ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲ್ ಭಾಗವಹಿಸುವ ಭಾರತೀಯ ಕ್ರೀಡಾಳುಗಳ ಸಂಪೂರ್ಣ ಪಟ್ಟಿ

Update: 2024-07-17 16:24 GMT

PC : Paris Olympics.com

ಹೊಸದಿಲ್ಲಿ : 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 26ರಿಂದ ಆರಂಭವಾಗಲಿದ್ದು ಇದರಲ್ಲಿ ಭಾಗವಹಿಸಲು ಒಟ್ಟು 117 ಭಾರತೀಯ ಕ್ರೀಡಾಪಟುಗಳು (7 ಮೀಸಲು ಅತ್ಲೀಟ್ ಗಳು ಸೇರಿದಂತೆ) ಫ್ರೆಂಚ್ ರಾಜಧಾನಿಗೆ ಪ್ರಯಾಣ ಬೆಳೆಸಲಿದ್ದಾರೆ.

ಅತ್ಲೆಟಿಕ್ಸ್ ವಿಭಾಗದಿಂದ 29 ಸದಸ್ಯರು(11 ಮಹಿಳೆಯರು ಹಾಗೂ 19 ಪುರುಷರು), ಶೂಟಿಂಗ್(21)ಹಾಗೂ ಹಾಕಿ(19)ಕ್ರೀಡೆಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಅತ್ಲೀಟ್ ಗಳು ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿದ್ದಾರೆ.

8 ಆಟಗಾರರು ಟೇಬಲ್ ಟೆನಿಸ್ ಅನ್ನು ಪ್ರತಿನಿಧಿಸಲಿದ್ದಾರೆ. ಬ್ಯಾಡ್ಮಿಂಟನ್ ನಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಸಹಿತ 7 ಸ್ಪರ್ಧಾಳುಗಳು ಕಣದಲ್ಲಿದ್ದಾರೆ.

ಕುಸ್ತಿ(6), ಆರ್ಚರಿ(6) ಹಾಗೂ ಬಾಕ್ಸಿಂಗ್(6)ನಲ್ಲಿ ತಲಾ ಆರು ಪ್ರತಿನಿಧಿಗಳಿದ್ದಾರೆ. ಆ ನಂತರ ಗಾಲ್ಫ್(4), ಟೆನಿಸ್(3), ಸ್ವಿಮ್ಮಿಂಗ್(2), ಸೀಲಿಂಗ್(2) ಹಾಗೂ ಜುಡೊ, ಕುದುರೆ ಸವಾರಿ, ರೋವಿಂಗ್ ಹಾಗೂ ವೇಟ್ಲಿಫ್ಟಿಂಗ್(ತಲಾ 1) ಇದ್ದಾರೆ.

ಕ್ರೀಡಾ ಸಚಿವಾಲಯದಿಂದ ಅನುಮೋದಿತವಾಗಿರುವ ಪ್ಯಾರಿಸ್ 2024ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ ಇಲ್ಲಿದೆ..

ಅತ್ಲೆಟಿಕ್ಸ್ (27+2)

ಪುರುಷರ ವಿಭಾಗ

ಸರ್ವೇಶ್ ಕುಶಾರೆ-ಪುರುಷರ ಹೈಜಂಪ್

ಸೂರಜ್ ಪನ್ವಾರ್-ಮ್ಯಾರಥಾನ್ ರೇಸ್ ವಾಕ್ ಮಿಕ್ಸೆಡ್ ರಿಲೇ

ಅಕ್ಷ್ದೀಪ್ ಸಿಂಗ್, ವಿಕಾಸ್ ಸಿಂಗ್, ಪರಮ್ಜಿತ್ ಬಿಷ್ಟ್ಟ್-ಪುರುಷರ 20 ಕಿ.ಮೀ.ರೇಸ್ವಾಕ್

ಕಿಶೋರ್ ಜೆನಾ, ನೀರಜ್ ಚೋಪ್ರಾ-ಪುರುಷರ ಜಾವೆಲಿನ್ ಎಸೆತ

ಮುಹಮ್ಮದ್ ಅನಸ್, ಮುಹಮ್ಮದ್ ಅಜ್ಮಲ್, ಅಮೋಜ್ ಜೇಕಬ್, ಸಂತೋಷ್ ತಮಿಳರಸನ್, ರಾಜೇಶ್ ರಮೇಶ್-ಪುರುಷರ 4-400 ಮೀ. ರಿಲೇ

