ಭಾರತದಲ್ಲಿ ನಡೆಯಲಿರುವ ಬಾಕ್ಸಿಂಗ್ ಪ್ರದರ್ಶನ ಪಂದ್ಯದಲ್ಲಿ ಕಾನರ್ ಮೆಕ್‌ಗ್ರೆಗರ್-ಲೋಗನ್ ಪಾಲ್ ಹಣಾಹಣಿ
ಹೊಸದಿಲ್ಲಿ: ಭಾರತದಲ್ಲಿ ನಡೆಯಲಿರುವ ಪ್ರದರ್ಶನ ಪಂದ್ಯದಲ್ಲಿ ಡಬ್ಲ್ಯುಡಬ್ಲ್ಯುಇ ಸ್ಟಾರ್ ಬಾಕ್ಸರ್ ಲೋಗನ್ ಪಾಲ್ ಅವರನ್ನು ಎದುರಿಸಲು ಸಿದ್ದನಾಗಿದ್ದೇನೆ ಎಂದು ಎಂಎಂಎ ಸ್ಟಾರ್ ಕಾನರ್ ಮೆಕ್‌ಗ್ರೆಗರ್ ಮಂಗಳವಾರ ಎಕ್ಸ್‌ನ ಮೂಲಕ ಸ್ವತಃ ಖಚಿತಪಡಿಸಿದ್ದಾರೆ.
ಈ ಮೂಲಕ ಬಾಕ್ಸಿಂಗ್‌ನಲ್ಲಿ ತನ್ನ ಮುಂದಿನ ಹೆಜ್ಜೆಯ ಕುರಿತ ಊಹಾಪೋಹಕ್ಕೆ ತೆರೆ ಎಳೆದರು.
ಇಲಿಯಾ ಟೊಪುರಿಯಾ ಜೊತೆಗಿನ ಪಂದ್ಯದ ಕುರಿತ ವದಂತಿಗಳು ಸುಳ್ಳು. ಭಾರತದಲ್ಲಿ ನಡೆಯಲಿರುವ ಬಾಕ್ಸಿಂಗ್ ಪ್ರದರ್ಶನ ಪಂದ್ಯದಲ್ಲಿ ಲೋಗನ್ ಪಾಲ್ ಅವರನ್ನು ಎದುರಿಸಲು ನಾನು ಅಂಬಾನಿ ಕುಟುಂಬದೊಂದಿಗೆ ಪ್ರಾಥಮಿಕ ಒಪ್ಪಂದ ಮಾಡಿಕೊಂಡಿದ್ದೇನೆ. ನಾನು ಆ ಪಂದ್ಯಕ್ಕೆ ಒಪ್ಪಿಗೆ ನೀಡಿದ್ದೇನೆ. ಆ ನಂತರ ಅಕ್ಟಾಗನ್‌ಗೆ ಮರಳಲು ಪ್ರಯತ್ನಿಸುತ್ತೇನೆ ಎಂದು ಮೆಕ್‌ಗ್ರೆಗರ್ ಟ್ವೀಟ್ ಮಾಡಿದ್ದಾರೆ.
ಮೆಕ್‌ಗ್ರೆಗರ್ ಈ ಘೋಷಣೆ ಮೂಲಕ ಯುಎಫ್‌ಸಿಗೆ ಅವರ ಮರಳಿಕೆಗೆ ವೇದಿಕೆ ಸಿದ್ಧವಾಗಿದೆ. ಮೆಕ್‌ಗ್ರೆಗರ್ ಅವರು ಅಕ್ಟಾಗನ್‌ಗೆ ಪುನರಾಗಮನ ಮಾಡುವುದಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಭಾರತದಲ್ಲಿ ಅವರ ಪ್ರದರ್ಶನ ಪಂದ್ಯವು ಅವರ ವೃತ್ತಿಜೀವನದಲ್ಲಿ ಒಂದು ಹೊಸ ಅಧ್ಯಾಯಕ್ಕೆ ಕಾರಣವಾಗಬಹುದು.
ಪ್ರದರ್ಶನ ಪಂದ್ಯದ ದಿನಾಂಕ, ಸ್ಥಳ ಹಾಗೂ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಆದರೆ ಮೆಕ್‌ಗೆಗರ್ ಹಾಗೂ ಪಾಲ್ ನಡುವಿನ ಹೋರಾಟವನ್ನು ನೋಡಲು ಇಡೀ ಜಗತ್ತು ಕಾಯುತ್ತಿದೆ.
The rumors of a bout with topurio are false. I am in preliminary agreements with the Ambani family to face Logan Paul in a boxing exhibition in India.
— Conor McGregor (@TheNotoriousMMA) December 17, 2024
I have agreed.
I will then seek my return to the Octagon.