ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ದಿನೇಶ್ ಕಾರ್ತಿಕ್ ನೇಮಕ

Update: 2024-07-01 05:59 GMT

Photo:X/@RCBTweets

ಬೆಂಗಳೂರು: ಮಾಜಿ ಭಾರತೀಯ ಆಟಗಾರ ದಿನೇಶ್ ಕಾರ್ತಿಕ್ ಅವರನ್ನು ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ನೇಮಿಸಲಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಆರ್‌ಸಿಬಿ, "ಆರ್‌ಸಿಬಿ ಹೊಂದಿರುವ ಅತ್ಯುತ್ತಮ ಬ್ಯಾಟಿಂಗ್ ಕ್ರಮಾಂಕಕ್ಕೆ ದಿನೇಶ್ ಕಾರ್ತಿಕ್ ತಮ್ಮ ಅನುಭವ ಹಾಗೂ ತಂಡದ ತಾತ್ವಿಕತೆಯ ಬಗೆಗಿನ ಆಳವಾದ ತಿಳಿವಳಿಕೆಯಿಂದ ತಂಡಕ್ಕೆ ಆಸ್ತಿಯಾಗಲಿದ್ದಾರೆ" ಎಂದು ಹೇಳಿದೆ.

"ಕಾರ್ತಿಕ್ ಮೊದಲಿಗೆ 2015 ಹಾಗೂ 2016ರಲ್ಲಿ ಆರ್‌ಸಿಬಿ ತಂಡದ ಪರವಾಗಿ ಆಡಿದ್ದರು.‌ 2024ರ ಋತುವಿನ 15 ಪಂದ್ಯಗಳಲ್ಲಿ 187.36 ಸ್ಟ್ರೈಕ್ ರೇಟ್‌ನೊಂದಿಗೆ ಅವರು 326 ರನ್ ಗಳಿಸಿದ್ದರು. ಆದರೆ, ಅವರ ಪ್ರಭಾವವು ಅವರು ಗಳಿಸಿದ ರನ್‌ಗಳ ಸಂಖ್ಯೆಯನ್ನೂ ಮೀರಿದೆ" ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ತಮ್ಮ ನೇಮಕದ ಕುರಿತು ಪ್ರತಿಕ್ರಿಯಿಸಿರುವ ದಿನೇಶ್ ಕಾರ್ತಿಕ್, "ವೃತ್ತಿಪರ ಹಂತದಲ್ಲಿ ತರಬೇತಿ ನೀಡುವುದು ನನ್ನ ಪಾಲಿಗೆ ಅದ್ಭುತ ರೋಮಾಂಚನವಾಗಿದೆ. ನನ್ನ ವೃತ್ತಿಜೀವನದಲ್ಲಿ ಇದು ಹೊಸ ಅಧ್ಯಾಯವಾಗಿದೆ. ನಾನು ಈ ಪಾತ್ರದ ಬಗ್ಗೆ ನಿಜಕ್ಕೂ ಕಾತುರನಾಗಿದ್ದೇನೆ. ನನ್ನ ಅನುಭವದ ಆಳವು ತಂಡದ ಬೆಳವಣಿಗೆಗೆ ಕೊಡುಗೆ ನೀಡಿ, ಮೌಲ್ಯವರ್ಧನೆಯನ್ನು ತರಬಹುದು ಎಂದು ಆಶಿಸುತ್ತೇನೆ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News