ಪಾಕಿಸ್ತಾನದ ಆಟಗಾರರಿಂದ ಗೌರವ ರಕ್ಷೆ ಸ್ವೀಕರಿಸಿದ ಡೇವಿಡ್ ವಾರ್ನರ್

Update: 2024-01-03 16:41 GMT

 ಡೇವಿಡ್ ವಾರ್ನರ್ | Photo: X \ @_FaridKhan

ಸಿಡ್ನಿ: ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನವಾದ ಬುಧವಾರ ಆಸ್ಟ್ರೇಲಿಯ ಬ್ಯಾಟರ್ ಡೇವಿಡ್ ವಾರ್ನರ್ ಬ್ಯಾಟಿಂಗ್ ಗೆ ಆಗಮಿಸಿದಾಗ ಪಾಕಿಸ್ತಾನದ ಆಟಗಾರರಿಂದ ಗೌರವ ರಕ್ಷೆ ಸ್ವೀಕರಿಸಿದರು.

ವಾರ್ನರ್ ತನ್ನ ತವರುಪಟ್ಟಣ ಸಿಡ್ನಿಯಲ್ಲಿರುವ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ವಿದಾಯದ ಟೆಸ್ಟ್ ಪಂದ್ಯವನ್ನಾಡಿದ ಸಂದರ್ಭ ಈ ವಿಶೇಷ ದೃಶ್ಯ ಕಂಡುಬಂತು.

ಎಡಗೈ ಬ್ಯಾಟರ್ ವಾರ್ನರ್ 44.58ರ ಸರಾಸರಿಯಲ್ಲಿ 111 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 8,695 ರನ್ ಗಳಿಸಿದ್ದಾರೆ. ಇದರಲ್ಲಿ 26 ಶತಕಗಳು ಸೇರಿವೆ.

2019ರಲ್ಲಿ ಪಾಕಿಸ್ತಾನದ ವಿರುದ್ಧವೇ ವಾರ್ನರ್ ತನ್ನ ಗರಿಷ್ಠ ವೈಯಕ್ತಿಕ ಸ್ಕೋರ್(ಔಟಾಗದೆ 335)ಗಳಿಸಿದ್ದರು. ಸ್ಥಿರ ಪ್ರದರ್ಶನದ ಮೂಲಕ ವಾರ್ನರ್ 12 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯದ ಪ್ರಮುಖ ಆಟಗಾರನಾಗಿದ್ದಾರೆ.

ಪ್ರಸ್ತುತ ಟೆಸ್ಟ್ ಸರಣಿಯಲ್ಲಿ ವಾರ್ನರ್ 2 ಪಂದ್ಯಗಳಲ್ಲಿ 208 ರನ್ ಗಳಿಸಿ ತನ್ನ ಶ್ರೇಷ್ಠ ಸರಾಸರಿ(52 ರನ್ )ಉಳಿಸಿಕೊಂಡಿದ್ದಾರೆ.

ವಾರ್ನರ್ ಸರಣಿಯಲ್ಲಿ ಅಗ್ರ ಸ್ಕೋರರ್ ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, 290 ರನ್ ಗಳಿಸಿರುವ ಮಿಚೆಲ್ ಮಾರ್ಷ್ ಮೊದಲನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News