ಭಾರತ ತಂಡಕ್ಕೆ 275 ರನ್‌ಗಳ‌ ಗುರಿ: ಕುತೂಹಲಕಾರಿ ಘಟ್ಟದಲ್ಲಿ ಮೂರನೆಯ ಟೆಸ್ಟ್

Update: 2024-12-18 05:13 GMT

Photo credit:X/BCCI

ಬ್ರಿಸ್ಬೇನ್: ಭಾರತ-ಆಸ್ಟ್ರೇಲಿಯ ನಡುವಿನ ಮೂರನೆ ಟೆಸ್ಟ್ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದ್ದು, ಭಾರತಕ್ಕೆ 275 ರನ್‌ಗಳ ಗುರಿ ನೀಡಲಾಗಿದೆ.

ನಿನ್ನೆ 9 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದ್ದ ಭಾರತ ತಂಡ, ಇಂದು ಆಟ ಮುಂದುವರಿಸಿ, ಕೇವಲ 8 ರನ್ ಪೇರಿಸಿ ಆಲೌಟ್ ಆಯಿತು. ಇದರೊಂದಿಗೆ 185 ರನ್‌ಗಳ ಹಿನ್ನಡೆ ಅನುಭವಿಸಿತು.

ಆದರೆ, ಎರಡನೆ ಇನಿಂಗ್ಸ್ ಗೆ ಆಗಮಿಸಿದ ಆಸ್ಟ್ರೇಲಿಯ ಬ್ಯಾಟರ್‌ಗಳಿಗೆ ಭಾರತದ ವೇಗಿಗಳು ಬಿಸಿ ಮುಟ್ಟಿಸಿದರು. ಕೇವಲ 89 ರನ್ ಆಗುವುದರೊಳಗೆ ಆಸ್ಟ್ರೇಲಿಯ ತಂಡದ 7 ಪ್ರಮುಖ ವಿಕೆಟ್‌ಗಳು ಪತನಗೊಂಡವು. ನಂತರ ಎರಡನೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಆಸ್ಟ್ರೇಲಿಯ ತಂಡ, ಭಾರತಕ್ಕೆ 275 ರನ್‌ಗಳ ಸಾಧಾರಣ ಗುರಿ ನೀಡಿದೆ. ಪಂದ್ಯ ಮುಗಿಯಲು ಇನ್ನೂ 54 ಓವರ್‌ಗಳ ಬಾಕಿ ಇದ್ದು, ಈ ಪೈಕಿ ಭಾರತ ತಂಡ 2.1 ಓವರ್‌ಗಳನ್ನು ಎದುರಿಸಿ, ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದೆ.

ಭಾರತ ತಂಡದ ಜಸ್‌ಪ್ರೀತ್ ಬುಮ್ರಾ ಮೂರು ವಿಕೆಟ್, ಮುಹಮ್ಮದ್ ಸಿರಾಜ್ ಹಾಗೂ ಆಕಾಶ್‌ದೀಪ್ ತಲಾ ಎರಡು ವಿಕೆಟ್ ಪಡೆದರು.

ಸದ್ಯ ಮಳೆಯ ಅಡಚಣೆಯಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News