ಅಗೌರವ ತೋರಿದ ಟೆನಿಸ್ ಅಭಿಮಾನಿಗಳ ವಿರುದ್ಧ ಜೊಕೊವಿಕ್ ಆಕ್ರೋಶ

Update: 2024-07-09 16:41 GMT

ಜೊಕೊವಿಕ್ | PTI 

ಲಂಡನ್: ರೂನ್ ವಿರುದ್ಧ ಆಡಿರುವ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದುದ್ದಕ್ಕೂ ನಿರಂತರವಾಗಿ ರೂನ್ ರೂನ್ ಎಂದು ಬೊಬ್ಬಿಡುತ್ತಿದ್ದ ಪ್ರೇಕ್ಷಕರ ಗುಂಪಿಗೆ ಜೊಕೊವಿಕ್ ಛೀಮಾರಿ ಹಾಕಿದರು.

ಪ್ರೇಕ್ಷಕರ ವರ್ತನೆಯನ್ನು ಅಗೌರವ ಎಂದು ಸರ್ಬಿಯ ಆಟಗಾರ ಕರೆದಿದ್ದಾರೆ.

ಗೌರವದಿಂದ ಇಂದು ರಾತ್ರಿ ಇಲ್ಲಿ ಉಳಿದುಕೊಂಡಿರುವ ಎಲ್ಲ ಅಭಿಮಾನಿಗಳಿಗೆ ನಾನು ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುವೆ. ನಾನು ಇದನ್ನು ಪ್ರಶಂಸಿಸುತ್ತೇನೆ ಎಂದು ಜೊಕೊವಿಕ್ ಹೇಳಿದ್ದಾರೆ.

ಆಟಗಾರರನ್ನು ಅಗೌರವಿಸಲು ಬಂದಿದ್ದ ಎಲ್ಲರಿಗೂ ಶುಭ ರಾತ್ರಿ ಎಂದು ರೂನ್ ಎಂದು ಬೊಬ್ಬಿಡುತ್ತಾ ತನ್ನನ್ನು ಅಪಹಾಸ್ಯ ಮಾಡಿದ್ದ ಪ್ರೇಕ್ಷಕರನ್ನು ಉಲ್ಲೇಖಿಸಿ ಜೊಕೊವಿಕ್ ಹೇಳಿದ್ದಾರೆ.

ಕೆಲವು ಅಭಿಮಾನಿಗಳು ಬೂ ಬದಲಿಗೆ ರೂನ್ ಎಂದು ಕೂಗುತ್ತಿದ್ದರಲ್ಲ ಎಂದು ಟಿವಿ ಸಂದರ್ಶಕರೊಬ್ಬರು ಪ್ರಶ್ನಿಸಿದಾಗ, ಅವರು ಬೊಬ್ಬೆ ಹೊಡೆಯುತ್ತಿದ್ದರು. ನಾನು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅವರು ನನ್ನ ಎದುರಾಳಿ ರೂನ್ರನ್ನು ಹುರಿದುಂಬಿಸುತ್ತಿದ್ದರು ಎಂದು ನನಗೆ ತಿಳಿದಿದೆ. ನಾನು 20 ವರ್ಷಗಳಿಗೂ ಹೆಚ್ಚು ಸಮಯದಿಂದ ಲಂಡನ್ ಗೆ ಬರುತ್ತಿದ್ದೇನೆ. ನನಗೆ ಎಲ್ಲ ತಂತ್ರಗಳು ತಿಳಿದಿವೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದೂ ನನಗೆ ಗೊತ್ತಿದೆ. ಟಿಕೆಟ್ ಖರೀದಿಸಿ ನನ್ನ ಆಟ ನೋಡಲು ಬಂದಿರುವ ಗೌರವಾನ್ವಿತ ಪ್ರೇಕ್ಷಕರ ಮೇಲೆ ನನ್ನ ಗಮನ ಕೇಂದ್ರೀಕರಿಸುತ್ತೇನೆ. ಟೆನಿಸ್ ಅನ್ನು ಪ್ರೀಸುತ್ತೇನೆ ಹಾಗೂ ಆಟಗಾರರನ್ನು ಪ್ರಶಂಸಿಸುತ್ತೇನೆ ಎಂದು ಜೊಕೊವಿಕ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News