ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಗಳಿಸಿದ ಭಾರತದ ಯುವ ಬ್ಯಾಟರ್ ಜೈಸ್ವಾಲ್

Update: 2024-10-25 21:24 IST
ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಗಳಿಸಿದ ಭಾರತದ ಯುವ ಬ್ಯಾಟರ್ ಜೈಸ್ವಾಲ್

ಯಶಸ್ವಿ ಜೈಸ್ವಾಲ್ | PC : PTI 

  • whatsapp icon

ಪುಣೆ : ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವಿನ ದ್ವಿತೀಯ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ ಯಶಸ್ವಿ ಜೈಸ್ವಾಲ್ ಕ್ಯಾಲೆಂಡರ್ ವರ್ಷದಲ್ಲಿ 1,000 ಟೆಸ್ಟ್ ರನ್ ಗಳಿಸಿದ ಕಿರಿಯ ವಯಸ್ಸಿನ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ತನ್ನ 22ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವ ಆರಂಭಿಕ ಬ್ಯಾಟರ್ ಜೈಸ್ವಾಲ್ ಅವರು ದಿಲೀಪ್ ವೆಂಗ್‌ಸರ್ಕಾರ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ವೆಂಗ್‌ಸರ್ಕಾರ್ 1979ರಲ್ಲಿ ತನ್ನ 23ನೇ ವಯಸ್ಸಿನಲ್ಲಿ ಸಾವಿರ ರನ್ ಪೂರೈಸಿದ್ದರು.

ಮುಂಬೈ ಆಟಗಾರ ಜೈಸ್ವಾಲ್ 2024ರಲ್ಲಿ ಈ ತನಕ 10 ಪಂದ್ಯಗಳಲ್ಲಿ 59.23ರ ಸರಾಸರಿಯಲ್ಲಿ 1,007 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ ಆರು ಅರ್ಧಶತಕಗಳಿವೆ. ಪುಣೆ ಟೆಸ್ಟ್ ಸೇರಿದಂತೆ ಈ ವರ್ಷ ಇನ್ನೂ ಆರು ಟೆಸ್ಟ್ ಪಂದ್ಯಗಳು ನಡೆಯುತ್ತವೆ. ಜೈಸ್ವಾಲ್ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಟೆಸ್ಟ್ ರನ್ ಗಳಿಸಿದ ಭಾರತದ ಆಟಗಾರನೆಂಬ ದಾಖಲೆ ನಿರ್ಮಿಸುವ ವಿಶ್ವಾಸದಲ್ಲಿದ್ದಾರೆ.

ಸಚಿನ್ ತೆಂಡುಲ್ಕರ್ 2010ರಲ್ಲಿ 14 ಪಂದ್ಯಗಳಲ್ಲಿ 1,562 ರನ್ ಗಳಿಸಿದ್ದರು.

ಭಾರತೀಯ ಓಪನರ್‌ಗಳ ಪೈಕಿ ವೀರೇಂದ್ರ ಸೆಹ್ವಾಗ್ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಸೆಹ್ವಾಗ್ 2008ರಲ್ಲಿ 14 ಪಂದ್ಯಗಳಲ್ಲಿ 1,462 ರನ್ ಗಳಿಸಿದ್ದರು.

2024ರಲ್ಲಿ ಗರಿಷ್ಠ ಟೆಸ್ಟ್ ರನ್ ಸ್ಕೋರರ್‌ ಗಳ ಪಟ್ಟಿಯಲ್ಲಿ ಜೈಸ್ವಾಲ್ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್ ಈ ವರ್ಷ 14 ಪಂದ್ಯಗಳಲ್ಲಿ 1,305 ರನ್ ಗಳಿಸಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News