ʼರಾಜಕಾರಣಿಯ ಪುತ್ರನಿಗೆ ಗದರಿದ್ದಕ್ಕೆ ಶಿಕ್ಷೆʼ: ಕ್ರಿಕೆಟ್‌ ತಂಡದ ನಾಯಕತ್ವ ತೊರೆಯಲು ಕಾರಣ ನೀಡಿ ಭಾವನಾತ್ಮಕ ಪೋಸ್ಟ್‌ ಮಾಡಿದ ಕ್ರಿಕೆಟಿಗ ಹನುಮ ವಿವಾರಿ

Update: 2024-02-26 12:36 GMT

ಹನುಮ ವಿಹಾರಿ (Photo: PTI)

ಹೊಸದಿಲ್ಲಿ: ಕ್ರಿಕೆಟಿಗ ಹನುಮ ವಿಹಾರಿ ತಾವು ಆಂಧ್ರ ಕ್ರಿಕೆಟ್‌ ತಂಡದ ನಾಯಕತ್ವವನ್ನು ತೊರೆಯಲು ಕಾರಣವೇನೆಂಬುದನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ.

ಕಳೆದ ತಿಂಗಳು ರಣಜಿ ಪಂದ್ಯದ ನಡುವೆಯೇ ಆಂದ್ರ ತಂಡದ ನಾಯಕತ್ವ ತೊರೆದು ಹನುಮ ವಿಹಾರಿ ಅಚ್ಚರಿ ಮೂಡಿಸಿದ್ದರು. “ವೈಯಕ್ತಿಕ ಕಾರಣಗಳಿಂದಾಗಿ" ಅವರು ನಾಯಕ ಸ್ಥಾನದಿಂದ ಕೆಳಗಿಳಿದಿದ್ದರು ಎಂದು ಆಗ ತಿಳಿಯಲಾಗಿತ್ತು.

ಕ್ವಾರ್ಟರ್‌ ಫೈನಲ್‌ನಲ್ಲಿ ಆಂಧ್ರ ತಂಡವು ಮಧ್ಯ ಪ್ರದೇಶ ತಂಡದೆದುರು ಸೋಲುಂಡು ರಣಜಿ ಪಂದ್ಯಾವಳಿಯಿಂದ ಹೊರಬಿದ್ದ ನಂತರ, ಹನುಮ ವಿಹಾರಿ ಅವರು ಸಾಮಾಜಿಕ ಜಾಲತಾಣ ಪೋಸ್ಟ್‌ ಮೂಲಕ ತಮ್ಮನ್ನು ನಾಯಕ ಸ್ಥಾನದಿಂದ ರಾಜೀನಾಮೆ ನೀಡಲು ಆಂಧ್ರ ಕ್ರಿಕೆಟ್‌ ಅಸೋಸಿಯೇಶನ್‌ ಹೇಗೆ ಬಲವಂತಪಡಿಸಿತ್ತು ಎಂಬುದನ್ನು ವಿವರಿಸಿದ್ದಾರೆ.

ಈ ಋತುವಿನಲ್ಲಿ ಆಂಧ್ರದ ಮೊದಲ ಪಂದ್ಯದಲ್ಲಿ ರಾಜಕಾರಣಿಯ ಪುತ್ರನಾಗಿರುವ ಆಟಗಾರನನ್ನು ತಾನು ಗದರಿದ್ದಕ್ಕೆ ಹೀಗೆ ಮಾಡಲಾಯಿತು ಎಂದು ವಿಹಾರಿ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರಲ್ಲದೆ ತಾವು ಇನ್ನು ಯಾವತ್ತೂ ಆಂಧ್ರ ತಂಡದ ಪರ ಆಡುವುದಿಲ್ಲ ಎಂದಿದ್ದಾರೆ.

