ಮೊದಲ ಟ್ವೆಂಟಿ-20: ನಿಧಾನಗತಿಯ ಬೌಲಿಂಗ್; ಭಾರತ, ವೆಸ್ಟ್‌ ಇಂಡೀಸ್‌ಗೆ ಐಸಿಸಿ ದಂಡ

Update: 2023-08-04 15:20 GMT

Photo: twitter/ICC

ಹೊಸದಿಲ್ಲಿ, ಆ.4: ಟ್ರಿನಿಡಾಡ್‌ನಲ್ಲಿ ಗುರುವಾರ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ಗಾಗಿ ಭಾರತ ಹಾಗೂ ವೆಸ್ಟ್‌ಇಂಡೀಸ್ ತಂಡಗಳಿಗೆ ಐಸಿಸಿ ದಂಡ ವಿಧಿಸಿದೆ.

ನಿಗದಿತ ಸಮಯದಲ್ಲಿ ಒಂದು ಓವರ್ ಕಡಿಮೆ ಬೌಲಿಂಗ್ ಮಾಡಿದ್ದ ಭಾರತಕ್ಕೆ ಪಂದ್ಯಶುಲ್ಕದಲ್ಲಿ ಶೇ.5ರಷ್ಟು ಹಾಗೂ 2 ಓವರ್ ಕಡಿಮೆ ಬೌಲಿಂಗ್ ಮಾಡಿದ್ದ ವೆಸ್ಟ್‌ಇಂಡೀಸ್‌ಗೆ ಪಂದ್ಯಶುಲ್ಕದಲ್ಲಿ ಶೇ.10ರಷ್ಟು ದಂಡ ವಿಧಿಸಲಾಗಿದೆ.

ಸಮಯವನ್ನು ಪರಿಗಣಿಸಿ ಐಸಿಸಿ ಎಲೈಟ್ ಪ್ಯಾನೆಲ್‌ನ ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ದಂಡ ವಿಧಿಸಿದರು. ಹಾರ್ದಿಕ್ ಪಾಂಡ್ಯ ಬಳಗ(ಭಾರತ)ಒಂದು ಓವರ್ ಹಾಗೂ ರೊವ್‌ಮನ್ ಪೊವೆಲ್ ಪಡೆ(ವೆಸ್ಟ್‌ಇಂಡೀಸ್)ಎರಡು ಓವರ್ ಕಡಿಮೆ ಎಸೆದಿರುವುದು ಕಂಡು ಬಂದಿದೆ. ಪಾಂಡ್ಯ ಹಾಗೂ ಪೊವೆಲ್ ತಮ್ಮ ತಪ್ಪನ್ನು ಒಪ್ಪಿಕೊಂಡು ದಂಡವನ್ನು ಸ್ವೀಕರಿಸಿದರು

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News