ಇಂಗ್ಲೆಂಡ್, ಆಸಿಸ್ ವಿರುದ್ಧದ ಸರಣಿಗಳಿಗೆ ಮಹಿಳಾ ಕ್ರಿಕೆಟ್ ತಂಡ ಪ್ರಕಟಿಸಿದ ಬಿಸಿಸಿಐ
ಮುಂಬೈ: ಮುಂಬರುವ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ20 ಸರಣಿ ಹಾಗೂ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ವಿರುದ್ಧದ ಎರಡು ಟೆಸ್ಟ್‍ಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಭಾರತೀಯ ಮಹಿಳಾ ತಂಡಗಳನ್ನು ಪ್ರಕಟಿಸಿದೆ.
ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ವೇಗಿ ರೇಣುಕಾ ಸಿಂಗ್ ತಂಡಕ್ಕೆ ಮರಳಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶ್ರೇಯಾಂಕಾ ಪಾಟೀಲ್ ಮತ್ತು ಸೇಕಾ ಇಶಾಖ್ ಟಿ20 ತಂಡದಲ್ಲಿ ಸ್ಥಾನಗಳನ್ನು ಪಡೆದಿದ್ದಾರೆ.
“ಮಹಿಳಾ ಆಯ್ಕೆಗಾರರ ಸಮಿತಿಯು ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ವಿರುದ್ಧದ ಎರಡು ಟೆಸ್ಟ್‍ಗಳಿಗೆ ಮಹಿಳಾ ತಂಡಗಳನ್ನು ಆಯ್ಕೆ ಮಾಡಿದೆ. ಆಸ್ಟ್ರೇಲಿಯ ವಿರುದ್ಧದ ಬಿಳಿ ಚೆಂಡಿನ (ಟಿ20 ಮತ್ತು ಏಕದಿನ ಮಾದರಿ) ಸರಣಿಗೆ ತಂಡವನ್ನು ನಂತರ ಆಯ್ಕೆ ಮಾಡಲಾಗುವುದು’’ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಎಲ್ಲಾ ಮಾದರಿಗಳ ಕ್ರಿಕೆಟ್‍ನಲ್ಲಿ ಹರ್ಮನ್‍ಪ್ರೀತ್ ಕೌರ್ ತಂಡಗಳನ್ನು ಮುನ್ನಡೆಸಲಿದ್ದಾರೆ. ಸ್ಮøತಿ ಮಂದಾನ ಉಪನಾಯಕಿಯಾಗಿರುತ್ತಾರೆ.
ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯು ಡಿಸೆಂಬರ್ 6ರಿಂದ 10ರವರೆಗೆ ನಡೆಯಲಿದೆ. ಬಳಿಕ ಡಿಸೆಂಬರ್ 14ರಿಂದ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ.
ಬಳಿಕ, ಭಾರತೀಯ ಮಹಿಳೆಯರು ಡಿಸೆಂಬರ್ 21ರಿಂದ ಆಸ್ಟ್ರೇಲಿಯ ವಿರುದ್ಧ ಏಕೈಕ ಟೆಸ್ಟ್ ಆಡಲಿದ್ದಾರೆ.
ತಂಡಗಳು
ಟಿ20 ತಂಡ: ಹರ್ಮನ್‍ಪ್ರೀತ್ ಕೌರ್ (ನಾಯಕಿ), ಸ್ಮøತಿ ಮಂದಾನ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮ, ದೀಪ್ತಿ ಶರ್ಮ, ಯಸ್ತಿಕಾ ಭಾಟಿಯ (ವಿಕೆಟ್‍ಕೀಪರ್), ರಿಚಾ ಘೋಷ್ (ವಿಕೆಟ್‍ಕೀಪರ್), ಅಮನ್‍ಜೋತ್ ಕೌರ್, ಶ್ರೇಯಾಂಕ ಪಾಟೀಲ್, ಮನ್ನತ್ ಕಶ್ಯಪ್, ಸೇಕಾ ಇಶಾಖ್, ರೇಣುಕಾ ಸಿಂಗ್ ಠಾಕೂರ್, ಟೈಟಸ್ ಸಾಧು, ಪೂಜಾ ವಸ್ತ್ರಾಕರ್, ಕನಿಕಾ ಅಹುಜ, ಮಿನ್ನು ಮಣಿ.
ಟೆಸ್ಟ್ ತಂಡ: ಹರ್ಮನ್‍ಪ್ರೀತ್ ಕೌರ್ (ನಾಯಕಿ), ಸ್ಮøತಿ ಮಂದಾನ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮ, ದೀಪ್ತಿ ಶರ್ಮ, ಯಸ್ತಿಕಾ ಭಾಟಿಯ (ವಿಕೆಟ್‍ಕೀಪರ್), ರಿಚಾ ಘೋಷ್ (ವಿಕೆಟ್‍ಕೀಪರ್), ಸ್ನೇಹ್ ರಾಣಾ, ಶುಭಾ ಸತೀಶ್, ಹರ್ಲೀನ್ ದೇವಲ್, ಸೇಕಾ ಇಶಾಖ್, ರೇಣುಕಾ ಸಿಂಗ್ ಠಾಕೂರ್, ಟೈಟಸ್ ಸಾಧು, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್.