ಐಪಿಎಲ್ ಟೂರ್ನಿಯಿಂದ ಹೊರಗುಳಿದ ಗುಜರಾತ್ ಆಲ್ರೌಂಡರ್ ಗ್ಲೆನ್ ಫಿಲಿಪ್ಸ್

Update: 2025-04-12 21:38 IST
Glenn Phillips

ಗ್ಲೆನ್ ಫಿಲಿಪ್ಸ್ | PC : X \ @CricCrazyJohns

  • whatsapp icon

ಅಹ್ಮದಾಬಾದ್: ಸ್ನಾಯು ಸಂದು ನೋವಿನಿಂದ ಬಳಲುತ್ತಿರುವ ಗುಜರಾತ್ ಟೈಟಾನ್ಸ್ ಆಲ್ರೌಂಡರ್ ಗ್ಲೆನ್ ಫಿಲಿಪ್ಸ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಟೂರ್ನಿಯ ಇನ್ನುಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಫ್ರಾಂಚೈಸಿ ಶನಿವಾರ ಪ್ರಕಟಿಸಿದೆ.

ಎಪ್ರಿಲ್ 6ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಬದಲಿ ಅಟಗಾರನಾಗಿ ಮೈದಾನಕ್ಕಿಳಿದಿದ್ದ ಕಿವೀಸ್ ಆಲ್ರೌಂಡರ್ ಫಿಲಿಪ್ಸ್ ತೊಡೆಸಂದು ಗಾಯಕ್ಕೀಡಾಗಿದ್ದರು. ಅವರೀಗ ತವರಿಗೆ ಮರಳಿದ್ದಾರೆ ಎಂದು ಟೈಟಾನ್ಸ್ ತಂಡವು ಹೇಳಿಕೆಯಲ್ಲಿ ತಿಳಿಸಿದೆ.

ಫಿಲಿಪ್ಸ್ ಪ್ರಸಕ್ತ ಋತುವಿನಲ್ಲಿ ಗುಜರಾತ್ನ ಆಡುವ 11ರ ಬಳಗದ ಭಾಗವಾಗಿಲ್ಲದಿದ್ದರೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರು ಬದಲಿ ಫೀಲ್ಡರ್ ಆಗಿ ಆಡಿದ್ದರು.

ಎಸ್ಆರ್ಎಚ್ ಇನಿಂಗ್ಸ್ನ ಪವರ್ಪ್ಲೇನ ಕೊನೆಯ ಓವರ್ನಲ್ಲಿ ಫಿಲಿಪ್ಸ್ ಗಾಯಗೊಂಡಿದ್ದರು. ಇಶಾನ್ ಕಿಶನ್ ಬಾರಿಸಿದ ಚೆಂಡು ಬೌಂಡರಿಯತ್ತ ಸಾಗುತ್ತಿದ್ದಾಗ ಅದನ್ನು ತಡೆಯಲು ಮುಂದಾದ ಫಿಲಿಪ್ಸ್ ಮೈದಾನದಲ್ಲಿ ಬಿದ್ದು ಗಾಯಗೊಂಡರು. ಗುಜರಾತ್ ತಂಡದ ಇತರ ಆಟಗಾರರ ಬೆಂಬಲದಿಂದ ಫಿಲಿಪ್ಸ್ ಅವರು ಮೈದಾನವನ್ನು ತೊರೆದಿದ್ದರು.

28ರ ಹರೆಯದ ಫಿಲಿಪ್ಸ್ 2025ರ ಆವೃತ್ತಿಯ ಐಪಿಎಲ್ ನಲ್ಲಿ ಗುಜರಾತ್ ಪರ ಚೊಚ್ಚಲ ಪಂದ್ಯ ಆಡುವ ಮೊದಲೇ ಗಾಯಗೊಂಡಿದ್ದಾರೆ.

ಫಿಲಿಪ್ಸ್ ಸ್ವದೇಶಕ್ಕೆ ವಾಪಸಾಗಿರುವ ಗುಜರಾತ್ ಟೈಟಾನ್ಸ್ ತಂಡದ ಎರಡನೇ ಆಟಗಾರನಾಗಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಾಗಿಸೊ ರಬಾಡ ವೈಯಕ್ತಿಕ ಕಾರಣದಿಂದಾಗಿ ಸ್ವದೇಶಕ್ಕೆ ಮರಳಿದ್ದರು.

ನ್ಯೂಝಿಲ್ಯಾಂಡ್ನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಭಿಯಾನದ ವೇಳೆ ಅತ್ಯುತ್ತಮ ಫೀಲ್ಡಿಂಗ್, ಪವರ್ಫುಲ್ ಬ್ಯಾಟಿಂಗ್ ಸಾಮರ್ಥ್ಯದಿಂದ ಗಮನ ಸೆಳೆದಿದ್ದ ಫಿಲಿಪ್ಸ್ ಇದೀಗ ಗಾಯಗೊಂಡು ಭಾರೀ ನಿರಾಸೆಗೊಳಗಾದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News