ಪ್ರಥಮ ಇನಿಂಗ್ಸ್: ಬಾಂಗ್ಲಾ 233ಕ್ಕೆ ಆಲೌಟ್
Update: 2024-09-30 09:46 GMT
ಹೊಸದಿಲ್ಲಿ: ಭಾರತ ಮತ್ತು ಬಾಂಗ್ಲಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ 233ಕ್ಕೆ ಆಲೌಟ್ ಆಗಿದ್ದು, ಆ ಬಳಿಕ ಬಿರುಸಿನ ಬ್ಯಾಟಿಂಗ್ ಆರಂಭಿಸಿದ ಭಾರತ 11 ಓವರ್ ನಲ್ಲಿ 110 ರನ್ ಗಳಿಸಿದೆ.
ಕಾನ್ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ 4ನೇ ದಿನದಂದು ಭಾರತವು ಬಾಂಗ್ಲಾದೇಶವನ್ನು 233 ರನ್ ಗಳಿಗೆ ಆಲೌಟ್ ಮಾಡಿದೆ. ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಗಳನ್ನು ಪಡೆದುಕೊಂಡಿದ್ದರು.
ಪಂದ್ಯ ಪ್ರಾರಂಭಗೊಳ್ಳುತ್ತಿದ್ದಂತೆಯೆ ಬಾಂಗ್ಲಾದೇಶಕ್ಕೆ ಆಘಾತ ನೀಡಿದ ಜಸ್ಪ್ರೀತ್ ಬೂಮ್ರಾ, ಮುಷ್ಫಿಕುರ್ ರಹೀಮ್ ವಿಕೆಟ್ ಕಿತ್ತರು. ನಂತರ, ಮುಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ನಾಯಕ ರೋಹಿತ್ ಶರ್ಮ ಹಿಡಿದ ಅಮೋಘ ಕ್ಯಾಚ್ ಗೆ ಲಿಟನ್ ದಾಸ್ ನಿರ್ಗಮಿಸಿದ್ದರು.