2024ರಲ್ಲಿ ಟೆನಿಸ್‌ಗೆ ವಿದಾಯ: ರಫೆಲ್ ನಡಾಲ್ ಸ್ಪಷ್ಟನೆ

Update: 2023-12-08 16:35 GMT

Photo: PTI

ಮ್ಯಾಡ್ರಿಡ್ : 2024ರಲ್ಲಿ ಟೆನಿಸ್‌ಗೆ ವಿದಾಯ ಹೇಳುವ ಕುರಿತು ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಸ್ಪೇನ್ ಸೂಪರ್ ಸ್ಟಾರ್ ರಫೆಲ್ ನಡಾಲ್ ಸ್ಪಷ್ಟಪಡಿಸಿದ್ದಾರೆ.

22 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ನಡಾಲ್ ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಗಾಯದ ಸಮಸ್ಯೆಯಿಂದಲೂ ಅವರು ಹೊರತಾಗಿರಲಿಲ್ಲ. ಇದರಿಂದಾಗಿ 37 ವರ್ಷದ ನಡಾಲ್, ದೀರ್ಘ ಸಮಯದಿಂದ ಟೆನಿಸ್ ಅಂಗಣದಿಂದ ಹೊರಗುಳಿದಿದ್ದಾರೆ.

ಈ ಮಧ್ಯೆ ನಿವೃತ್ತಿ ಕುರಿತ ಪ್ರಶ್ನೆಗೆ, ಈಗಲೇ ನಿರ್ಧರಿಸುವುದು ಉಚಿತವಲ್ಲ ಎಂದು ನಡಾಲ್ ಹೇಳಿದ್ದಾರೆ.

ನಾನು ಈಗಲೇ ನಿವೃತ್ತಿ ನಿರ್ಧಾರ ಪ್ರಕಟಿಸಲು ಬಯಸುವುದಿಲ್ಲ. ಏಕೆಂದರೆ ಮುಂದೆ ಏನಾಗಬಹುದೆಂದು ಹೇಳಲು ಸಾಧ್ಯವಿಲ್ಲ. ನಾನೇ ನನಗೊಂದು ಅವಕಾಶ ನೀಡಬೇಕಿದೆ ಎಂದು ಹೇಳಿದ್ದಾರೆ.

ಈ ಹಿಂದೆಯೂ ಅನೇಕ ಬಾರಿ ಪುನರಾಗಮನ ಮಾಡಿದ್ಧೇನೆ. ದೈಹಿಕವಾಗಿ ಸಮರ್ಥವಾಗಿ ನನ್ನ ಆಟವನ್ನು ಆನಂದಿಸಲು ಆರಂಭಿಸಿದರೆ ನಾನು ಏಕೆ ಈಗಲೇ ನಿವೃತ್ತಿಗೆ ಕಾಲ ನಿಗದಿಪಡಿಸಲಿ? ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ನಡಾಲ್ ಹೇಳಿದ್ದಾರೆ.

ನಡಾಲ್ 11 ತಿಂಗಳ ಹಿಂದೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕೊನೆಯದಾಗಿ ಸ್ಪರ್ಧಿಸಿದ್ದರು. ಅಂದು ನಡಾಲ್‌ಗೆ ಎರಡನೇ ಸುತ್ತಿನಲ್ಲಿ ಸೋಲು ಎದುರಾಗಿತ್ತು. ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಡಾಲ್ ಆಡಲಿದ್ದಾರೆಯೇ ಎಂಬುದು ಕುತೂಹಲವೆನಿಸಿದೆ.

ಆಸ್ಟ್ರೇಲಿಯನ್ ಓಪನ್ ಪ್ರವೇಶ ಪಟ್ಟಿಯಲ್ಲಿ ನಡಾಲ್ ಹೆಸರು ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ. ಈ ಮಧ್ಯೆ ವಿಶ್ವ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ನಡಾಲ್ 664ನೇ ಸ್ಥಾನಕ್ಕೆ ಕುಸಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News