ಸ್ವದೇಶಕ್ಕೆ ವಾಪಸಾದ ಗುಜರಾತ್ ತಂಡದ ವೇಗಿ ಕಾಗಿಸೊ ರಬಾಡ
Photo : AP
ಅಹ್ಮದಾಬಾದ್: ಕೆಲವು ವೈಯಕ್ತಿಕ ಕಾರಣದಿಂದಾಗಿ ಗುಜರಾತ್ ಟೈಟಾನ್ಸ್ ತಂಡದ ವೇಗದ ಬೌಲರ್ ಕಾಗಿಸೊ ರಬಾಡ ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಿಂದ ಸ್ವದೇಶಕ್ಕೆ ವಾಪಸಾಗಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಟಗಾರ ರಬಾಡ 2025ರ ಆವೃತ್ತಿಯ ಐಪಿಎಲ್ ನ ಮೊದಲೆರಡು ಪಂದ್ಯಗಳಲ್ಲಿ ಗುಜರಾತ್ ತಂಡವನ್ನು ಪ್ರತಿನಿಧಿಸಿದ್ದರು. ‘ಪ್ರಮುಖ ವೈಯಕ್ತಿಕ ವಿಚಾರಕ್ಕಾಗಿ ಕಾಗಿಸೊ ರಬಾಡ ಅವರು ದಕ್ಷಿಣ ಆಫ್ರಿಕಾಕ್ಕೆ ವಾಪಸಾಗಿದ್ದಾರೆ’ಎಂದು ಗುಜರಾತ್ ಟೈಟಾನ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಬುಧವಾರ RCB ವಿರುದ್ಧ ಗುಜರಾತ್ ತಂಡ ಗೆಲುವು ಸಾಧಿಸಿದ ಪಂದ್ಯದಲ್ಲಿ ರಬಾಡ ಆಡಿರಲಿಲ್ಲ. ಪಂಜಾಬ್ ಕಿಂಗ್ಸ್ ವಿರುದ್ಧ ಈ ವರ್ಷದ ಐಪಿಎಲ್ನ ಮೊದಲ ಪಂದ್ಯದಲ್ಲಿ 41 ರನ್ ಗೆ 1 ವಿಕೆಟ್ ಪಡೆದಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ತನ್ನ 2ನೇ ಪಂದ್ಯದಲ್ಲಿ 42 ರನ್ ನೀಡಿ 1 ವಿಕೆಟ್ ಪಡೆದಿದ್ದರು.
ರಬಾಡ ಅವರು 2025ರ ಐಪಿಎಲ್ ಆಟಗಾರರ ಹರಾಜಿನ ವೇಳೆ 10.75 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್ ತಂಡದ ಪಾಲಾಗಿದ್ದರು.