ಮುಂದಿನ ವರ್ಷದ ಟ್ವೆಂಟಿ-20 ವಿಶ್ವಕಪ್ ಪಂದ್ಯಗಳಿಗೆ ಡಲ್ಲಾಸ್, ಫ್ಲೋರಿಡಾ, ನ್ಯೂಯಾರ್ಕ್ ಆತಿಥ್ಯ

Update: 2023-09-20 15:42 GMT

Photo: Twitter/saifahmed75

ಹೊಸದಿಲ್ಲಿ : ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನ ಜಂಟಿ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯುವ ಟ್ವೆಂಟಿ-20 ವಿಶ್ವಕಪ್ ಪಂದ್ಯಗಳಿಗೆ ಡಲ್ಲಾಸ್, ಫ್ಲೋರಿಡಾ ಹಾಗೂ ನ್ಯೂಯಾರ್ಕ್ ನಗರಗಳು ಆತಿಥ್ಯವಹಿಸಲಿವೆ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಬುಧವಾರ ಪ್ರಕಟಿಸಿದೆ.

2024ರ ಆವೃತ್ತಿಯ ವಿಶ್ವಕಪ್ ಅತಿದೊಡ್ಡದಾಗಿದ್ದು, ಒಟ್ಟು 20 ತಂಡಗಳು ಭಾಗವಹಿಸಲಿವೆ.

ಟೂರ್ನಮೆಂಟ್‌ನ ಸಿದ್ಧತೆಗಳ ಭಾಗವಾಗಿ ನ್ಯೂಯಾರ್ಕ್‌ನ ಐಸೆನ್‌ಹೋವರ್‌ಪಾರ್ಕ್‌ನಲ್ಲಿ 34,000 ಆಸನಗಳ ಸಾಮರ್ಥ್ಯದ ಹೊಸ ಮಾಡ್ಯುಲರ್ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು. ನ್ಯೂಯಾರ್ಕ್‌ನ ಹೊಸ ಸ್ಟೇಡಿಯಮ್‌ನ ಜೊತೆಗೆ ಗ್ರ್ಯಾಂಡ್ ಪ್ರೈರೀ, ಡಲ್ಲಾಸ್ ಹಾಗೂ ಫ್ಲೋರಿಡಾದ ಬ್ರೋವರ್ಡ್ ಕೌಂಟಿಯಲ್ಲಿರುವ ತಾಣಗಳನ್ನು ವಿಸ್ತರಿಸಲಾಗುತ್ತದೆ ಎಂದು ಐಸಿಸಿ ದೃಢಪಡಿಸಿದೆ.

ಅಮೆರಿಕವು ಕಾರ್ಯತಂತ್ರದ ಪ್ರಮುಖ ಮಾರುಕಟ್ಟೆಯಾಗಿದೆ. ಈ ಸ್ಥಳಗಳು ವಿಶ್ವದ ಅತಿದೊಡ್ಡ ಕ್ರೀಡಾ ಮಾರುಕಟ್ಟೆಯಲ್ಲಿ ನಮಗೆ ಅತ್ಯುತ್ತಮ ಅವಕಾಶ ನೀಡುತ್ತವೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡಿಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News