ಅವಿನಾಶ್ ಸಾಬ್ಳೆ-ಪುರುಷರ 3,000 ಮೀ. ಸ್ಟೀಪಲ್ಚೇಸ್

ತಜಿಂದರ್ಪಾಲ್ ಸಿಂಗ್ ತೂರ್-ಪುರುಷರ ಶಾಟ್ಪುಟ್

ಅಬ್ದುಲ್ಲಾ ಅಬೂಬಕರ್, ಪ್ರವೀಲ್ ಚಿತ್ರವೇಲ್-ಪುರುಷರ ಟ್ರಿಪಲ್ ಜಂಪ್

ಜೆಸ್ವಿನ್ ಅಲ್ಡ್ರಿನ್-ಪುರುಷರ ಲಾಂಗ್ ಜಂಪ್

ಮಹಿಳೆಯರ ವಿಭಾಗ

ಅನ್ನು ರಾಣಿ-ಮಹಿಳೆಯರ ಜಾವೆಲಿನ್ ಎಸೆತ

ಪಾರುಲ್ ಚೌಧರಿ-ಮಹಿಳೆಯರ 3,000 ಮೀ.ಸ್ಟೀಪಲ್ಚೇಸ್, ಮಹಿಳೆಯರ 5,000 ಮೀ.

ಕಿರಣ್ ಪಹಾಲ್-ಮಹಿಳೆಯರ 400 ಮೀ., ಮಹಿಳೆಯರ 4-400 ಮೀ.ರಿಲೇ

ಜ್ಯೋತಿ ಯರ್ರಾಜಿ-ಮಹಿಳೆಯರ 100 ಮೀ. ಹರ್ಡಲ್ಸ್

ಅಂಕಿತಾ ಧ್ಯಾನಿ-ಮಹಿಳೆಯರ 5,000 ಮೀ. ಓಟ

ಪ್ರಿಯಾಂಕಾ ಗೋಸ್ವಾಮಿ-ಮಹಿಳೆಯರ 20 ಕಿ.ಮೀ. ರೇಸ್ವಾಕ್, ಮ್ಯಾರಥಾನ್ ರೇಸ್ ವಾಕ್ ಮಿಕ್ಸೆಡ್ ರಿಲೇ

ಜ್ಯೋತಿಕಾ ಶ್ರೀ ದಂಡಿ, ಶುಭಾ ವೆಂಕಟೇಶನ್, ವಿದ್ಯಾ ರಾಮರಾಜ್, ಪೂವಮ್ಮ ಎಂ.ಆರ್.-ಮಹಿಳೆಯರ 4-400 ಮೀ.ರಿಲೇ

ಅತ್ಲೆಟಿಕ್ಸ್ ಮೀಸಲು-

ಪ್ರಾಚಿ, ಮಿಜೊ ಚಾಕೊ ಕುರಿಯನ್

ಆರ್ಚರಿ(6)

ಪುರುಷರ ರಿಕರ್ವ್ ವಿಭಾಗ

ಧೀರಜ್ ಬೊಮ್ಮದೇವರ, ತರುಣ್ದೀಪ್ ರಾಯ್, ಪ್ರವೀಣ್ ಜಾಧವ್

ಮಹಿಳೆಯರ ರಿಕರ್ವ್ ವಿಭಾಗ

ಭಜನ್ ಕೌರ್, ದೀಪಿಕಾ ಕುಮಾರಿ, ಅಂಕಿತಾ ಭಕತ್

ಬ್ಯಾಡ್ಮಿಂಟನ್(7)

ಪುರುಷರ ವಿಭಾಗ: ಎಚ್.ಎಸ್. ಪ್ರಣಯ್, ಲಕ್ಷ್ಯ ಸೇನ್-ಸಿಂಗಲ್ಸ್

ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ-ಡಬಲ್ಸ್

ಮಹಿಳೆಯರ ವಿಭಾಗ: ಪಿ.ವಿ. ಸಿಂಧು-ಸಿಂಗಲ್ಸ್

ಅಶ್ವಿನಿ ಪೊನ್ನಪ್ಪ, ತನಿಶಾ ಕ್ರಾಸ್ಟೊ-ಡಬಲ್ಸ್

ಬಾಕ್ಸಿಂಗ್(6)

