ಇಂಗ್ಲೆಂಡ್-ಆಸ್ಟ್ರೇಲಿಯ ಪಂದ್ಯಕ್ಕೆ ಮುನ್ನ ಭಾರತದ ರಾಷ್ಟ್ರಗೀತೆ!

Update: 2025-02-22 21:53 IST
ಇಂಗ್ಲೆಂಡ್-ಆಸ್ಟ್ರೇಲಿಯ ಪಂದ್ಯಕ್ಕೆ ಮುನ್ನ ಭಾರತದ ರಾಷ್ಟ್ರಗೀತೆ!

PC : X 

  • whatsapp icon

ಲಾಹೋರ್: ಲಾಹೋರ್‌ ನ ಗದ್ದಾಫಿ ಸ್ಟೇಡಿಯಮ್‌ನಲ್ಲಿ ಶನಿವಾರ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಮುನ್ನ ಪ್ರಮಾದವೊಂದು ನಡೆಯಿತು. ಪಂದ್ಯ ಆರಂಭಕ್ಕೆ ಮುನ್ನ ಉಭಯ ತಂಡಗಳ ರಾಷ್ಟ್ರಗೀತೆ ನುಡಿಸುವ ವೇಳೆ ತಪ್ಪಾಗಿ ಭಾರತದ ರಾಷ್ಟ್ರಗೀತೆಯನ್ನು ನುಡಿಸಲಾಯಿತು.

ಆಸ್ಟ್ರೇಲಿಯದ ರಾಷ್ಟ್ರಗೀತೆಯನ್ನು ಕೇಳುವ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಯ ಆಟಗಾರರು ಮತ್ತು ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ಭಾರತದ ರಾಷ್ಟ್ರಗೀತೆಯನ್ನು ಕೇಳಿ ವಿಚಲಿತರಾದರು. ತಪ್ಪನ್ನು ಅರಿತುಕೊಂಡ ಸಂಘಟಕರು ತಕ್ಷಣ ರಾಷ್ಟ್ರಗೀತೆಯನ್ನು ನಿಲ್ಲಿಸಿದರು.

ಈ ಘಟನೆಯು ತಕ್ಷಣ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು. ಅಭಿಮಾನಿಗಳು ಇದರ ತುಣುಕುಗಳನ್ನು ಹಂಚಿಕೊಂಡರು. ಇಂಥ ಉನ್ನತ ಮಟ್ಟದ ಐಸಿಸಿ ಪಂದ್ಯಾವಳಿಯಲ್ಲಿ ಈ ರೀತಿಯ ಮುಜುಗರ ತರುವ ತಪ್ಪು ಮಾಡಿರುವುದಕ್ಕಾಗಿ ಅವರು ಸಂಘಟಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಘಟನೆಯು ಅತ್ಯಂತ ವಿಚಿತ್ರವಾಗಿದೆ. ಯಾಕೆಂದರೆ, ಭಾರತವು ತನ್ನ ಯಾವುದೇ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಪಾಕಿಸ್ತಾನದಲ್ಲಿ ಆಡುವುದಿಲ್ಲ. ರಾಜಕೀಯ ಮತ್ತು ಭದ್ರತಾ ಕಾರಣಗಳಿಗಾಗಿ ಅದು ತನ್ನೆಲ್ಲಾ ಪಂದ್ಯಗಳನ್ನು ದುಬೈಯಲ್ಲಿ ಆಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News