ಬ್ರಿಸ್ಬೇನ್ | ಮೊದಲ ದಿನ ಮಳೆಯದ್ದೇ ಆಟ
Update: 2024-12-14 15:15 GMT
ಬ್ರಿಸ್ಬೇನ್ : ನಿರಂತರ ಮಳೆಯು ಭಾರತ-ಆಸ್ಟ್ರೇಲಿಯ ನಡುವಿನ ಮೂರನೇ ಟೆಸ್ಟ್‌ನ ಮೊದಲ ದಿನದಾಟವನ್ನು ಅಡ್ಡಿಪಡಿಸಿದ್ದಲ್ಲದೆ ಪೂರ್ಣ ದಿನದಾಟವನ್ನು ಕಣ್ತುಂಬಿಕೊಳ್ಳಲು ಕಾತರದಲ್ಲಿದ್ದ ಪ್ರೇಕ್ಷಕರಿಗೂ ಭಾರೀ ನಿರಾಶೆ ಉಂಟು ಮಾಡಿತು.
ಸ್ಟೇಡಿಯಮ್‌ಗೆ ಆಗಮಿಸಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದು ಲಭಿಸಿದೆ. ಮೊದಲ ದಿನದಾಟವಾದ ಶನಿವಾರ ಕೇವಲ 80 ಎಸೆತಗಳ ಪಂದ್ಯ ಆಡಲು ಸಾಧ್ಯವಾಗಿರುವ ಕಾರಣ ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ನೀಡಿದ್ದ ಹಣವನ್ನು ಸಂಪೂರ್ಣ ಸ್ವೀಕರಿಸಲು ಅರ್ಹರಾಗಿದ್ದಾರೆ.
15 ಓವರ್‌ಗಳಿಗಿಂತ ಕಡಿಮೆ ಬೌಲಿಂಗ್ ನಡೆಸಲು ಸಾಧ್ಯವಾಗಿರುವ ಕಾರಣ 30,145 ಪ್ರೇಕ್ಷಕರು ಸಂಪೂರ್ಣ ಹಣವನ್ನು ಸ್ವೀಕರಿಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಪ್ರಕಟಿಸಿದೆ.