ಒಲಿಂಪಿಕ್ಸ್‌ ನಲ್ಲಿ ಜೊತೆಯಾಗಿ ಆಡಲಿರುವ ಕಾರ್ಲೋಸ್ ಅಲ್ಕಾರಝ್, ರಫೇಲ್ ನಡಾಲ್

Update: 2024-06-13 16:56 GMT

ಕಾರ್ಲೋಸ್ ಅಲ್ಕಾರಝ್, ರಫೇಲ್ ನಡಾಲ್ | PC: NDTV 

 

ಮ್ಯಾಡ್ರಿಡ್ : ಫ್ರೆಂಚ್ ಓಪನ್ ಚಾಂಪಿಯನ್‍ಗಳಾದ ಕಾರ್ಲೋಸ್ ಅಲ್ಕಾರಝ್ ಮತ್ತು ರಫೇಲ್ ನಡಾಲ್‍ರನ್ನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಡುವ ಸ್ಪೇನ್ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಸ್ಪೇನ್‍ನ ಟೆನಿಸ್ ಸಂಸ್ಥೆ ಆರ್‍ಎಫ್‍ಇಟಿ ಬುಧವಾರ ಘೋಷಿಸಿದೆ.

ಎರಡನೇ ವಿಶ್ವ ರ‍್ಯಾಂಕಿಂಗ್‍ನ ಅಲ್ಕಾರಝ್ ಕಳೆದ ವಾರಂತ್ಯದಲ್ಲಿ ಪ್ಯಾರಿಸ್‍ನ ಮಣ್ಣಿನ ಅಂಗಳದಲ್ಲಿ ತನ್ನ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2024ರ ಒಲಿಂಪಿಕ್ಸ್ ಪ್ಯಾರಿಸ್‍ನಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ನಡೆಯಲಿದೆ.

ನಡಾಲ್ ತನ್ನ ವೃತ್ತಿಜೀವನದಲ್ಲಿ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರಲ್ಲಿ 14 ಫ್ರೆಂಚ್ ಓಪನ್ ಪ್ರಶಸ್ತಿಗಳು. ಆದರೆ, ಗಾಯದಿಂದ ಚೇತರಿಸುವುದಕ್ಕಾಗಿ 16 ತಿಂಗಳು ಸ್ಪರ್ಧೆಯಿಂದ ಹೊರಗಿದ್ದ ಬಳಿಕ ಎಪ್ರಿಲ್ ತಿಂಗಳಲ್ಲಿ ಅವರು ಮೈದಾನಕ್ಕೆ ಮರಳಿದ್ದಾರೆ. ಈಗ ಅವರು 264ನೇ ವಿಶ್ವ ರ‍್ಯಾಂಕಿಂಗ್ ಹೊಂದಿದ್ದಾರೆ.

ಒಲಿಂಪಿಕ್ಸ್‌ ನಲ್ಲಿ ಸಿಂಗಲ್ಸ್ ವಿಭಾಗಗಳಲ್ಲಿ ಸ್ಪರ್ಧಿಸುವುದರ ಜೊತೆಗೆ, 21 ವರ್ಷದ ಅಲ್ಕಾರಝ್ ಮತ್ತು 38 ವರ್ಷದ ನಡಾಲ್ ಡಬಲ್ಸ್ ವಿಭಾಗಗಳಲ್ಲೂ ಸ್ಪರ್ಧಿಸುವರು.

ಸ್ಪೇನ್‍ನ ಪುರುಷರ ತಂಡದಲ್ಲಿ ಈ ಇಬ್ಬರ ಜೊತೆಗೆ 32ನೇ ವಿಶ್ವ ರ‍್ಯಾಂಕಿಂಗ್‍ನ ಅಲೆಜಾಂಡ್ರೊ ಡೇವಿಡೊವಿಚ್ ಫೊಕಿನ, ಪಾಬ್ಲೊ ಕರೀನೊ ಬುಸ್ಟ ಮತ್ತು ಎರಡನೇ ವಿಶ್ವ ರ‍್ಯಾಂಕಿಂಗ್‍ನ ಡಬಲ್ಸ್ ಆಟಗಾರ ಮಾರ್ಸೆಲ್ ಗ್ರಾನೊಲರ್ಸ್ ಕೂಡಾ ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News