ಅ.24ರಿಂದ ಭಾರತ-ನ್ಯೂಝಿಲ್ಯಾಂಡ್ ಮಹಿಳಾ ಕ್ರಿಕೆಟ್ ತಂಡಗಳ ಏಕದಿನ ಸರಣಿ

Update: 2024-10-14 15:50 GMT

ಸಾಂದರ್ಭಿಕ ಚಿತ್ರ | PTI

ಹೊಸದಿಲ್ಲಿ : ದುಬೈನಲ್ಲಿ ಮಹಿಳೆಯರ ಟಿ20 ವಿಶ್ವಕಪ್ ಕೊನೆಗೊಂಡ ನಂತರ ಭಾರತೀಯ ಮಹಿಳೆಯರ ಕ್ರಿಕೆಟ್ ತಂಡವು ನ್ಯೂಝಿಲ್ಯಾಂಡ್ ವಿರುದ್ದ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 24, 27 ಹಾಗೂ 29 ರಂದು ಪಂದ್ಯಗಳು ನಡೆಯುತ್ತವೆ. ಉಭಯ ತಂಡಗಳು ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವು ಭಾರತವನ್ನು 58 ರನ್‌ಗಳಿಂದ ಮಣಿಸಿತ್ತು.

ಈ ಸರಣಿಯು ಐಸಿಸಿ ಮಹಿಳೆಯರ ಏಕದಿನ ಚಾಂಪಿಯನ್‌ಶಿಪ್ 2022-25ರ ಭಾಗವಾಗಿದೆ ಎಂದು ಬಿಸಿಸಿಐ ಸೋಮವಾರ ಪ್ರಕಟಿಸಿದೆ.

ಸದ್ಯ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಝಿಲ್ಯಾಂಡ್ 6ನೇ ಸ್ಥಾನದಲ್ಲಿದೆ. 18 ಏಕದಿನ ಪಂದ್ಯಗಳ ಪೈಕಿ ಕೇವಲ 8ರಲ್ಲಿ ಜಯ ಸಾಧಿಸಿದೆ.

2025ರ ಮಹಿಳೆಯರ ಏಕದಿನ ವಿಶ್ವಕಪ್ ಆತಿಥೇಯ ರಾಷ್ಟ್ರವಾಗಿರುವ ಟೀಮ್ ಇಂಡಿಯಾವು ಈ ಪಂದ್ಯಾವಳಿಗೆ ಸ್ವಯಂ ಆಗಿ ಅರ್ಹತೆ ಪಡೆಯಲಿದೆ. ಭಾರತ ಸೇರಿದಂತೆ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿರುವ ಅಗ್ರ 5 ತಂಡಗಳು ನೇರ ಅರ್ಹತೆ ಪಡೆಯುತ್ತವೆ. ಉಳಿದಿರುವ 4 ತಂಡಗಳು ವಿಶ್ವಕಪ್‌ನಲ್ಲಿ ತಮ್ಮ ಸ್ಥಾನ ಪಡೆಯಲು ಅರ್ಹತಾ ಪಂದ್ಯಗಳನ್ನು ಆಡಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News