲಿ ಸತತ ಮೂರು ಪ್ರಶಸ್ತಿಗಳನ್ನು ಜಯಿಸಿದ ಮೊದಲ ಆಟಗಾರ್ತಿಯಾಗುವ ಕನಸು ಕಾಣುತ್ತಿರುವ ಸಬೆಲಂಕಾ ಮುಂದಿನ ಸುತ್ತಿನಲ್ಲಿ ಮ್ಯಾಗ್ಡಲೀನಾ ಫ್ರೆಚ್ ಅಥವಾ ಮಿರ್ರಾ ಆಂಡ್ರೀವಾರನ್ನು ಎದುರಿಸಲಿದ್ದಾರೆ. 1997-99ರಲ್ಲಿ ಮಾರ್ಟಿನಾ ಹಿಂಗಿಸ್ ಈ ಸಾಧನೆ ಮಾಡಿದ್ದರು.

ಕಳೆದ ವರ್ಷ ಸೆಮಿ ಫೈನಲ್ ತಲುಪಿದ್ದ ಕೊಕೊ ಗೌಫ್ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಕೆನಡಾದ ಲೇಲಾಹ್ ಫೆರ್ನಾಂಡೆಝ್ರನ್ನು 6-4, 6-2 ನೇರ ಸೆಟ್ಗಳಿಂದ ಮಣಿಸುವ ಮೂಲಕ 4ನೇ ಸುತ್ತು ತಲುಪಿದರು.

2023ರ ಯು.ಎಸ್. ಓಪನ್ ಚಾಂಪಿಯನ್ ಗೌಫ್ ಮುಂದಿನ ಸುತ್ತಿನಲ್ಲಿ ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಬೆಲೆಂಡಾ ಬೆನ್ಸಿಕ್ರನ್ನು ಎದುರಿಸಲಿದ್ದಾರೆ. ಒಸಾಕಾ ಗಾಯಾಳು ನಿವೃತ್ತಿಯಾದ ನಂತರ ಬೆನ್ಸಿಕ್ ಮುಂದಿನ ಸುತ್ತಿಗೇರಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News