ಎಟಿಪಿ ಫೈನಲ್ಸ್: ಬೋಪಣ್ಣ-ಎಬ್ಡನ್ ಜೋಡಿಗೆ 6ನೇ ಶ್ರೇಯಾಂಕ
ತೊರೀನೊ (ಇಟಲಿ) : ವರ್ಷಾಂತ್ಯದ ಎಟಿಪಿ ಫೈನಲ್ಸ್ನಲ್ಲಿ, ಭಾರತದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯದ ಜೊತೆಗಾರ ಮ್ಯಾಥ್ಯೂ ಎಬ್ಡನ್ ಪುರುಷರ ಡಬಲ್ಸ್ನಲ್ಲಿ ಆರನೇ ಶ್ರೇಯಾಂಕ ಪಡೆದಿದ್ದಾರೆ ಮತ್ತು ಬಾಬ್ ಬ್ರಯಾನ್ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.
ಅವರು ತಮ್ಮ ಮೊದಲ ಪಂದ್ಯವನ್ನು ಸೋಮವಾರ ಇಟಲಿಯ ನಾಲ್ಕನೇ ಶ್ರೇಯಾಂಕದ ಸಿಮೋನ್ ಬೊಲೆಲಿ ಮತ್ತು ಆ್ಯಂಡ್ರೀ ವವಸೊರಿ ವಿರುದ್ಧ ಆಡಲಿದ್ದಾರೆ.
ವರ್ಷಾಂತ್ಯದ ಫೈನಲ್ಸ್ನಲ್ಲಿ ಅಗ್ರ 8 ಸಿಂಗಲ್ಸ್ ಮತ್ತು ಅಗ್ರ 8 ಡಬಲ್ಸ್ ಆಟಗಾರರು ಪಾಲ್ಗೊಳ್ಳುತ್ತಾರೆ. ಈ ಪಂದ್ಯಾವಳಿಯೊಂದಿಗೆ ಈ ಋತುವಿನ ಟೆನಿಸ್ ಮುಕ್ತಾಯಗೊಳ್ಳುತ್ತದೆ.
ಪಂದ್ಯಾವಳಿಯು ನವೆಂಬರ್ 11ರಿಂದ 17ರವರೆಗೆ ನಡೆಯುತ್ತದೆ.
ಬಾಬ್ ಬ್ರಯಾನ್ ಗುಂಪಿನಲ್ಲಿರುವ ಇತರ ಎರಡು ಜೋಡಿಗಳೆಂದರೆ: ಜರ್ಮನಿಯ ಕೆವಿನ್ ಕ್ರಾವೀಟ್ಝ್ ಮತ್ತು ಟಿಮ್ ಪುಯೆಟ್ಝ್ ಹಾಗೂ ಕ್ರೊಯೇಶಿಯ-ಎಲ್ ಸಾಲ್ವರೋರ್ ಜೋಡಿ ಮಾರ್ಸೆಲೊ ಅರೆವಲೊ ಮತ್ತು ಮೇಟ್ ಪ್ಯಾವಿಚ್.
ಇನ್ನೊಂದು ಗುಂಪಿಗೆ ಬಾಬ್ ಬ್ರಯಾನ್ರ ಅವಳಿ ಸಹೋದರ ಮೈಕ್ ಬ್ರಯಾನ್ರ ಹೆಸರು ಇಡಲಾಗಿದೆ. ಅಮೆರಿಕದ ಈ ಅವಳಿ ಸಹೋದರರು ದೀರ್ಘ ಕಾಲ ಡಬಲ್ಸ್ನಲ್ಲಿ ಪ್ರಾಬಲ್ಯ ಮೆರೆದಿದ್ದರು.
ಪ್ರತಿಯೊಂದು ಗುಂಪಿನಲ್ಲಿ ಎರಡು ಅಗ್ರ ತಂಡಗಳು ಸೆಮಿಫೈನಲ್ಗೆ ತೇರ್ಗಡೆ ಹೊಂದುತ್ತವೆ.