ಅವರ ಪೋಸ್ಟ್‌ ಹೀಗಿದೆ:

“ನಾವು ಕೊನೆಯ ತನಕ ಹೋರಾಡಿದೆವು, ಆದರೆ ಸಾಧ್ಯವಾಗಲಿಲ್ಲ. ನಾನು ಹೇಳಬಯಸುವ ಕೆಲ ಸತ್ಯಗಳ ಕುರಿತಾದ ಪೋಸ್ಟ್‌ ಇದು. ಬಂಗಾಳ ವಿರುದ್ಧದ ಮೊದಲ ಪಂದ್ಯದಲ್ಲಿ ನಾನು ನಾಯಕನಾಗಿದ್ದೆ. ಆಗ ನಾನು 17ನೇ ಆಟಗಾರನೊಬ್ಬನನ್ನು ಗದರಿದ್ದೆ ಮತ್ತು ಆತ ತನ್ನ ತಂದೆಗೆ (ರಾಜಕಾರಣಿ) ದೂರಿದ್ದರು. ಆತನ ತಂದೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಸೋಸಿಯೇಶನ್‌ಗೆ ಸೂಚಿಸಿದರು. ಕಳೆದ ಬಾರಿಯ ಫೈನಲಿಸ್ಟ್‌ ತಂಡ ಬಂಗಾಳದ 410 ರನ್‌ಗಳನ್ನು ನಾವು ಬೆಂಬತ್ತಿದರೂ ನನ್ನ ಯಾವುದೇ ತಪ್ಪಿಲ್ಲದೇ ಇದ್ದರೂ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಲಾಯಿತು. ನಾನು ವೈಯಕ್ತಿಕವಾಗಿ ಆಟಗಾರನಿಗೆ ಏನೂ ಹೇಳಿಲ್ಲ, ಆದರೆ ಅಸೋಸಿಯೇಶನ್‌ಗೆ ಕಳೆದ ವರ್ಷ ಬಹಳಷ್ಟು ಶ್ರಮ ಪಟ್ಟ ಹಾಗೂ ಕಳೆದ 7 ವರ್ಷಗಳಲ್ಲಿ 5 ಬಾರಿ ಆಂಧ್ರ ತಂಡವನ್ನು ನಾಕ್‌ ವೌಟ್‌ ಹಂತಕ್ಕೆ ಕೊಂಡೊಯ್ದ ಹಾಗೂ ಭಾರತಕ್ಕಾಗಿ 16 ಟೆಸ್ಟ್‌ ಪಂದ್ಯ ಆಡಿದ ಆಟಗಾರನಿಗಿಂತ ಅಸೋಸಿಯೇನ್‌ಗೆ ಆ ಆಟಗಾರ ಮುಖ್ಯವಾಯಿತು.

ನನಗೆ ಮುಜುಗರವಾಯಿತು, ಆದರೆ ನಾನು ಆಟವನ್ನು ಮತ್ತು ನನ್ನ ತಂಡವನ್ನು ಗೌರವಿಸುವುದರಿಂದ ಈ ಖತುವಿನಲ್ಲಿ ಆಡುವುದನ್ನು ಮುಂದುವರಿಸಿದೆ.

ದುಃಖಕರ ವಿಚಾರವೆಂದರೆ ಅಸೋಸಿಯೇಶನ್‌ ಹೇಳುವುದನ್ನು ಆಟಗಾರರು ಕೇಳಬೇಕಿದೆ ಹಾಗೂ ತನ್ನ ಕಾರಣ ಆಟಗಾರರಿದ್ದಾರೆ ಎಂದು ಅಸೋಸಿಯೇಶನ್‌ ನಂಬಿದೆ. ನನಗೆ ಅವಮಾನ ಮತ್ತು ಮುಜುಗರವಾಯಿತು ಆದರೆ ಇಲ್ಲಿಯ ತನಕ ಹೇಳಿಕೊಳ್ಳಲಿಲ್ಲ. ನಾನು ಆತ್ಮಗೌರವವನ್ನು ಕಳೆದುಕೊಂಡ ಆಂಧ್ರ ತಂಡ ಪರವಾಗಿ ಇನ್ನು ಯಾವತ್ತೂ ಆಡುವುದಿಲ್ಲ. ತಂಡವನ್ನು ಪ್ರೀತಿಸುತ್ತೇನೆ. ನಾವು ಪ್ರತಿ ಋತುವಿನಲ್ಲಿ ಬೆಳೆಯುವುದನ್ನು ನೋಡಿ ಖುಷಿಯಿದೆ, ಆದರೆ ನಾವು ಬೆಳೆಯುವುದು ಅಸೋಸಿಯೇಶನ್‌ಗೆ ಬೇಕಿಲ್ಲ.”

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News