ಐಪಿಎಲ್ ನಲ್ಲಿ ಧೋನಿ ಐತಿಹಾಸಿಕ ಸಾಧನೆ

Update: 2025-04-14 23:32 IST
ಐಪಿಎಲ್ ನಲ್ಲಿ ಧೋನಿ ಐತಿಹಾಸಿಕ ಸಾಧನೆ

Photo Source: @msdfansofficial/X.com

  • whatsapp icon

ಹೊಸದಿಲ್ಲಿ: ಐಪಿಎಲ್ ಪಂದ್ಯಾವಳಿಯಲ್ಲಿ 200 ಆಟಗಾರರನ್ನು ಔಟ್ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿರುವ ಎಂ.ಎಸ್. ಧೋನಿ ಐತಿಹಾಸಿಕ ಸಾಧನೆ ಮಾಡಿದರು.

ಸಿಎಸ್ಕೆ ನಾಯಕ ಧೋನಿ ಲಕ್ನೊ ವಿರುದ್ಧ ಸೋಮವಾರ ನಡೆದ ಪಂದ್ಯದ 14ನೇ ಓವರ್ ನಲ್ಲಿ ರವೀಂದ್ರ ಜಡೇಜ ಬೌಲಿಂಗ್ ನಲ್ಲಿ ಆಯುಷ್ ಬದೋನಿ ಅವರನ್ನು ಸ್ಟಂಪ್ಔಟ್ ಮಾಡುವ ಮೂಲಕ ಈ ಮೈಲಿಗಲ್ಲು ತಲುಪಿದರು.

43ರ ಹರೆಯದ ಧೋನಿ ತನ್ನ 271ನೇ ಐಪಿಎಲ್ ಪಂದ್ಯದಲ್ಲಿ 201 ಆಟಗಾರರನ್ನು ಔಟ್ ಮಾಡಿದ್ದು, ಇದರಲ್ಲಿ 155 ಕ್ಯಾಚ್ ಗಳು ಹಾಗೂ 46 ಸ್ಟಂಪಿಂಗ್ ಸೇರಿದೆ. ಈ ಸಾಧನೆಯ ಮೂಲಕ ಧೋನಿ 18 ವರ್ಷಗಳಿಂದ ಐಪಿಎಲ್ ನ ಶ್ರೇಷ್ಠ ವಿಕೆಟ್ ಕೀಪರ್ ಆಗಿ ಉಳಿದಿದ್ದಾರೆ.

ಧೋನಿಯ ನಂತರ ದಿನೇಶ್ ಕಾರ್ತಿಕ್(182), ಎಬಿ ಡಿ ವಿಲಿಯರ್ಸ್(126), ರಾಬಿನ್ ಉತ್ತಪ್ಪ(124), ವೃದ್ದಿಮಾನ್ ಸಹಾ(118)ಹಾಗೂ ವಿರಾಟ್ ಕೊಹ್ಲಿ (116) ಅವರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News