ಪುರುಷರ ವಿಭಾಗ: ನಿಶಾಂತ್ ದೇವ್-71ಕೆಜಿ, ಅಮಿತ್ ಪಾಂಘಾಲ್-51ಕೆಜಿ

ಮಹಿಳೆಯರ ವಿಭಾಗ: ನಿಖಾತ್ ಝರೀನಾ-50 ಕೆಜಿ, ಪ್ರೀತಿ ಪವಾರ್-54ಕೆಜಿ, ಜಾಸ್ಮಿನ್ ಲಾಂಬೊರಿಯ-57ಕೆಜಿ, ಲವ್ಲೀನಾ ಬೊರ್ಗೊಹೈನ್-75ಕೆಜಿ

ಕುದುರೆ ಸವಾರಿ(1)

ಅನುಷ್ ಅಗರ್ವಾಲ್-ಡ್ರೆಸ್ಸೆಜ್

ಗಾಲ್ಫ್(4)

ಪುರುಷರ ವಿಭಾಗ: ಗಗನ್ಜೀತ್ ಭುಲ್ಲರ್, ಶುಭಾಂಕರ್ ಶರ್ಮಾ

ಮಹಿಳೆಯರ ವಿಭಾಗ: ಅದಿತಿ ಅಶೋಕ್, ದಿಕ್ಷಾ ದಾಗರ್

ಹಾಕಿ(16+3)

ಪುರುಷರ ವಿಭಾಗ: ಪಿ.ಆರ್. ಶ್ರೀಜೇಶ್, ಜರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್ಪ್ರೀತ್ ಸಿಂಗ್, ಸುಮಿತ್, ಸಂಜಯ್, ರಾಜ್ಕುಮಾರ್ ಪಾಲ್, ಶಂಶೇರ್ ಸಿಂಗ್, ಮನ್ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್ದೀಪ್ ಸಿಂಗ್, ಗುರ್ಜಂತ್ ಸಿಂಗ್.

ಮೀಸಲು ಆಟಗಾರರು: ನೀಲಕಂಠ ಶರ್ಮಾ, ಜುಗ್ರಾಜ್ ಸಿಂಗ್, ಕೃಷ್ಣ ಬಹದ್ದೂರ್ ಪಾಠಕ್.

ಜುಡೊ(1)

ತುಲಿಕಾ ಮಾನ್-ಮಹಿಳೆಯರ +78ಕೆಜಿ

ರೋವಿಂಗ್(1)

ಬಾಲರಾಜ್ ಪನ್ವಾರ್-ಪುರುಷರ ಸಿಂಗಲ್ ಸ್ಕಲ್

ಸೇಲಿಂಗ್(2)

ಪುರುಷರ ವಿಭಾಗ: ವಿಷ್ಣು ಸರವಣನ್-ಪುರುಷರ ಡಿಂಘಿ

ಮಹಿಳೆಯರ ವಿಭಾಗ: ನೇತ್ರಾ ಕುಮನನ್-ಮಹಿಳೆಯರ ಡಿಂಘಿ

ಶೂಟಿಂಗ್(21)

ಪುರುಷರ ವಿಭಾಗ: ಸಂದೀಪ್ ಸಿಂಗ್, ಅರ್ಜುನ್ ಬಬುಟಾ(10 ಮೀ.ಏರ್ ರೈಫಲ್)

ಐಶ್ವರ್ಯ ತೋಮರ್, ಸ್ವಪ್ನಿಲ್ ಕುಸಾಲೆ(50 ಮೀ. ರೈಫಲ್3 ಪೊಸಿಶನ್ಸ್)

ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ(10 ಮೀ.ಏರ್ ಪಿಸ್ತೂಲ್)

ಅನಿಶ್ ಭಾನ್ವಾಲ್, ವಿಜಯವೀರ್ ಸಿಧು(25 ಮೀ. ಆರ್ಎಫ್ಪಿ)

ಪೃಥ್ವಿರಾಜ್ ತೊಂಡೈಮಾನ್-ಪುರುಷರ ಟ್ರ್ಯಾಪ್

ಅನಂತಜೀತ್ ಸಿಂಗ್-ಪುರುಷರ ಸ್ಕೀಟ್, ಸ್ಕೀಟ್ ಮಿಕ್ಸೆಡ್ ಟೀಮ್

ಮಹಿಳೆಯರ ವಿಭಾಗ

ಎಲವೆನಿಲ್ ವಲರಿವನ್, ರಮಿಟಾ(10 ಮೀ. ಏರ್ ರೈಫಲ್)

ಸಿಫ್ಟ್ ಕೌರ್ ಸಮ್ರಾ, ಅಂಜುಮ್ ಮೌದ್ಗಿಲ್(50 ಮೀ.ರೈಫಲ್ 3 ಪೊಸಿಶನ್ಸ್)

ರಿದಮ್ ಸಾಂಗ್ವಾನ್(10 ಮೀ. ಏರ್ ಪಿಸ್ತೂಲ್)

ಮನು ಭಾಕರ್(10 ಮೀ.ಏರ್ ಪಿಸ್ತೂಲ್, 25 ಮೀ. ಪಿಸ್ತೂಲ್)

ಇಶಾ ಸಿಂಗ್(25 ಮೀ. ಪಿಸ್ತೂಲ್)

ರಾಜೇಶ್ವರಿ ಕುಮಾರಿ, ಶ್ರೇಯಸಿ ಸಿಂಗ್-ಮಹಿಳೆಯರ ಟ್ರ್ಯಾಪ್

ಮಹೇಶ್ವರಿ ಚೌಹಾಣ್-ಮಹಿಳೆಯರ ಸ್ಕೀಟ್, ಸ್ಕೀಟ್ ಮಿಕ್ಸೆಡ್ ಟೀಮ್

ರೈಝಾ ಧಿಲ್ಲೋನ್-ಮಹಿಳೆಯರ ಸ್ಕೀಟ್

ಸ್ವಿಮ್ಮಿಂಗ್(2)

ಪುರುಷರ ವಿಭಾಗ: ಶ್ರೀಹರಿ ನಟರಾಜ್-ಪುರುಷರ 100 ಮೀ.ಬ್ಯಾಕ್ಸ್ಟ್ರೋಕ್

ಮಹಿಳೆಯರ ವಿಭಾಗ: ಧಿನಿಧಿ ದೇಸಿಂಘು-ಮಹಿಳೆಯರ 200 ಮೀ. ಫ್ರೀಸ್ಟೈಲ್

ಟೇಬಲ್ ಟೆನಿಸ್(6+2)

ಪುರುಷರ ವಿಭಾಗ: ಶರತ್ ಕಮಲ್, ಹರ್ಮೀತ್ ದೇಸಾಯಿ, ಮಾನವ್ ಥಕ್ಕರ್

ಮಹಿಳೆಯರ ವಿಭಾಗ: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ, ಅರ್ಚನಾ ಕಾಮತ್

ಟೇಬಲ್ ಟೆನಿಸ್ ಮೀಸಲು ಆಟಗಾರರು: ಸತ್ಯನ್ ಜಿ., ಅಹಿಕಾ ಮುಖರ್ಜಿ

ಟೆನಿಸ್(3)

ರೋಹನ್ ಬೋಪಣ್ಣ, ಎನ್.ಶ್ರೀರಾಮ್ ಬಾಲಾಜಿ-ಪುರುಷರ ಡಬಲ್ಸ್

ಸುಮಿತ್ ನಾಗಲ್-ಪುರುಷರ ಸಿಂಗಲ್ಸ್

ವೇಟ್ಲಿಫ್ಟಿಂಗ್(1)

ಮೀರಾಬಾಯಿ ಚಾನು-ಮಹಿಳೆಯರ 49 ಕೆಜಿ

ಕುಸ್ತಿ(6)

ಪುರುಷರ ವಿಭಾಗ: ಅಮನ್ ಸೆಹ್ರಾವತ್ -ಪುರುಷರ 57 ಕೆಜಿ

ಮಹಿಳೆಯರ ವಿಭಾಗ: ವಿನೇಶ್ ಫೋಗಟ್-ಮಹಿಳೆಯರ 50 ಕೆಜಿ

ಅಂತಿಮ್ ಪಾಂಘಾಲ್-ಮಹಿಳೆಯರ 53 ಕೆಜಿ

ಅನ್ಶು ಮಲಿಕ್-ಮಹಿಳೆಯರ 57 ಕೆಜಿ

ನಿಶಾ ದಹಿಯಾ-ಮಹಿಳೆಯರ 68 ಕೆಜಿ

ರೀತಿಕಾ ಹೂಡಾ-ಮಹಿಳೆಯರ 76 ಕೆಜಿ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News